ಚಾರ್ಮಾಡಿ: ಪೊಲೀಸ್‌ ಚೆಕ್‌ಪೋಸ್ಟ್‌ಗೆ ಕಾಯಕಲ್ಪ

ಗಾಳಿ, ಮಳೆಗೆ ಶಾಶ್ವತ ಶೆಡ್‌ ನಿರ್ಮಾಣ; ಚಾರ್ಮಾಡಿ ಗ್ರಾ.ಪಂ. ನೆರವು

Team Udayavani, Jul 7, 2020, 5:40 AM IST

ಚಾರ್ಮಾಡಿ: ಪೊಲೀಸ್‌ ಚೆಕ್‌ಪೋಸ್ಟ್‌ಗೆ ಕಾಯಕಲ್ಪ

ಮುಂಡಾಜೆ: ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಮಂಗಳೂರು- ಮೂಡಿಗೆರೆ ರಾಜ್ಯ ಹೆದ್ದಾರಿಯ ಚಾರ್ಮಾಡಿ ಪೊಲೀಸ್‌ ಚೆಕ್‌ಪೋಸ್ಟ್‌ಗೆ ಕೊನೆಗೂ ಕಾಯಕಲ್ಪ ಸಿಕ್ಕಿದೆ.

ಈ ಹಿಂದೆ ಇಲ್ಲಿ ಮುಖ್ಯ ರಸ್ತೆಯಿಂದ ಸುಮಾರು 30 ಮೀ. ನಷ್ಟು ದೂರದಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ಇತ್ತು. ಅಷ್ಟು ದೂರದಿಂದ ಪೊಲೀಸ್‌ ಸಿಬಂದಿ ವಾಹನಗಳ ಬಳಿ ತಪಾಸಣೆಗೆ ಬರುವಾಗ ವಾಹನಗಳು ತೆರಳಿ ಆಗುತ್ತಿತ್ತು. ಸಿಬಂದಿ ರಸ್ತೆ ಬದಿಯಲ್ಲಿ ಬಿಸಿಲು, ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೆ ನಿಂತು ಅಥವಾ ಕುರ್ಚಿ ಹಾಕಿ ಕುಳಿತುಕೊಳ್ಳುವ ಪರಿಸ್ಥಿತಿ ಇತ್ತು. ಲಾಕ್‌ಡೌನ್‌ ಸಮಯದಲ್ಲಿ ವಾಹನ ತಪಾಸಣೆ ಮಾಡುವ ಸಿಬಂದಿಗೆ ಶೀಟ್‌ ಹಾಕಿ ತಾತ್ಕಾಲಿಕ ಶೆಡ್‌ ಒಂದನ್ನು ಚಾರ್ಮಾಡಿ ಗ್ರಾ.ಪಂ. ನಿರ್ಮಿಸಿ ಕೊಟ್ಟು ಸಹಕರಿಸಿತ್ತು.

ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುವ ಚಾರ್ಮಾಡಿ ಪೊಲೀಸ್‌ ಚೆಕ್‌ ಪೋಸ್ಟ್‌, ಇತ್ತೀಚೆಗೆ ನೂತನ ಪಿ.ಎಸ್‌. ಐ.ಯಾಗಿ ಅಧಿಕಾರ ಸ್ವೀಕರಿಸಿದ ಪವನ್‌ ಾಯಕ್‌ ನೇತೃತ್ವದಲ್ಲಿ ಕಾಯಕಲ್ಪ ಕಂಡಿದೆ. ರಸ್ತೆ ಸಮೀಪವೇ ನೂತನ ಚೆಕ್‌ಪೋಸ್ಟ್‌ ನಿರ್ಮಾಣ ಗೊಂಡಿದೆ. ಇದರಿಂದ ಪೊಲೀಸರು, ವಾಹನ ಚಾಲಕರು ಅಲ್ಲಿಂದಿಲ್ಲಿಗೆ ಅಲೆಯುವುದು ತಪ್ಪಿದೆ. ಅಲ್ಲದೆ ಈ ಹಿಂದಿನ ಚೆಕ್‌ ಪೋಸ್ಟ್‌ಗೆ ಫಲಕ ಕೂಡ ಇರಲಿಲ್ಲ. ಈಗ ದೂರದಿಂದಲೇ ಕಾಣುವಂತಹ ರಿಫ್ಲೆಕ್ಟರ್‌ ಉಳ್ಳ ಫಲಕವನ್ನು ಹಾಕಲಾಗಿದೆ. ಹಲವಾರು ಸಮಯದಿಂದ ತೊಂದರೆಗಳನ್ನು ಎದುರಿಸುತ್ತಿದ್ದ ಚಾರ್ಮಾಡಿ ಪೊಲೀಸ್‌ ಗೇಟ್‌ಗೆ ಕಾಯಕಲ್ಪ ದೊರಕಿರುವುದು ವಾಹನ ಸವಾರರು ಹಾಗೂ ಪೊಲೀಸ್‌ ಸಿಬಂದಿಗೆ ಅನುಕೂಲವಾಗಿದೆ.

ಗೇಟ್‌ ದುರಸ್ತಿ
ಚೆಕ್‌ಪೋಸ್ಟ್‌ಗೆ ಇರುವ ಗೇಟ್‌ ಮುರಿದು ಬಿದ್ದು ದುರಸ್ತಿ ಕಾಣದ ಕಾರಣ ಚೆಕ್‌ಪೋಸ್ಟ್‌ ಜಾಗದಲ್ಲಿ ಬಣ್ಣ, ಸ್ಟಿಕರ್‌ ಮಾಸಿದ್ದ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಳವಡಿಸಲಾಗಿತ್ತು. ಇದರಿಂದ ವಾಹನ ಸವಾರರಿಗೆ ಭಾರೀ ತೊಂದರೆ ಆಗುತ್ತಿತ್ತು. ಈಗ ಮುರಿದು ಬಿದ್ದ ಗೇಟ್‌ದುರಸ್ತಿ ಪಡಿಸಿ ಅಳವಡಿಸಲಾಗಿದೆ.

ಹೊಸ ಗೇಟ್‌ ನಿರ್ಮಾಣಕ್ಕೆ ಮನವಿ
ಹಿಂದಿನ ಇಲ್ಲಿಯ ವ್ಯವಸ್ಥೆಯಿಂದ ವಾಹನ ಸವಾರರು ಹಾಗೂ ಪೊಲೀಸರು ತೊಂದರೆ ಅನುಭವಿಸುವುದನ್ನು ಮನಗಂಡು, ನೂತನ ಪೊಲೀಸ್‌ ಚೆಕ್‌ಪೋಸ್ಟ್‌ ನಿರ್ಮಿಸುವುದರೊಂದಿಗೆ ಮುರಿದು ಬಿದ್ದಿದ್ದ ಗೇಟ್‌ನ್ನು ಅಳವಡಿಸಲಾಗಿದೆ. ಹೊಸ ಗೇಟ್‌ ನಿರ್ಮಿಸಲು ಮೇಲಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ.
– ಪವನ್‌ ನಾಯಕ್‌, ಪಿ.ಎಸ್‌.ಐ.,
ಧರ್ಮಸ್ಥಳ ಪೊಲೀಸ್‌ ಠಾಣೆ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

Gangolli

Puttur: ಗಾಯಾಳು ವಿದ್ಯಾರ್ಥಿನಿ ಸಾವು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.