ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅದ್ಧೂರಿ ಅಂಗಮಣಿ ಉತ್ಸವ
Team Udayavani, Jan 17, 2021, 12:47 PM IST
ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಂಗಮಣಿ ಉತ್ಸವ ಮತ್ತು ಸಂಕ್ರಾಂತಿ ಮಹೋತ್ಸವ ವೈಭವದಿಂದ ನೆರವೇರಿತು. ಶ್ರೀದೇವಿ ಭೂದೇವಿಗೆ ತವರು ಮನೆಯಾದ ಸಜ್ಜೆಹಟ್ಟಿ ಮಂಟಪದಲ್ಲಿ ಅಂಗಮಣಿ ಉತ್ಸವ ಪ್ರಯುಕ್ತ ಮಡಿಲು ತುಂಬುವ ಸಂಪ್ರದಾಯ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಅಂಗಮಣಿ ಉತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭಾಗವಹಿಸಿದ್ದರು.
ದರ್ಶನಕ್ಕೆ ಅವಕಾಶ: ಭವ್ಯವಾಗಿ ಅಲಂಕಾರಗೊಂಡ ಚೆಲುವನಾರಾಯಣ ಸ್ವಾಮಿಯ ಅರಸಿಯರಾದ ಶ್ರೀದೇವಿ-ಭೂದೇವಿ ಅಮ್ಮನವರಿಗೆ ಅತ್ಯಮೂಲ್ಯ ಹಣ್ಣುಗಳಿಂದ ಮಡಿಲು ತುಂಬಿ ಮಹಾಮಂಗಳಾರತಿ ನೆರವೇರಿಸಲಾಯಿತು. ಕರ್ನಾಟಕದ ವಿವಿಧ
ಭಾಗಗಳಲ್ಲಿ ಬೆಳೆದ 50ಕ್ಕೂ ಹೆಚ್ಚು ರೀತಿಯ ಹಣ್ಣು ಸಂಗ್ರಹಿಸಿ, ನೂರಾರು ತಟ್ಟೆಗಳಲ್ಲಿ ಸಜ್ಜೆ ಹಟ್ಟಿ ಮಂಟಪದಲ್ಲಿ ಜೋಡಿಸಿಟ್ಟು ಭಕ್ತರು ದರ್ಶನ ಮಾಡಲು ಅವಕಾಶ ನೀಡಲಾಗಿತ್ತು. ತಂಡೋಪತಂಡವಾಗಿ ಆಗಮಿಸಿದ ಭಕ್ತರು, ಸಜ್ಜೆಹಟ್ಟಿ ಮನೆ, ಕರಗಂ ಮನೆಯಲ್ಲಿರಿಸಿದ್ದ ತಟ್ಟೆಗಳ ಸೋಬಗನ್ನು ಕಣ್ತುಂಬಿಕೊಂಡರು. ದೇವಿಯರ ಅಂಗಮಣಿ ಉತ್ಸವ ಆರಂಭವಾಗಿ ತವರುಮನೆ
ಮಂಟಪಕ್ಕೆ ಭವ್ಯ ಮೆರವಣಿಗೆಯೊಂದಿಗೆ ತಲುಪಿತು.
ಇದನ್ನೂ ಓದಿ:ಮಮತೆಯ ಮಡಿಲು ಅನ್ನದಾಸೋಹದಲ್ಲಿ ಊಟ ವಿತರಿಸಿದ ಶಾಸಕ ಶ್ರೀನಿವಾಸ್
ದೇವಿಯರನ್ನು ನಡೆಮುಡಿ ಹಾಸಿ ಬರಮಾಡಿಕೊಂಡ ನಂತರ ಅನೂಚಾನ ಸಂಪ್ರದಾಯದಂತೆ ಸಜ್ಜೆಹಟ್ಟಿ ಗುರುಗಳಾದ ತಿರುನಾರಾಯಣ ಅಯ್ಯಂಗಾರ್, ವಸಂತ ಮತ್ತು ಕರಗಂರಾಮಪ್ರಿಯ ದಂಪತಿ ದೇವಿಯರಿಗೆ ಮಡಿಲು ಶಾಸ್ತ್ರ ಪೂರೈಸಿದರು.
ದೇವಿಯರು ತವರು ಮನೆಯಿಂದ ಬರುವುದು ತಡವಾದಾಗ ಕೋಪಗೊಂಡ ಚೆಲುವರಾಯ ಕುದುರೆ ವಾಹನದಲ್ಲಿ ಹೊರನಡೆದು ಮೂರು ಮೊಲಗಳು ಅಡ್ಡಬಂದಾಗ ವಾಪಸ್ಸು ಮರಳಿದನೆಂಬ ಸಂಪ್ರದಾಯವಿದ್ದು, ದಾರಿಯ ನಡುವೆ ಮೂರು ಮೊಲಗಳನ್ನು ಸ್ವಾಮಿಯ ಉತ್ಸವಕ್ಕೆ ಅಡ್ಡಲಾಗಿ ಬಿಟ್ಟ ನಂತರ ಕುದುರೆ ವಾಹನೋತ್ಸವ ದೇವಾಲಯಕ್ಕೆ ಮತ್ತೆ ತಲುಪುವುದರೊಂದಿಗೆ ಅಂಗಮಣಿ ಉತ್ಸವ ಮುಕ್ತಾಯವಾಯಿತು.
ರಸ್ತೆ ರಿಪೇರಿ ಕಾರಣ ಆಹೋಬಲ ಮಠದ ಸಮೀಪ ಕುದುರೆ ವಾಹನೋತ್ಸವ ಮೊಟಕುಗೊಳಿಸಿ, ಎಡಗೈ ಬಲಗೈನವರಿಗೆ ವಿಶೇಷ ಪಾರಂಪರಿಕ ಮರ್ಯಾದೆ ಸಲ್ಲಿಸಲಾಯಿತು. ದೇವಿಯರಿಗೆ ಅರ್ಪಿಸಿದ ಹಣ್ಣು, ತರಕಾರಿಗಳಿಂದ ಕದಂಬ ಮತ್ತು ರಸಾಯನ ತಯಾರಿಸಿ ಶನಿವಾರ ಭಕ್ತರಿಗೆ ನೀಡಲಾಯಿತು. ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಮಂಗಳಮ್ಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.