ತೀರ್ಥಹಳ್ಳಿ: ದಾಂಧಲೆ ನಡೆಸುತ್ತಿದ್ದ ಚಿರತೆ ಹಸಿವಿನ ಭಾದೆಯಿಂದ ದುರ್ಮರಣ
Team Udayavani, Apr 7, 2023, 3:09 PM IST
ತೀರ್ಥಹಳ್ಳಿ: ಕಳೆದ 3 ತಿಂಗಳಿನಿಂದ ನೊಣಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲೇಸರ ಸುತ್ತಮುತ್ತ ನಾಯಿಗಳನ್ನು ಹಿಡಿದು ತಿಂದು ಜಾನುವಾರುಗಳ ಮೇಲೆ ಹಲ್ಲೆ ಮಾಡುತ್ತಿದ್ದ ಚಿರತೆಯೊಂದು ಕಾಲಿಗೆ ಪೆಟ್ಟಾದ ಕಾರಣ ಓಡಾಡಲು ಸಾಧ್ಯವಾಗದೆ ಹಸಿವಿನ ಭಾದೆಯಿಂದ ಮರಣ ಹೊಂದಿದ ಘಟನೆ ನಡೆದಿದೆ.
ಈ ಚಿರತೆಯನ್ನು ಜೀವಂತ ಹಿಡಿಯಲು ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಮಲ್ಲೇಸರರವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಕಾಡಿನಲ್ಲಿ ಬೋನ್ ತಂದಿರಿಸಿ 15 ದಿನ ಕಾದರೂ ಚಿರತೆ ಸಿಕ್ಕಿರಲಿಲ್ಲ.
ಕಳೆದ ಒಂದು ತಿಂಗಳು ನಾಪತ್ತೆಯಾಗಿದ್ದ ಚಿರತೆ ಏ. 7 ರಂದು ಮಲ್ಲೇಸರ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಈ ಚಿರತೆ ಐದಾರು ನಾಯಿಗಳನ್ನು ಹಿಡಿದು ತಿಂದಿದ್ದು, ಹಲವಾರು ಜಾನುವಾರುಗಳ ಮೇಲೆ ಹಲ್ಲೆ ನಡೆಸಿತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
ಹಿಂದೂ ಅತ್ಯಂತ ಪುರಾತನವಾದ ಧರ್ಮ: ಡಾ.ನಿರ್ಮಲಾ ನಂದನಾಥ ಸ್ವಾಮೀಜಿ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.