![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 27, 2020, 3:15 PM IST
ಚಿಕ್ಕೋಡಿ: ದಸರಾ ಹಬ್ಬದಲ್ಲಿ ಫರಾಳ ಕೊಡಲು ಬಂದ ಪತ್ನಿಯ ತಂದೆಯನ್ನೇ ನಿವೃತ್ತ ಸೈನಿಕ ಕೊಲೆ ಮಾಡಿದ ದಾರುಣ ಘಟನೆ ಚಿಕ್ಕೋಡಿ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ. ಕರೋಶಿ ಗ್ರಾಮದ ಸಿದ್ದಪ್ಪ ರಾಯಪ್ಪ ಖೋತ(58) ಕೊಲೆಯಾದ ವ್ಯಕ್ತಿ. ಇಟ್ನಾಳ ಗ್ರಾಮದ ನಿವೃತ್ತ ಸೈನಿಕ ಬಾಳೇಶ ಶ್ರೀಕಾಂತ ಬೋರನ್ನವರ(38) ಕೊಲೆ ಆರೋಪಿ.
ಕೊಲೆಯಾದ ಸಿದ್ದಪ್ಪ ಖೋತ ತನ್ನ ಪುತ್ರಿಯನ್ನು ಇಟ್ನಾಳ ಗ್ರಾಮದ ಸೈನಿಕ ಬಾಳೇಶ ಬೋರನ್ನವರಗೆ 10 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದ. ಮಕ್ಕಳಾಗಿಲ್ಲವೆಂದು ಬಾಳೇಶ ಪದೇ ಪದೇ ಪತ್ನಿ ಜೊತೆ ಜಗಳ ಮಾಡುತ್ತಿದ್ದನು. ದಸರಾ ಹಬ್ಬದ ನಿಮಿತ್ತ ಮಗಳಿಗೆ ಪರಾಳ ಕೊಡಲು ಇಟ್ನಾಳ ಗ್ರಾಮಕ್ಕೆ ಸಿದ್ದಪ್ಪ ಹೋದಾಗ ಮಗಳ – ಅಳಿಯನ ಜಗಳ ವಿಕೋಪಕ್ಕೆ ಹೋಗಿದೆ.
ಜಗಳ ಬಿಡಿಸಲು ಹೋದ ಮಾವ ಸಿದ್ದಪ್ಪನ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಿದ್ದಪ್ಪ ಮೃತಪಟ್ಟಿದ್ದಾನೆ.
ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ನಿವೃತ್ತ ಸೈನಿಕ ಬಾಳೇಶ ಬೋರನ್ನವರ ವಿರುದ್ಧ ಕೊಲೆ ದೂರು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ಹಾಡಹಗಲೇ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ, ಆರೋಪಿ ಬಂಧನ
ಹಳೆ ವೈಷಮ್ಯ: ಯುವಕನ ಕೊಲೆ
ಬೆಳಗಾವಿ: ಎರಡು ವರ್ಷಗಳ ಹಿಂದೆ ಬೆ„ಕ್ ಮೇಲೆ ಹೋಗುವಾಗ ನೀರು ಸಿಡಿದಿತ್ತು ಎಂಬ ಕಾರಣಕ್ಕೆ ನಡೆದಿದ್ದ ಜಗಳದ
ವೈಷಮ್ಯ ಕೊಲೆಯಲ್ಲಿ ಅಂತ್ಯವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಸಂಗಮೇಶ್ವರ ನಗರದ ಶಹಬಾಜ್ ಶೇರಖಾನ್ ಪಠಾಣ(24) ಎಂಬ ಯುವಕನನ್ನು ಶಿವಬಸವ ನಗರದ ಗ್ಯಾಂಗ್‌ವಾಡಿ ಬಳಿ ಮಾರಕಾಸ್ತ್ರಗಳಿಂದ
ಹೊಡೆದು ಕೊಲೆ ಮಾಡಲಾಗಿದೆ.
ಮತ್ತ್ಯಾನಟ್ಟಿಯ ಬಸವರಾಜ ಹೊಳೆಪ್ಪ ದಡ್ಡಿ ಹಾಗೂ ಬಸವಣ್ಣಿ ಸಿದ್ದಪ್ಪ ನಾಯಿಕ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.
ಹೊಟೇಲ್‌ನಲ್ಲಿ ಊಟ ಮುಗಿಸಿಕೊಂಡು ಹೊರಟಿದ್ದ ಶಹಬಾಜ್ ಬೆನ್ನತ್ತಿ ಹತ್ಯೆ ಮಾಡಲಾಗಿದೆ. ಜೀವ ಉಳಿಸಿಕೊಳ್ಳಲು ನಿವೃತ್ತ ಡಿವೈಎಸ್‌ಪಿ ಒಬ್ಬರ ಮನೆ ಹತ್ತಿರ ಹೋದರೂ ಬಿಡದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕೊಲೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ ಏನು?: ಕಾಕತಿ ಕ್ಲಾಸಿಕ್ ಬಾರ್ ಸಮೀಪದಲ್ಲಿ ನಿಂತಾಗ ಮೈಮೇಲೆ ರಾಡಿ ನೀರು ಸಿಡಿಯಿತು ಎಂಬ ಕಾರಣಕ್ಕೆ
ಮತ್ತ್ಯಾನಟ್ಟಿಯ ಲಕ್ಷ್ಮಣ ದಡ್ಡಿ ಹಾಗೂ ಶಹಬಾಜ್ ಪಠಾಣ ಮಧ್ಯೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಶಹಬಾದ್
ತನ್ನ ಸಹಚರರ ಗುಂಪು ಕಟ್ಟಿಕೊಂಡು ಬಂದು ಲಕ್ಷ್ಮಣ ದಡ್ಡಿಯ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಆಗ ಆಸ್ಪತ್ರೆಗೆ ಸೇರಿದ್ದಾಗಲೂ ಹಲ್ಲೆ ನಡೆಸಲಾಗಿತ್ತು. ನಂತರ ಈ ಬಗ್ಗೆ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಡ್ಡಿ ಸಹೋದರರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಶಹಬಾದ್‌ನ ಹತ್ಯೆ ಮಾಡಲು ಸಂಚು ರೂಪಿಸಿದ್ದರು. ರವಿವಾರ ಶಹಬಾಜ್ ಶಿವಬಸವ ನಗರದ ಹೋಮಿಯೋಪಥಿಕ್ ಕಾಲೇಜು ಬಳಿ ನಿಂತಾಗ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಆಗ ಆತ ಬೈಕ್ ಬಿಟ್ಟು ಓಡಿ ಹೋಗುವಾಗ ಬೆನ್ನಟ್ಟಿ ಹತ್ಯೆ ಮಾಡಿದ್ದಾರೆ. ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಶಹಬಾಜ್‌ನ ತಂದೆ ಪ್ರಕರಣ ದಾಖಲಿಸಿದ್ದಾರೆ.ಪ್ರಕರಣ ಬೆನ್ನತ್ತಿದ ಮಾಳಮಾರುತಿ ಠಾಣೆ ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.