ಚಿಕನ್ ಫಾಕ್ಸ್‌ಗೆ ಇಬ್ಬರು ಮಕ್ಕಳು ಬಲಿ
Team Udayavani, Feb 1, 2022, 11:12 AM IST
ವಾಡಿ: ಚಿಕನ್ ಫಾಕ್ಸ್ ಸಾಂಕ್ರಾಮಿಕ ರೋಗ ಉಲ್ಬಣಗೊಂಡು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತಪಟ್ಟ ಘಟನೆ ನಾಲವಾರ ಗ್ರಾಮದಲ್ಲಿ ನಡೆದಿದೆ.
ಚಿತ್ತಾಪುರ ತಾಲೂಕಿನ ನಾಲವಾರ ಸ್ಟೇಷನ್ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ತಾಯಿ ಹಾಗೂ ಇನ್ನುಳಿದ ಇಬ್ಬರು ಮಕ್ಕಳು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪತಿಯನ್ನು ಕಳೆದುಕೊಂಡಿರುವ ಹಫಿಜಾ ಬೇಗಂ (44) ನಾಲವಾರ ಸ್ಟೇಷನ್ ಬಡಾವಣೆಯಲ್ಲಿ ವಾಸವಿದ್ದಾರೆ. ಏಕಾಏಕಿ ತನಗೂ ಮತ್ತು ತನ್ನ ನಾಲ್ವರು ಮಕ್ಕಳ ದೇಹದ ಮೇಲೆ ರಕ್ತದ ಕಲೆ ರೂಪದ ವಿಚಿತ್ರ ಚುಕ್ಕೆ ಗಾಯಗಳು ಕಾಣಿಸಿಕೊಂಡಿವೆ. ಸಾಮಾನ್ಯವಾಗಿ ತಗಲುವ ಗಣಜಲು ರೋಗ ಎಂದು ಭಾವಿಸಿ ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.
ತುರಿಕೆ, ನೋವು ಹೆಚ್ಚಾಗಿ ಇಡೀ ದೇಹಕ್ಕೆ ಹರಡುತ್ತಿರುವುದನ್ನು ಕಂಡು ಪುತ್ರರಾದ ಇಮ್ರಾನ್ ಪಟೇಲ್ (9) ಮತ್ತು ರೆಹಮಾನ್ ಪಟೇಲ್ (14) ಅವರನ್ನು ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಹಫೀಜಾ ಬೇಗಂ, ಸ್ವತಃ ತಾನು ಕಾಯಿಲೆಯಿಂದ ನರಳಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಇಮ್ರಾನ್ ಜ.16ರಂದು ಮೃತಪಟ್ಟರೆ, ಇದೇ ಕಾಯಿಲೆಯಿಂದ ಬಳಲಿದ ಬಾಲಕ ರೆಹಮಾನ್ ಜ.31ರಂದು ಅಸುನೀಗಿದ್ದಾನೆ.
ನಫೀಸಾ (14) ಮತ್ತು ಅರ್ಮಾನ್ ಪಟೇಲ್ (5)ಗೂ ಇದೇ ರೋಗ ಕಾಡುತ್ತಿದ್ದು, ತಾಯಿ ಹಫೀಜಾಬೇಗಂ, ಪುತ್ರಿ ಹಾಗೂ ಪುತ್ರನ ಜತೆ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ನಾಲವಾರ ಕುಟುಂಬಸ್ಥರ ಮನೆಗೆ ಭೇಟಿ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ| ಅಮರದೀಪ ಪವಾರ ಹಾಗೂ ಆರೋಗ್ಯ ಸಿಬ್ಬಂದಿ, ತಾಯಿ, ಮಕ್ಕಳು ಮತ್ತು ಅಕ್ಕಪಕ್ಕದ ಮನೆಯವರ ರಕ್ತದ ಮಾದರಿ ಪಡೆದಿದ್ದಾರೆ.
ಮಹಿಳೆ ಹಫೀಜಾ ಬೇಗಂ, ಮಕ್ಕಳಾದ ನಫೀಜಾ, ಅರ್ಮಾನ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಮೇಲ್ನೋಟಕ್ಕೆ ಇದು ಚಿಕನ್ ಫಾಕ್ಸ್ ರೋಗದಂತೆ ಕಾಣುತ್ತಿದೆ. ಇದು ಮಾರಣಾಂತಿಕ ರೋಗವಲ್ಲ. ಅದಾಗ್ಯೂ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಇದಕ್ಕೆ ಕಾರಣವೇನು ಎಂಬುದು ಪ್ರಯೋಗಾಲಯದಿಂದ ವರದಿ ಬಂದಾಗಲೇ ಸ್ಪಷ್ಟವಾಗುತ್ತದೆ. ಆರೋಗ್ಯ ಸಿಬ್ಬಂದಿ ತಂಡದ ಮೂಲಕ ನಾಲವಾರ ಸ್ಟೇಷನ್ ಬಡಾವಣೆಯ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. -ಅಮರದೀಪ ಪವಾರ, ತಾಲೂಕು ವೈದ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.