ಕಟ್ಟುನಿಟ್ಟಿನ ತಪಾಸಣೆಗೆ ತಹಶೀಲ್ದಾರ್ ಸೂಚನೆ
ಬೆಳ್ತಂಗಡಿ ತಾಲೂಕಿನ ಎಲ್ಲ ಗಡಿಗಳಲ್ಲಿ ಚೆಕ್‌ಪೋಸ್ಟ್
Team Udayavani, Apr 19, 2020, 5:16 AM IST
ಬೆಳ್ತಂಗಡಿ: ಕೋವಿಡ್-19 ವೈರಸ್ ಹರಡದಂತೆ ತಡೆಯಲು ತಾಲೂಕಿನ ಎಲ್ಲ ಗಡಿಭಾಗ ಗಳ ಚೆಕ್‌ಪೋಸ್ಟ್ ಗಳಲ್ಲಿ ಪ್ರವೇಶಿಸುವ ಸಾರ್ವಜನಿಕರನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಆದೇಶಿಸಿದ್ದಾರೆ
ತಪಾಸಣೆ ಸಮಯದಲ್ಲಿ ಪಾಸ್ ಇಲ್ಲದೆ ಪ್ರವೇಶಿಸುವವರ ವಿರುದ್ಧ ಮೊಕದ್ದಮೆ ದಾಖಲಿಸುವುದು, ಪಾಸ್ ಹೊಂದಿರುವವರು ಬೇರೆ ಜಿಲ್ಲೆ ಅಥವಾ ರಾಜ್ಯದಿಂದ ತಾಲೂಕಿಗೆ ಪ್ರವೇಶಿಸುವವರ ಮಾಹಿತಿ ಸಂಗ್ರಹಿಸಿ ಪ್ರತಿದಿನ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ತಾಲೂಕು ಆರೋಗ್ಯಾಧಿಕಾರಿಗಳಿಗೆ ಅಂತ ಹವರ ಮಾಹಿತಿ ದೊರಕಿದ ತತ್‌ಕ್ಷಣ ಅವರ, ಕುಟುಂಬದ ಸದಸ್ಯರಿಗೆ ಹೋಮ್ ಕ್ವಾರಂಟೈನ್ ಸ್ಟಾ Âಂಪ್ ಹಾಕಬೇಕು ಎಂದಿದ್ದಾರೆ.
ಹೋಮ್ ಕ್ವಾರಂಟೈನ್ ಆದ ವ್ಯಕ್ತಿಯು ವಾಸಿಸುವ ಮನೆಯನ್ನು ಸಂಪೂರ್ಣವಾಗಿ ಕ್ವಾರಂಟೈನ್ ಮಾಡಿ 14 ದಿನಗಳವರೆಗೆ ಮನೆಯಿಂದ ಹೊರಬಾರದಂತೆ ಸೂಚಿಸಿ ಮನೆಯ ಎದುರು ಕ್ವಾರಂಟೈನ್ ನೋಟಿಸ್ ಅಂಟಿಸಬೇಕು. ಈ ಬಗ್ಗೆ ಅಕ್ಕಪಕ್ಕದ ಮನೆಗಳಿಗೂ ನೋಟಿಸ್ ನೀಡಬೇಕು. ಕ್ವಾರಂಟೈನ್ ಆದ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳಕ್ಕೆ ತೆರಳಿದರೆ ಪೊಲೀಸರು ಎಫ್‌ಐಆರ್ ದಾಖಲಿಸಬೇಕು. ಶನಿವಾರ ಚಾರ್ಮಾಡಿ ಚೆಕ್‌ಪೋಸ್ಟ್‌ಗಳಲ್ಲಿ ಬೆಳ್ತಂಗಡಿ ಎಸ್‌ಐ ನಂದಕುಮಾರ್ ನೇತೃತ್ವದಲ್ಲಿ ಬಿಗಿ ತಪಾಸಣೆ ನಡೆಸಲಾಯಿತು. ಕಕ್ಕಿಂಜೆಯಲ್ಲಿ ಧರ್ಮಸ್ಥಳ ಎಸ್.ಐ. ಓಡಿಯಪ್ಪ ಅವರ ನೇತೃತ್ವದಲ್ಲಿ ಅನಗತ್ಯ ಓಡಾಡುವ ವಾಹನಗಳ ಮೇಲೆ ಫೈನ್ ಹಾಕಲಾಯಿತು.
ತಾಲೂಕು ವಾರ್ ರೂಮ್‌ಗೆ ಮಾಹಿತಿ ನೀಡಿ
ಅಗತ್ಯ ಸಾಮಗ್ರಿಗಳಿಗಾಗಿ ಹೋಮ್ ಕ್ವಾರಂಟೈನ್ ಆದ ಮನೆಯವರು ಹೊರಗೆ ಬಾರದೆ ಬಂಧುಗಳಿಂದ, ಸ್ನೇಹಿತರಿಂದ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೆಯೇ ಆ ಮನೆಯ ಸದಸ್ಯರ ನಿರಂತರ ಆರೋಗ್ಯ ತಪಾಸಣೆ ಮಾಡುವಂತೆ ಆರೋಗ್ಯ ಇಲಾಖೆಗೆ ಹೇಳಲಾಗಿದೆ. ಒಂದು ವೇಳೆ ಅನ್ಯ ಮಾರ್ಗದ ಮೂಲಕ ತಪಾಸಣೆಗೆ ಒಳಪಡದೆ ಅನ್ಯ ಜಿಲ್ಲೆ ಅಥವಾ ರಾಜ್ಯದಿಂದ ಬಂದು ತಾಲೂಕಿಗೆ ಪ್ರವೇಶಿಸಿದ್ದಲ್ಲಿ ಅಂತಹವರನ್ನು ಗುರುತಿಸಿ ಆರೋಗ್ಯ ಸಿಬಂದಿಗೆ, ಪೊಲೀಸ್, ತಾಲೂಕು ವಾರ್ ರೂಮ್‌ಗೆ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.