ChatGPT : 17 ವೈದ್ಯರಿಗೆ ಸಾಧ್ಯವಾಗದ್ದನ್ನು ಸಾಧಿಸಿದ ಚಾಟ್ಜಿಪಿಟಿ!
Team Udayavani, Sep 12, 2023, 11:32 PM IST
ವಾಷಿಂಗ್ಟನ್: ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಮಗುವಿಗಿರುವ ಆರೋಗ್ಯ ಸಮಸ್ಯೆಯನ್ನು ಪತ್ತೆಹಚ್ಚಲು ಕಳೆದ ಮೂರು ವರ್ಷಗಳಿಂದ ಬರೋಬ್ಬರಿ 17 ವೈದ್ಯರ ಮೊರೆ ಹೋಗಿದ್ದಾರೆ. ಆದರೂ ತನ್ನ ಪುತ್ರನಿಗಿದ್ದ ರೋಗ ಯಾವುದು ಎಂಬುದು ಪತ್ತೆಯಾಗಲಿಲ್ಲ. ಆದರೆ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಚಾಟ್ಜಿಪಿಟಿ ಈ ಅಪರೂಪದ ರೋಗವನ್ನು ಪತ್ತೆಹಚ್ಚಿದೆ!
ಎಐ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಈ ಸಂದರ್ಭದಲ್ಲಿ ವೈದ್ಯರು ಪತ್ತೆಹಚ್ಚಲು ಸಾಧ್ಯವಾಗದ್ದನ್ನು ಚಾಟ್ಜಿಪಿಟಿ ರೋಗ ಪತ್ತೆಹಚ್ಚಿರುವುದು ಐಎ ಕ್ಷೇತ್ರದ ಪ್ರಮುಖ ಮೈಲುಗಲ್ಲು ಎಂದು ಬಣ್ಣಿಸಲಾಗಿದೆ.
ಅಲೆಕ್ಸ್(4) ಕಳೆದ ಹಲವು ದಿನಗಳಿಂದ ನಿರಂತರವಾಗಿ ಹಲ್ಲು ನೋವಿನಿಂದ ಬಳಲುತ್ತಿದ್ದ. ಜತೆಗೆ ಆತನ ಬೆಳವಣಿಗೆಯು ಕುಂಠಿತಗೊಂಡಿತ್ತು. ಪ್ರತಿದಿನ ನೋವು ನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳಬೇಕಾಯಿತು. ಮಗುವಿನ ಆರೋಗ್ಯವನ್ನು ಸರಿಪಡಿಸಲು ತಾಯಿ ಕರ್ಟ್ನಿ 17 ವೈದ್ಯರನ್ನು ಸಂಪರ್ಕಿಸಿದರು. ಎಲ್ಲ ರೀತಿಯ ಆರೋಗ್ಯ ತಪಾಸಣೆ ಮತ್ತು ಪರೀಕ್ಷೆಯನ್ನು ಮಾಡಿಸಿದರು. ಆದರೂ ರೋಗ ಮಾತ್ರ ಪತ್ತೆಯಾಗಲಿಲ್ಲ. ಅಂತಿಮವಾಗಿ ಒಂದು ದಿನ ಈ ಬಗ್ಗೆ ತಿಳಿಯಲು ಚಾಟ್ಜಿಪಿಟಿ ಮೊರೆಹೋದರು. ಅದರಿಂದ ಮಗು ಅಪರೂಪದ “ಟೆಥರ್ಡ್ ಕಾರ್ಡ್ ಸಿಂಡ್ರೋಮ್’ನಿಂದ ಬಳಲುತ್ತಿರುವುದು ತಿಳಿಯಿತು. ಇದು ಅಪರೂಪದ ಕಾಯಿಲೆಯಾಗಿದೆ. ಇದರ ಆಧಾರದಲ್ಲಿ ಅಲೆಕ್ಸ್ಗೆ ತಾಯಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವೈದ್ಯರು ಪತ್ತೆಹಚ್ಚಲು ಸಾಧ್ಯವಾಗದನ್ನು ಎಐ ಸಾಧಿಸಿದ್ದು, ಆರೋ ಗ್ಯ ಕ್ಷೇತ್ರದಲ್ಲಿ ಅಚ್ಚರಿ ಮತ್ತು ನೂತನ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.