ಚಿಕ್ಕಬಳ್ಳಾಪುರ: ತಂತಿ ಬೇಲಿಯ ಉರುಳಿಗೆ ಸಿಲುಕಿ ಗಂಡು ಚಿರತೆ ಸಾವು
ಈ ರೀತಿ ಚಿರತೆ ಸಾವು ಜಿಲ್ಲೆಯ ಇತಿಹಾಸದಲ್ಲಿ ಮೊದಲು
Team Udayavani, Jun 20, 2020, 8:31 PM IST
ಚಿಕ್ಕಬಳ್ಳಾಪುರ: ಕಾಡು ಹಂದಿ ಹಿಡಿಯಲು ಅಳವಡಿಸಿದ್ದ ತಂತಿ ಬೇಲಿಯ ಉರುಳಿನಲ್ಲಿ ಸಿಲುಕಿ ಗಂಡು ಚಿರತೆಯೊಂದು ಧಾರುಣವಾಗಿ ಮೃತ ಪಟ್ಟಿರುವ ಘಟನೆ ತಾಲೂಕಿನ ನಂದಿಬೆಟ್ಟದಕ್ಕೆ ತೆರಳುವ ಕಾರ‌್ನಹಳ್ಳಿ ಕ್ರಾಸ್ ಸಮೀಪದ ಸಿಲ್‌ಕ್ ಪ್ಯಾಕ್ಟರಿ ಬಳಿ ನಡೆದಿದೆ.
ತಾಲೂಕಿನ ಐತಿಹಾಸಿಕ ನಂದಿಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸಿಲ್‌ಕ್ ಪ್ಯಾಕ್ಟರಿ ಇದ್ದು ಅಲ್ಲಿ ಕಾಡು ಹಂಡಿ ಹಿಡಿಯುವ ಸಲುವಾಗಿ ಯಾರೋ ತಂತಿಬೇಲಿಯ ಉರುಳನ್ನು ಅಳವಡಿಸಿದ್ದಾರೆ. ಅಕಸ್ಮಿಕವಾಗಿ ಈ ಉರುಳಿನಲ್ಲಿ ಚಿರತೆ ಬಂದಿದ್ದು ಆಗ ಸಿಲುಕಿಕೊಂಡು ಸ್ಥಳದಲ್ಲಿ ಒದ್ದಾಡಿ ಒದ್ದಾಡಿ ತನ್ನ ಪ್ರಾಣ ಕಳೆದುಕೊಂಡಿದೆ.
ವಿಷಯ ತಿಳಿದ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಚಿಕ್ಕಬಳ್ಳಾಪುರ ತಾಲೂಕಿನ ವಲಯ ಅರಣ್ಯಾಧಿಕಾರಿ ವಿಕ್ರಮ್, ಗಾರ್ಡ್ ಮಲ್ಲಿಕಾರ್ಜುನಯ್ಯ ಮತ್ತಿತರರು ತೆರಳಿ ಸ್ಥಳ ಪರಿಶೀಲಿಸಿದ ಬಳಿಕ ಮೃತ ಚಿರತೆಯನ್ನು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ಹಾಗೂ ವ್ಯನ್ಯ ಜೀವಿಗಳ ಕಾಯ್ದೆಯಡಿ ಸುಟ್ಟು ಹಾಕಿದ್ದಾರೆ.
ಜಿಲ್ಲೆಯಲ್ಲಿ ಇದೇ ಮೊದಲು
ಚಿರತೆಯೊಂದು ಇದೇ ಮೊದಲ ಬಾರಿಗೆ ಈ ರೀತಿ ಮೃತ ಪಟ್ಟಿರುವುದು ಜಿಲ್ಲೆಯ ಇತಿಹಾಸದಲ್ಲಿ ಮೊದಲು ಆಗಿದೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಚಿರತೆಗಳ ಹಾವಳಿ ಇದ್ದರೂ ಅವುಗಳ ದಾಳಿಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ. ಆದರೆ ಚಿರತೆಯೊಂದು ತಂತಿ ಬೇಲಿಯ ಉರುಳಿನಲ್ಲಿ ಸಿಲುಕಿ ಮೃತ ಪಟ್ಟಿರುವುದು ಇದೇ ಮೊದಲ ಎಂದು ಚಿಕ್ಕಬಳ್ಳಾಪುರದ ವಲಯ ಅರಣ್ಯಾಧಿಕಾರಿ ವಿಕ್ರಮ್ ಉದಯವಾಣಿ ಗೆ ತಿಳಿಸಿದರು. ಮೃತಪಟ್ಟಿರುವ ಚಿರತೆಗೆ ಸುಮಾರು 4 ರಿಂದ 5 ವರ್ಷಗಳಾಗಿದೆಯೆಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.