ಡಾರ್ವಿನ್ನನ ವಿಕಾಸ ವಾದವೂ.. ವೇದಪುರಾಣಗಳೂ..
Team Udayavani, Feb 12, 2021, 3:40 AM IST
“ಮಂಗನಿಂದ ಮಾನವ’ ಇದು ನಾವು ಕಲಿತ ಮಾನವನ ವಿಕಾಸದ ಕುರಿತಾಗಿನ ವಿಜ್ಞಾನ ಪಾಠ. ಮಾನವನ ವಿಕಾಸ ಎಂದರೆ ತಟ್ಟನೆ ನೆನಪಾಗುವುದು ಚಾರ್ಲ್ಸ್ ಡಾರ್ವಿನ್. 1830-35ರಲ್ಲಿ ಲ್ಯಾಟಿನ್ ಅಮೆರಿಕದ ದ್ವೀಪವೊಂದರಲ್ಲಿ ಆತ ಗಮನಿಸಿದಂತೆ ಜೀವವು ನೀರಿನಲ್ಲಿ ವಿಕಸನಗೊಂಡಿದೆ. ಮೀನಿನಿಂದ ಹೂವುಗಳವರೆಗೆ, ಬಾಳೆಹಣ್ಣಿನಿಂದ ಪಕ್ಷಿಗಳವರೆಗೆ.. ಹೀಗೆ ಎಲ್ಲ ಜೀವಜಾತಿ ಪ್ರಭೇದಗಳು ಒಂದು ಸಾಮಾನ್ಯ ಪೂರ್ವಜರನ್ನು ಹೊಂದಿವೆ. ಅವು ತಮ್ಮ ವಂಶವಾಹಿಗಳು, ಆಕಾರ, ಗಾತ್ರ, ಆಹಾರ ಪದ್ಧತಿ, ಆಯ್ದ ಸಂಯೋಗವನ್ನು ಮರುಹೊಂದಿಸಲು ಪ್ರಾರಂಭಿಸಿದವು. ಕೊನೆಗೆ ಒಂದು ಹೊಸ ಸಂತತಿ ಯನ್ನೇ ಪಡೆದವು. ಹೀಗೆ ನಿರಂತರ ಹೆಣಗಾಟದ ಪರಿಣಾಮವಾಗಿ ಒಂದು ಭಿನ್ನ ಸಂತತಿಯಾಗಿ ಕಾಣಿಸಿಕೊಂಡವು. ಜೀವವು ನೀರಿನಲ್ಲಿ ವಿಕಸನ ಗೊಂಡಿತು. ಬರುತ್ತಾ ಉಭಯಚರಗಳಾಗಿ ಬದಲಾ ದವು. ಕೊನೆಗೆ ಭೂಮಿಯಲ್ಲಿ ಪ್ರಾಣಿಗಳಾಗಿ ವಿಕ ಸಿತಗೊಂಡವು. ಮಂಗನಿಂದ ಮನುಷ್ಯನಾಗಿ ಮತ್ತು ಈಗಿನ ಮನುಷ್ಯನಾಗಿ ಬದಲಾಗಲು 1,000 ವರ್ಷಗಳು ಬೇಕಾದವು.
ಸೃಷ್ಟಿವಾದ ಮತ್ತು ವಿಕಸನವಾದದ ಕುರಿತಂತೆ ಧಾರ್ಮಿಕ ವಿದ್ವಾಂಸರು ಮತ್ತು ಆಧುನಿಕ ವಿಜ್ಞಾನಿಗಳ ನಡುವೆ ಚರ್ಚೆಗಳು ನಡೆಯುತ್ತಲೇ ಇವೆ. ಮನುಷ್ಯನ ವಿಕಾಸ ಮಂಗಗಳಿಂದ ಎಂದು ವಿಜ್ಞಾನ ತಿಳಿಸಿದರೆ, ಮನುಷ್ಯ ದೈವ ಸೃಷ್ಟಿ ಎಂಬುದು ಧಾರ್ಮಿಕ ಬೋಧನೆ. ಆದರೆ ಭಾರತೀಯರು ಡಾರ್ವಿನ್ನನಿಗಿಂತ ಸಾವಿರಾರು ವರ್ಷಗಳ ಪೂರ್ವದಲ್ಲೇ ವಿಕಸನ ಸಿದ್ಧಾಂತವನ್ನು ವಿವರಿಸುತ್ತಿದ್ದರು. ವಿಷ್ಣುವಿನ ದಶಾವತಾರವು, ಮನುಷ್ಯ ಜೀವ ವಿಕಾಸ ಸಿದ್ಧಾಂತ ಮತ್ತು ಮನುಷ್ಯ ನಾಗರಿಕತೆಯ ಮುಂದುವರಿದ ಭಾಗವನ್ನೊಳಗೊಂಡ ಒಂದು ಅಸಾಮಾನ್ಯ ದಾಖಲೆಯಾಗಿದೆ.
ಭಾಗವತ ಪುರಾಣ, ಗರುಡ ಪುರಾಣ ಹೇಳುವಂತೆ, ಮಹಾವಿಷ್ಣು ದಶಾವತಾರಿ. ಹತ್ತು ಅವತಾರಗಳೂ ಒಂದಕ್ಕೊಂದು ಸಂಬಂಧಿಯಾಗಿವೆ. ಡಾರ್ವಿನ್ನನ ಸಿದ್ಧಾಂತವನ್ನು ಹೋಲುತ್ತದೆ. ಮೀನಿನ ರೂಪದ ಮತ್ಸé ಅವತಾರ, ಡಾರ್ವಿನ್ನನ ನೀರಿನಲ್ಲಿ ವಿಕಸನಗೊಂಡ ಜೀವಿಯನ್ನು ಪ್ರತಿನಿಧಿಸುತ್ತದೆ. ಕೂರ್ಮಾವತಾರ ಆಮೆಯ ರೂಪ, ಡಾರ್ವಿನ್ನನ ಉಭಯಚರಿ ಜೀವಿಯ ಸಿದ್ಧಾಂತ. ಹಂದಿ, ವರಾಹಾವತಾರ, ಇದು ಪೂರ್ತಿಯಾಗಿ ಭೂಮಿಯಲ್ಲಿ ಬದುಕುವ ಪ್ರಾಣಿ. ಉಭಯಚರಗಳು ಭೂಮಿಯಲ್ಲಿ ಬದುಕಲು ನಿರಂತರ ನಡೆಸಿದ ಹೋರಾಟದ ಕುರುಹಾಗಿದೆ. ನರಸಿಂಹಾವತಾರ; ಶರೀರ ಮನುಷ್ಯ ನಂತೆ, ಮುಖ ಮತ್ತು ಕೈ ಸಿಂಹದಂತೆ. ವಾಮನಾ ವತಾರ; ಕುಳ್ಳಗಿನ ಬುದ್ಧಿವಂತ ಮಾನವ. ಕಾಡಿನಲ್ಲಿ ವಾಸಿಸುವ ಕೊಡಲಿಯನ್ನು ಹೊಂದಿರುವ ಮನುಷ್ಯ. ರಾಮಾವತಾರ; ಪರಿಪೂರ್ಣ ಉತ್ತಮ ಮನುಷ್ಯ, ಕೃಷ್ಣಾವತಾರಿ; ಬುದ್ಧಿವಂತ, ಚಾಣಾಕ್ಷ ವ್ಯಕ್ತಿ, ಬುದ್ಧಾವ ತಾರ; ಸಂತೋಷದ ಅನ್ವೇಷಣೆ ಮತ್ತು ಕಲ್ಕಿ ಅವತಾರ; ಶಸ್ತ್ರಾಸ್ತ್ರಗಳನ್ನು ಹೊಂದಿರುವವ, ಮುಂದಿನ ಟೆಕ್ನೋ ಹೂಮನಾಯ್ಡ ಮ್ಯಾನ್.
ವಿಕಸನ ಸಿದ್ದಾಂತ – ಗೀತೆಯ ಸಂದೇಶ
ದೇಹಿನೋ ಅಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ತಥಾ ದೇಹಾಂತರಪ್ರಾಪ್ತಿಧೀìರಸ್ತತ್ರ ನ ಮುಹ್ಯತಿ | ಭ ಗೀ 2-13
ಜೀವಾತ್ಮನಿಗೆ ಈ ದೇಹದಲ್ಲಿ ಬಾಲ್ಯ, ಯೌವನ ಮತ್ತು ವೃದ್ಧಾವಸ್ಥೆಗಳು ಉಂಟಾಗುತ್ತವೆಯೋ ಅಂತೆಯೇ ಬೇರೆ ಶರೀರವೂ ಪ್ರಾಪ್ತವಾಗುತ್ತದೆ. ಆ ವಿಷಯದಲ್ಲಿ ಧೀರ ಪುರುಷನು ಮೋಹಿತನಾಗುವುದಿಲ್ಲ.
ವಾಸಾಂಸಿ ಜೀರ್ಣಾನಿ .. .. ತಥಾ ಶರೀರಾಣಿ .. .. ದೇಹೀ | 2-22. ಮನುಷ್ಯ ಹಳೆಯ ಬಟ್ಟೆಯನ್ನು ತ್ಯಜಿಸಿ ಹೊಸ ಬಟ್ಟೆಯನ್ನು ತೊಡುವಂತೆ, ಜೀವಾತ್ಮನೂ ಹಳೆಯ ಶರೀರವನ್ನು ಬಿಟ್ಟು ಹೊಸ ಶರೀರವನ್ನು ಪಡೆಯುತ್ತಾನೆ.
ಸಸ್ಯಗಳು, ಪ್ರಾಣಿಗಳು ಸೇರಿದಂತೆ ಪ್ರತಿಯೊಂದು ಜೀವಂತ ಘಟಕವು ಭೌತಿಕ ಶರೀರವನ್ನು ಆವರಿಸಿ ಕೊಂಡಿರುವ ಒಂದು ಆತ್ಮವೇ ಆಗಿದೆ. ಆತ್ಮವು ಒಂದು ದೇಹವನ್ನು ಸ್ವೀಕರಿಸಿ ಮತ್ತದನ್ನು ತ್ಯಜಿಸಿ ಮತ್ತೂಂದು ದೇಹವನ್ನು ಪ್ರವೇಶಿಸುತ್ತದೆ. ಎಲ್ಲ ಸಸ್ಯ ಪ್ರಾಣಿ ಪ್ರಪಂಚದ ವೈವಿಧ್ಯಮಯ ಪ್ರಭೇದಗಳನ್ನು ಸಂಚರಿಸಿ (ಸುಮಾರು 8 ಮಿಲಿಯ) ಕೊನೆಗೆ ಮನುಷ್ಯ ಶರೀರವನ್ನು ಹೊಂದುತ್ತದೆ. ಎಲ್ಲ ಶರೀರಗಳಿಗಿಂತ ಮನುಷ್ಯ ಶರೀರ ಅತೀ ಉತ್ಕೃಷ್ಟವಾಗಿದೆ. ಒಂದೊಮ್ಮೆ ನಾವು ಮನುಷ್ಯ ಶರೀರವನ್ನು ಪಡೆದು ನಮಗಿರುವ ಪ್ರಜ್ಞೆಯನ್ನು ದುರುಪಯೋಗಿಸಿದರೆ ನಾವು ಮತ್ತೂಮ್ಮೆ ಸಸ್ಯ ಅಥವಾ ಪ್ರಾಣಿ ಪ್ರಪಂಚಕ್ಕೆ ಬೀಳುತ್ತೇವೆ ಮತ್ತು ಪುನಃ ನಾವು ವಿಕಾಸ ಪ್ರಕ್ರಿಯೆಯಲ್ಲಿ ಚಲಿಸ ಬೇಕಾಗುತ್ತದೆ. ಒಂದು ದೇಹದಿಂದ ಇನ್ನೊಂದಕ್ಕೆ. ಸುಮಾರು 8 ಮಿಲಿಯ ಹುಟ್ಟು-ಅವನತಿಯ ಬಳಿಕ ನಾವು ಮನುಷ್ಯರಾಗಿ ಜನಿಸುತ್ತೇವೆ.
ಆತ್ಮನ ಆಕಾಶಃ ಸಂಭೂತಃ | ಆಕಾಶಾದ್ವಾಯುಃ | ವಾಯೋರಗ್ನಿಃ. . . . . ಏಷ ಪುರುಷೋನ್ನರಸಮಯಾಃ ಎನ್ನುತ್ತದೆ ತೈತ್ತರೀಯ ಉಪನಿಷತ್.
ಅದರರ್ಥ, ಆತ್ಮದಿಂದ ಸ್ಥಳ ಬಂದಿತು ಮತ್ತು ಇಲ್ಲಿ ಅವರು ಚೇತನದ ಬಗ್ಗೆ ಮಾತನಾಡುವುದಿಲ್ಲ. ಸ್ಥಳದಿಂದ ಅನಿಲ ಉಂಟಾಯಿತು. ಅನಿಲ ಅಗ್ನಿಯ ನ್ನುಂಟುಮಾಡಿತು. ಅಗ್ನಿಯಿಂದ ನೀರು. ನೀರಿನಿಂದ ಭೂಮಿ. ಭೂಮಿಯಲ್ಲಿ ಸಸ್ಯಗಳ ಉತ್ಪತ್ತಿಯಾಯಿತು. ಅವುಗಳಿಂದ ಆಹಾರ, ಆಹಾರದಿಂದ ಮಾನವ ಜನಿಸಿದ. ಇದು ಸೃಷ್ಟಿಕರ್ತನ ವ್ಯಾಖ್ಯಾನವಲ್ಲ. ಇದು ವಿಕಾಸದ ವಿವರಣೆ. ಎರಡು ಸಿದ್ಧಾಂತಗಳು ಸ್ಪಷ್ಟವಾಗಿ ಹೊರಹೊಮ್ಮಿವೆ. ಒಂದು, ವಸ್ತುಗಳು ಸೃಷ್ಟಿಯಾದವುಗಳಲ್ಲ. ಅವು ಉದ್ಭವಿಸಿದವುಗಳು. ಎರಡನೆಯದು, ಜೀವ ವಸ್ತುಗಳು ನಿರ್ಜೀವ ವಸ್ತುಗಳಿಂದ ಆವಿಷ್ಕರಿಸಿದವು. ಸಸ್ಯಗಳು ಭೂಮಿ ಯಿಂದ ಉದ್ಭವಿಸಿದವು. ಸಸ್ಯಗಳಿಂದ ಪ್ರಾಣಿಗಳ ಹುಟ್ಟು. ಇದರರ್ಥ ಒಂದು ಪ್ರಭೇದವು ಇನ್ನೊಂದು ವಿಭಿನ್ನವಾದ ಪ್ರಭೇದದ ಹುಟ್ಟಿಗೆ ಕಾರಣವಾಗುತ್ತದೆ. ಇದನ್ನೇ ಉತಾðಂತಿ ಎಂದು ಕೆಲವು ವಿಮರ್ಶಕರು ಕರೆಯುತ್ತಾರೆ. ಮರಾಠಿ, ಹಿಂದಿಯಲ್ಲಿ ಈ ಶಬ್ದದ ಅರ್ಥ ವಿಕಾಸ. ಈ ಪ್ರಕ್ರಿಯೆಯೇ ವಿಕಾಸ ಎಂದು ಉಪನಿಷತ್ ಭಾಷ್ಯಕಾರರ ಅಭಿಮತ. ಮಾನವ ಪ್ರಭೇದಕ್ಕೆ 6,000 ವರ್ಷಗಳ ಚರಿತ್ರೆಯೇ? ಅಲ್ಲ ಎನ್ನುತ್ತದೆ ವಿಜ್ಞಾನ ಮತ್ತು ವೇದಗಳು. ಮಿಲಿಯ ವರ್ಷಗಳಿಂದ ಮಾನವ ಅಸ್ತಿತ್ವದಲ್ಲಿದ್ದ ಎಂದು ವಿಜ್ಞಾನ ತಿಳಿಸಿದರೆ, 155.522 ಟ್ರಿಲಿಯನ್ ವರ್ಷಗಳು ಎಂದಿವೆ ವೇದಗಳು. ಸಸ್ಯ ಮತ್ತು ಪ್ರಾಣಿಗಳೂ ಮೋಕ್ಷ ಸಂಪಾದಿಸಬಹುದೆಂದಿದೆ. ಆದರೆ ಅವು ಮನುಷ್ಯಾವತಾರಕ್ಕೆ ಕಾಯಬೇಕಷ್ಟೆ.
ವಿಕಾಸದ ಕುರಿತಾದ ಭಾರತೀಯ ವಿಚಾರಧಾರೆ!
ವೈದಿಕ ಗ್ರಂಥಗಳು ವಿಕಸನ ಪ್ರಕ್ರಿಯೆಯನ್ನು ನಿರ್ದಿಷ್ಟಪಡಿಸಿವೆ. ಆದರೆ ವ್ಯಾಖ್ಯಾನವು ಡಾರ್ವಿನ್ನನಿಗಿಂತ ಭಿನ್ನವಾಗಿದೆ. ಒಂದು ದೇಹವು (ಸ್ಪಿಸಿಸ್) ಇನ್ನೊಂದಕ್ಕೆ ಬದಲಾಗುವ ಬದಲು, ಆತ್ಮವು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಪರಕಾಯ ಪ್ರವೇಶ ಮಾಡುತ್ತದೆ ಎಂದು ವೇದ ಜ್ಞಾನದ ಸಂದೇಶ. ಒಂದು ಜಾತಿ ಅಥವಾ ತಳಿಯಿಂದ ಇನ್ನೊಂದಕ್ಕೆ ಪ್ರಜ್ಞೆಯ ವಿಕಾಸವಿರುತ್ತದೆ. ಆತ್ಮದ ಒಲವುಗಳನ್ನು ಆಧರಿಸಿ ತನ್ನ ಬಯಕೆಗಳನ್ನು ಮತ್ತು ಅರ್ಹತೆಗಳನ್ನು ಪೂರೈಸಲು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಚಲಿಸುತ್ತದೆ. ಮನುಷ್ಯ ಶರೀರದಲ್ಲಿದ್ದಾಗ ಆತ್ಮಗಳ ವೈವಿಧ್ಯಮಯ ಮಾನಸಿಕತೆಗಳಿಂದಾಗಿ ಪ್ರಭೇದಗಳಲ್ಲಿ ವೈವಿಧ್ಯತೆ ಉಂಟಾಗುತ್ತದೆ. ಸೃಷ್ಟಿಯಲ್ಲಿ ಸುಮಾರು 8.4 ಮಿಲಿಯ ಜೀವರಾಶಿಗಳಿವೆ. ಜಲಜ ನವ ಲಕ್ಷಣಿ. ಸ್ಥಾವರ ಲಕ್ಷ ವಿಂಶತಿ. ಕ್ರಿಮಯೋ ರುದ್ರ ಸಂಖ್ಯಕ. ಪಕ್ಷಿಣಂ ದಶ ಲಕ್ಷಣಂ. ತ್ರಿಂಶಲ್ ಲಕ್ಷಣಿ ಪಶವಃ. ಚತುರ್ ಲಕ್ಷಣಿ ಮಾನವಃ ಎಂದು ಪದ್ಮಪುರಾಣದ ಉಲ್ಲೇಖ. 9 ಲಕ್ಷ ಜಲಚರ, 20 ಲಕ್ಷ ಸಸ್ಯ ಜಾತಿಗಳು, 11 ಲಕ್ಷ ಕ್ರಿಮಿಕೀಟಗಳು, 10 ಲಕ್ಷ ಪಕ್ಷಿಗಳು, 30 ಲಕ್ಷ ಪಶುಗಳು, 4 ಲಕ್ಷ ಮನುಷ್ಯರು.
– ಜಲಂಚಾರು ರಘುಪತಿ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
India Cricket: ಸೀಮಿತ ಓವರ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.