ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ
Team Udayavani, Sep 26, 2021, 11:25 PM IST
ಅಬುಧಾಬಿ: ಅಂತಿಮ ಎಸೆತದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಎಂಟನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 6 ವಿಕೆಟಿಗೆ 171 ರನ್ ಪೇಸಿದರೆ, ಚೆನ್ನೈ ಭರ್ತಿ 20 ಓವರ್‌ಗಳಲ್ಲಿ 8 ವಿಕೆಟಿಗೆ 172 ರನ್ ಬಾರಿಸಿ ಯುಎಇಯಲ್ಲಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿತು.
ಋತುರಾಜ್ ಗಾಯಕ್ವಾಡ್ (40), ಫಾ ಡು ಪ್ಲೆಸಿಸ್ (43), ಮೊಯಿನ್ ಅಲಿ (32) ಆರಂಭದಲ್ಲಿ ಸಿಡಿದು ನಿಂತಾಗ ಚೆನ್ನೈ ಬಹಳ ಬೇಗನೇ ವಿಜಯೋತ್ಸವ ಆಚರಿಸಲಿದೆ ಎಂದು ಭಾವಿಸಲಾಗಿತ್ತು. ಆದರೆ 15ನೇ ಓವರ್ ಬಳಿಕ ಪಂದ್ಯದ ಚಿತ್ರಣ ನಿಧಾನವಾಗಿ ಬದಲಾಗತೊಡಗಿತು. ಮಿಸ್ಟರಿ ಸ್ಪಿನ್ನರ್‌ಗಳಾದ ಸುನೀಲ್ ನಾರಾಯಣ್, ವರುಣ್ ಚಕ್ರವರ್ತಿ ಸೇರಿಕೊಂಡು ಚೆನ್ನೈ ಮೇಲೆ ಘಾತಕವಾಗಿ ಎರಗಿದರು. ಧೋನಿ ಪಡೆ ಅಂತಿಮ 2 ಓವರ್‌ಗಳಲ್ಲಿ 26 ರನ್ ತೆಗೆಯಬೇಕಾದ ಒತ್ತಡಕ್ಕೆ ಸಿಲುಕಿತು. ಆಗ ಚೆಂಡು ಕೆಕೆಆರ್ ಅಂಗಳದಲ್ಲಿತ್ತು.
ಆದರೆ ಪ್ರಸಿದ್ಧ್ ಕೃಷ್ಣ ಅವರ 19ನೇ ಓವರ್‌ನಲ್ಲಿ ರವೀಂದ್ರ ಜಡೇಜ (8 ಎಸೆತ, 22 ರನ್) ಸಿಡಿದು ನಿಂತು 2 ಸಿಕ್ಸ್, 2 ಫೋರ್ ಬಾರಿಸಿ ಚೆನ್ನೈಯನ್ನು ಹಳಿಗೆ ತಂದರು. ಅಂತಿಮ ಓವರ್‌ನಲ್ಲಿ ಕೇವಲ 4 ರನ್ ತೆಗೆಯುವ ಗುರಿ ಎದುರಾಯಿತು. ಇಲ್ಲಿ ಸುನೀಲ್ ನಾರಾಯಣ್ ಸಾಕಷ್ಟು ಕಸರತ್ತು ಮಾಡಿದರು. 2 ವಿಕೆಟ್ ಕಿತ್ತು 2 ಡಾಟ್ ಬಾಲ್‌ಗಳನ್ನೂ ಎಸೆದರು. ಆದರೆ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದ ಚಹರ್ ಚೆನ್ನೈ ಗೆಲುವನ್ನು ಘೋಷಿಸಿದರು.
ಚೆನ್ನೈ ಅತ್ಯಧಿಕ 7 ಸಲ ಅಂತಿಮ ಎಸೆತಗಳಲ್ಲಿ ಗೆದ್ದರೆ, ಕೋಲ್ಕತಾ ಅತೀ ಹೆಚ್ಚು 6 ಸಲ ಕೊನೆಯ ಎಸೆತದಲ್ಲಿ ಎಡವಿತು.
ಕೆಕೆಆರ್ ಸವಾಲಿನ ಮೊತ್ತ
ಕೆಳ ಸರದಿಯಲ್ಲಿ ಮಾಜಿ ನಾಯಕ ದಿನೇಶ್ ಕಾರ್ತಿಕ್, ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಬಿರುಸಿನ ಆಟವಾಡಿದ್ದರಿಂದ ಕೆಕೆಆರ್ ಸ್ಕೋರ್ 170ರ ಗಡಿ ದಾಟಿತು. 13ನೇ ಓವರ್ ಮುಕ್ತಾಯಕ್ಕೆ ತಂಡದ ಮೊತ್ತ 4 ವಿಕೆಟಿಗೆ ಕೇವಲ 93 ರನ್ ಆಗಿತ್ತು. ಈ ತ್ರಿವಳಿಗಳ ಬ್ಯಾಟಿಂಗ್ ಅಬ್ಬರದಿಂದಾಗಿ ಕೊನೆಯ 7 ಓವರ್‌ಗಳಲ್ಲಿ 78 ರನ್ ಹರಿದು ಬಂತು.
ರಾಣಾ 27 ಎಸೆತಗಳಿಂದ ಅಜೇಯ 37, ಕಾರ್ತಿಕ್ 11 ಎಸೆತಗಳಿಂದ 26 (ಇಬ್ಬರಿಂದಲೂ 3 ಬೌಂಡರಿ, 1 ಸಿಕ್ಸರ್) ಹಾಗೂ ರಸೆಲ್ 15 ಎಸೆತ ಎದುರಿಸಿ 20 ರನ್ ಮಾಡಿದರು (2 ಬೌಂಡರಿ, 1 ಸಿಕ್ಸರ್).
ಶುಭಮನ್ ಗಿಲ್ (9)-ವೆಂಕಟೇಶ್ ಅಯ್ಯರ್ (18) ಜೋಡಿ ಅಬ್ಬರಿಸುವ ಸೂಚನೆ ನೀಡಿದರೂ ಇವರಿಬ್ಬರನ್ನೂ ಅಗ್ಗಕ್ಕೆ ಉರುಳಿಸುವಲ್ಲಿ ಚೆನ್ನೈ ಯಶಸ್ವಿಯಾಯಿತು. ನಾಯಕ ಮಾರ್ಗನ್ ಆಟ ಎಂಟೇ ರನ್ನಿಗೆ ಮುಗಿಯಿತು. ಆದರೆ ರಾಹುಲ್ ತ್ರಿಪಾಠಿ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ಹೋರಾಟ ಜಾರಿಯಲ್ಲಿರಿಸಿದರು. 33 ಎಸೆತಗಳಿಂದ 45 ರನ್ ಮಾಡಿದ ತ್ರಿಪಾಠಿ ಅವರದೇ ಕೆಕೆಆರ್ ಸರದಿಯ ಗರಿಷ್ಠ ಗಳಿಕೆ (4 ಬೌಂಡರಿ, 1 ಸಿಕ್ಸರ್).
ಚೆನ್ನೈ ಪರ ಶಾರ್ದುಲ್ ಠಾಕೂರ್ ಮತ್ತು ರವೀಂದ್ರ ಜಡೇಜ ಅತ್ಯಂತ ಬಿಗಿಯಾದ ಬೌಲಿಂಗ್ ದಾಳಿ ಸಂಘಟಿಸಿದರು. ಒಂದು ಓವರ್ ಮೇಡನ್ ಕೂಡ ಮಾಡಿದ ಠಾಕೂರ್, 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 2 ವಿಕೆಟ್ ಉರುಳಿಸಿದರು. ಜಡೇಜ ಸಾಧನೆ 21ಕ್ಕೆ ಒಂದು ವಿಕೆಟ್. ಆದರೆ ಡ್ವೇನ್ ಬ್ರಾವೊ ಬದಲು ಆಡಲಿಳಿದ ಸ್ಯಾಮ್ ಕರನ್ 56 ರನ್ ನೀಡಿ ದುಬಾರಿಯಾದರು.
ಸ್ಕೋರ್ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಶುಭಮನ್ ಗಿಲ್ ರನೌಟ್ 9
ವಿ. ಅಯ್ಯರ್ ಸಿ ಧೋನಿ ಬಿ ಠಾಕೂರ್ 18
ರಾಹುಲ್ ತ್ರಿಪಾಠಿ ಬಿ ಜಡೇಜ 45
ಮಾರ್ಗನ್ ಸಿ ಡು ಪ್ಲೆಸಿಸ್ ಬಿ ಹ್ಯಾಝಲ್‌ವುಡ್ 8
ನಿತೀಶ್ ರಾಣಾ ಔಟಾಗದೆ 37
ಆ್ಯಂಡ್ರೆ ರಸೆಲ್ ಬಿ ಠಾಕೂರ್ 20
ಕಾರ್ತಿಕ್ ಸಿ ಧೋನಿ ಬಿ ಹ್ಯಾಝಲ್‌ವುಡ್ 26
ಸುನೀಲ್ ನಾರಾಯಣ್ ಔಟಾಗದೆ 0
ಇತರ 8
ಒಟ್ಟು (6 ವಿಕೆಟಿಗೆ) 171
ವಿಕೆಟ್ ಪತನ:1-10, 2-50, 3-70, 4-89, 5-125, 6-166.
ಬೌಲಿಂಗ್; ದೀಪಕ್ ಚಹರ್ 4-0-32-0
ಸ್ಯಾಮ್ ಕರನ್ 4-0-56-0
ಜೋಶ್ ಹ್ಯಾಝಲ್‌ವುಡ್ 4-0-40-2
ಶಾರ್ದುಲ್ ಠಾಕೂರ್ 4-1-20-2
ರವೀಂದ್ರ ಜಡೇಜ 4-0-21-1
ಚೆನ್ನೈ ಸೂಪರ್‌ಕಿಂಗ್ಸ್
ಗಾಯಕ್ವಾಡ್ ಸಿ ಮಾರ್ಗನ್ ಬಿ ರಸೆಲ್ 40
ಫಾ ಡು ಪ್ಲೆಸಿಸ್ ಸಿ ಫರ್ಗ್ಯುಸನ್ ಬಿ ಪ್ರಸಿದ್ಧ್ 43
ಮೊಯಿನ್ ಅಲಿ ಸಿ ಅಯ್ಯರ್ ಬಿ ಫರ್ಗ್ಯುಸನ್ 32
ರಾಯುಡು ಬಿ ನಾರಾಯಣ್ 10
ಸುರೇಶ್ ರೈನಾ ರನೌಟ್ 11
ಎಂ.ಎಸ್. ಧೋನಿ ವಿ ಚಕ್ರವರ್ತಿ 1
ಜಡೇಜ ಎಲ್‌ಬಿಡಬ್ಲ್ಯು ನಾರಾಯಣ್ 22
ಸ್ಯಾಮ್ ಕರನ್ ಸಿನಾಗರ್‌ಕೋಟಿ ಬಿ ನಾರಾಯಣ್ 4
ಶಾರ್ದುಲ್ ಠಾಕೂರ್ ಔಟಾಗದೆ 3
ದೀಪಕ್ ಚಹರ್ ಔಟಾಗದೆ 1
ಇತರ 5
ಒಟ್ಟು(8 ವಿಕೆಟಿಗೆ) 172
ವಿಕೆಟ್ ಪತನ:1-74, 2-102, 3-119, 4-138, 5-142, 6-142, 7-168, 8-171.
ಬೌಲಿಂಗ್; ಪ್ರಸಿದ್ಧ್ ಕೃಷ್ಣ 4-0-41-1
ಲಾಕಿ ಫರ್ಗ್ಯುಸನ್ 4-0-33-1
ವರುಣ್ ಚಕ್ರವರ್ತಿ 4-0-22-1
ಸುನೀಲ್ ನಾರಾಯಣ್ 4-0-41-3
ಆ್ಯಂಡ್ರೆ ರಸೆಲ್ 3-0-28-1
ವೆಂಕಟೇಶ್ ಅಯ್ಯರ್ 1-0-5-0
ಪಂದ್ಯಶ್ರೇಷ್ಠ: ರವೀಂದ್ರ ಜಡೇಜ
ಇಂದಿನ ಪಂದ್ಯಗಳು
ಹೈದರಾಬಾದ್ vs ರಾಜಸ್ಥಾನ್
ಸ್ಥಳ: ದುಬಾೖ, ಆರಂಭ: 7.30,
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.