ಮಕ್ಕಳ ವಾಣಿ ನಲಿಯೋಣ ಕಲಿಯೋಣ ಯೂಟ್ಯೂಬ್ ಚಾನೆಲ್‌ಗೆ ಚಾಲನೆ
Team Udayavani, Apr 17, 2020, 6:05 AM IST
ಬೆಂಗಳೂರು: ಕೋವಿಡ್ 19 ಭೀತಿಯಿಂದ ಶಾಲಾ ಮಕ್ಕಳಿಗೆ ರಜಾ ಘೋಷಿಸಲಾಗಿದ್ದು, ಮನೆಯಲ್ಲಿ ಇರುವ ಮಕ್ಕಳ ಮನೋರಂಜನೆಗಾಗಿ ಶಿಕ್ಷಣ ಇಲಾಖೆಯು ಆರಂಭಿಸಿರುವ ಮಕ್ಕಳ ವಾಣಿ- ನಲಿಯೋಣ ಕಲಿಯೋಣ ಮಕ್ಕಳ ಯೂಟ್ಯೂಬ್ ಚಾನೆಲ್‌ಗೆ ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಇರುವ ಮಕ್ಕಳನ್ನು ಕತೆ, ಹಾಡು, ಚಿತ್ರಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್, ಒಗಟು, ಗಾದೆ, ಮ್ಯಾಜಿಕ್, ಪದಬಂಧ ಮುಂತಾದವುಗಳ ಮೂಲಕ ತಲುಪಿ ಅವರನ್ನು ರಂಜಿಸುವುದರ ಜತೆಗೆ ಆಸಕ್ತಿಕರವಾದ ಕಲಿಕೆಗೆ ಅವರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿರುವ ಈ ಪ್ರಯತ್ನವು ಅನನ್ಯವಾಗಿದೆ ಎಂದರು.
ಪ್ರತಿದಿನ ಬೆಳಗ್ಗೆ 10.30ಕ್ಕೆ
ಮಕ್ಕಳ ವಾಣಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರುವ ಕಾರ್ಯಕ್ರಮ ಗಳು ರೇಡಿಯೋ, ಟಿವಿಗಳಲ್ಲಿಯೂ ಪ್ರಸಾರ ಮಾಡಲು ಸೂಕ್ತ ವಾಗಿರುವಂತೆ ರೂಪಿಸಲಾಗಿದ್ದು, ಪ್ರತಿದಿನ ಬೆಳಗ್ಗೆ 10.30ಕ್ಕೆ https://www.youtube.com/channel/UCDaVbK0F5b7y4hgSZrTwZNg
ಲಿಂಕ್‌ನಲ್ಲಿ ಈ ಕಾರ್ಯಕ್ರಮಗಳು ಒಂದು ಗಂಟೆಯ ಅವಧಿಗೆ ಪ್ರಸಾರಗೊಳ್ಳಲಿವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.