ಚೆನ್ನೈಗೆ ಸತತ ಮೂರನೇ ಜಯ
Team Udayavani, Apr 1, 2019, 5:56 AM IST
ಚೆನ್ನೈ: ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ ಟ್ರ್ಯಾಕ್ ಮತ್ತೂಮ್ಮೆ ನಿಧಾನ ಗತಿಯಿಂದ ವರ್ತಿಸಿದರೂ ಧೋನಿ ಅವರ ಕಪ್ತಾನನ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 8 ರನ್ನುಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದೆ. ಇದು ತಂಡದ ಸತತ ಮೂರನೇ ಗೆಲುವು ಆಗಿದೆ.
ರವಿವಾರ ರಾತ್ರಿಯ ಐಪಿಎಲ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಆತಿಥೇಯ ಚೆನ್ನೈ 5 ವಿಕೆಟಿಗೆ 175 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ನಾಯಕ ಧೋನಿ 46 ಎಸೆತಗಳಿಂದ 75 ರನ್ ಬಾರಿಸಿ ಅಜೇಯರಾಗಿ ಉಳಿದರು (4 ಬೌಂಡರಿ, 4 ಸಿಕ್ಸರ್). ಜವಾಬು ನೀಡಿದ ರಾಜಸ್ಥಾನ್ ರಾಯಲ್ಸ್ ಒಂದು ಹಂತದಲ್ಲಿ ನಾಟಕೀಯ ಕುಸಿತ ಕಂಡರೂ ಬೆನ್ ಸ್ಟೋಕ್ಸ್ ಮತ್ತು ಜೋರ್ಫ ಆರ್ಚರ್ ನೆರವಿನಿಂದ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಅಂತಿಮ ಓವರಿನ ಮೊದಲ ಎಸೆತದಲ್ಲಿ ಸ್ಟೋಕ್ಸ್ ಅವರನ್ನು ಕಳೆದುಕೊಂಡ ರಾಜಸ್ಥಾನ್ ಅಂತಿಮವಾಗಿ 8 ವಿಕೆಟಿಗೆ 167 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ರನ್ ಬೆನ್ನಟ್ಟಲಾರಂಭಿಸಿದ ರಾಜಸ್ಥಾನ್ ರಹಾನೆ, ಬಟ್ಲರ್ ಮತ್ತು ಸ್ಯಾಮ್ಸನ್ ವಿಕೆಟ್‌ಗಳನ್ನು 14 ರನ್ ಆಗುವಷ್ಟರಲ್ಲಿ ಕಳೆದುಕೊಂಡು ತೀವ್ರ ಒತ್ತಡಕ್ಕೆ ಸಿಲುಕಿತು. ಬಳಿಕ ರಾಹುಲ್ ತ್ರಿಪಾಠಿ-ಸ್ಟೀವನ್ ಸ್ಮಿತ್ ಸ್ವಲ್ಪ ಹೋರಾಟ ನಡೆಸಿದರು. ಒಂದು ಹಂತದಲ್ಲಿ ರಾಜಸ್ಥಾನ್ 94 ರನ್ನಿಗೆ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಗೌತಮ್, ಆರ್ಚರ್ ಮತ್ತು ಸ್ಟೋಕ್ಸ್ ನೆರವಿನಿಂದ ತಂಡ ಗೆಲುವಿನ ಸನಿಹಕ್ಕೆ ಬಂದಿತ್ತು. ಅಂತಿಮ ಓವರಿನಲ್ಲಿ ಗೆಲುವಿಗೆ 12 ರನ್ ಗಳಿಸಬೇಕಿತ್ತು. ಆದರೆ ಮೊದಲ ಎಸೆತದಲ್ಲಿ 46 ರನ್ ಗಳಿಸಿದ್ದ ಸ್ಟೋಕ್ಸ್ ಔಟಾಗುತ್ತಲೇ ತಂಡದ ಹೋರಾಟ ಅಂತ್ಯಗೊಂಡಿತ್ತು.
ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ 70 ರನ್ನಿಗೆ ಉದುರಿದ ಈ ಟ್ರ್ಯಾಕ್‌ನಲ್ಲಿ ಚೆನ್ನೈ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆಯಿತು. ಆದರೆ ಅಂಬಾಟಿ ರಾಯುಡು (1), ಶೇನ್ ವಾಟ್ಸನ್ (13) ಬಿರುಸಿನ ಆರಂಭ ಒದಗಿಸುವಲ್ಲಿ ವಿಫಲರಾದರು. ಕೇದಾರ್ ಜಾಧವ್ (8) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ 3 ವಿಕೆಟ್ 27 ರನ್ ಆಗುವಷ್ಟರಲ್ಲಿ ಉರುಳಿತು. ಆರ್ಚರ್, ಸ್ಟೋಕ್ಸ್ ಮತ್ತು ಧವಳ್ ಕುಲಕರ್ಣಿ ಬಿಗಿ ದಾಳಿ ಸಂಘಟಿಸಿ ಚೆನ್ನೈಗೆ ಕಡಿವಾಣ ಹಾಕಿದರು.
4ನೇ ವಿಕೆಟಿಗೆ ಜತೆಗೂಡಿದ ಸುರೇಶ್ ರೈನಾ ಮತ್ತು ಧೋನಿ ಎಚ್ಚರಿಕೆಯ ಆಟವಾಡಿ ತಂಡದ ಕುಸಿತಕ್ಕೆ ತಡೆಯಾಗಿ ನಿಂತರು. ಆದರೆ ಇವರಿಂದ ದೊಡ್ಡ ಮಟ್ಟದಲ್ಲಿ ರನ್‌ಗತಿ ಏರಿಸಲು ಸಾಧ್ಯವಾಗಲಿಲ್ಲ. ರೈನಾ-ಧೋನಿ 8.5 ಓವರ್ ಜತೆಯಾಟ ನಿಭಾಯಿಸಿ 61 ರನ್ ಜತೆಯಾಟ ನಡೆಸಿದರು. ರೈನಾ ಗಳಿಕೆ 32 ಎಸೆತಗಳಿಂದ 36 ರನ್ (4 ಬೌಂಡರಿ, 1 ಸಿಕ್ಸರ್).
ಸ್ಕೋರ್‌ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್
ಅಂಬಾಟಿ ರಾಯುಡು ಸಿ ಬಟ್ಲರ್ ಬಿ ಆರ್ಚರ್ 1
ಶೇನ್ ವಾಟ್ಸನ್ ಸಿ ಆರ್ಚರ್ ಬಿ ಸ್ಟೋಕ್ಸ್ 13
ಸುರೇಶ್ ರೈನಾ ಬಿ ಉನಾದ್ಕತ್ 36
ಕೇದಾರ್ ಜಾಧವ್ ಸಿ ಬಟ್ಲರ್ ಬಿ ಕುಲಕರ್ಣಿ 8
ಎಂ.ಎಸ್. ಧೋನಿ ಔಟಾಗದೆ 75
ಡ್ವೇನ್ ಬ್ರಾವೊ ಸಿ ಕುಲಕರ್ಣಿ ಬಿ ಆರ್ಚರ್ 27
ರವೀಂದ್ರ ಜಡೇಜ ಔಟಾಗದೆ 8
ಇತರ 7
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 175
ವಿಕೆಟ್ ಪತನ: 1-1, 2-14, 3-27, 4-88, 5-144.
ಬೌಲಿಂಗ್: ಧವಳ್ ಕುಲಕರ್ಣಿ 4-0-37-1
ಜೋರ್ಫ ಆರ್ಚರ್ 4-1-17-2
ಬೆನ್ ಸ್ಟೋಕ್ಸ್ 3-0-30-1
ಶ್ರೇಯಸ್ ಗೋಪಾಲ್ 3-0-23-0
ಕೆ. ಗೌತಮ್ 2-0-13-0
ಜೈದೇವ್ ಉನಾದ್ಕತ್ 4-0-54-1
ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ ಸಿ ಜಡೇಜ ಬಿ ಚಹರ್ 0
ಜಾಸ್ ಬಟ್ಲರ್ ಸಿ ಬ್ರಾವೊ ಬ ಇ ಠಾಕೂರ್ 6
ಸಂಜು ಸ್ಯಾಮ್ಸನ್ ಸಿ ರೈನಾ ಬಿ ಚಹರ್ 8
ರಾಹುಲ್ ತ್ರಿಪಾಠಿ ಸಿ ಮತ್ತು ಬಿ ತಾಹಿರ್ 39
ಸ್ಟಿವನ್ ಸ್ಮಿತ್ ಸಿ ಬದಲಿಗ ಬಿ ತಾಹಿರ್ 29
ಬೆನ್ ಸ್ಟೋಕ್ಸ್ ಸಿ ರೈನಾ ಬಿ ಬ್ರಾವೊ 46
ಕೃಷ್ಣಪ್ಪ ಗೌತಮ್ ಸಿ ರೈನಾ ಬಿ ಠಾಕೂರ್ 9
ಜೋಫ ಆರ್ಚರ್ ಔಟಾಗದೆ 24
ಶ್ರೇಯಸ್ ಗೋಪಾಲ್ ಸಿ ತಾಹಿರ್ ಬಿ ಬ್ರಾವೊ 0
ಉನಾದ್ಕತ್ ಔಟಾಗದೆ 0
ಇತರ 7
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 167
ವಿಕೆಟ್ ಪತನ: 1-0, 2-14, 3-14, 4-75, 5-94, 6-120, 7-164, 8-166
ಬೌಲಿಂಗ್:
ದೀಪಕ್ ಚಹರ್ 4-1-19-2
ಶಾದೂìಲ್ ಠಾಕೂರ್ 4-0-42-2
ಮಿಚೆಲ್ ಸ್ಯಾಂಟ್ನರ್ 2-0-26-0
ರವೀಂದ್ರ ಜಡೇಜ 2-0-23-0
ಇಮ್ರಾನ್ ತಾಹಿರ್ 4-0-23-2
ಡ್ವೇನ್ ಬ್ರಾವೊ 4-0-32-2
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.