ಭಾರತದಲ್ಲಿ ಮಕ್ಕಳ ಲಸಿಕೆ ಸ್ಥಿತಿಗತಿ
Team Udayavani, Jun 13, 2021, 6:35 AM IST
ಕೊರೊನಾ 3ನೇ ಅಲೆಯನ್ನು ಪ್ರಾರಂಭದಲ್ಲೇ ತಡೆಯಲು ದೇಶ ಸಿದ್ಧವಾಗುತ್ತಿದೆ. ಲಸಿಕಾ ಕಂಪೆನಿಗಳು 2-18 ವರ್ಷದೊಳಗಿನ ಮಕ್ಕಳ ರಕ್ಷಣೆಗೆ ಸಮರೋಪಾದಿಯ ತಯಾರಿ ಆರಂಭಿ ಸಿವೆ. ಕೆಲವು ಲಸಿಕಾ ಕಂಪೆನಿಗಳಿಗೆ ಮಕ್ಕಳ ಮೇಲೆ ಲಸಿ ಕೆಯ ಪ್ರಯೋಗ ನಡೆಸಲು ಒಪ್ಪಿಗೆ ಸಿಕ್ಕಿದೆ.
ಇನ್ನು ಕೆಲವು ಕಂಪೆನಿಗಳು ತುದಿಗಾಲಲ್ಲಿ ನಿಂತಿ ವೆ.
ಕೊವ್ಯಾಕ್ಸಿನ್
2-18 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ಗೆ ಡ್ರಗ್ಸ್ ಕಂಟ್ರೋಲರ್ ಜನ ರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ. ಈಗಾಗಲೇ ಪಟ್ನಾ ಏಮ್ಸ್ ನಲ್ಲಿ ಪ್ರಯೋಗ ಆರಂಭಿಸಲಾಗಿದೆ.
ಝೈಡಸ್ ಕ್ಯಾಡಿಲಾ
ಅಹ್ಮದಾಬಾದ್ ಮೂಲದ ಲಸಿಕೆ ತಯಾರಿಕಾ ಕಂಪೆನಿ ಇದಾಗಿದ್ದು, 12-18 ವರ್ಷ ವಯಸ್ಸಿನವರ ಮೇಲೆ ತನ್ನ ಲಸಿಕೆಯ ಪ್ರಯೋಗ ಆರಂಭಿಸಿದೆ. ಇನ್ನೆರಡು ವಾರಗಳಲ್ಲಿ ಲಸಿಕೆಗೆ ಲೈಸೆನ್ಸ್ ನೀಡುವಂತೆ ಸರಕಾರಕ್ಕೆ ಕಂಪೆನಿಯು ಮನವಿ ಸಲ್ಲಿಸಲಿದೆ.
ಫೈಜರ್
ಅಮೆರಿಕ, ಯುಕೆ, ಐರೋಪ್ಯ ಒಕ್ಕೂಟದಲ್ಲಿ ಫೈಜರ್ ಲಸಿಕೆಯನ್ನು ಮಕ್ಕಳಿಗೆ ವಿತರಿಸಲಾಗುತ್ತಿದೆ. ಇದು ವಯಸ್ಕರಷ್ಟೇ ಅಲ್ಲದೇ, ಮಕ್ಕಳನ್ನೂ ರಕ್ಷಿಸಲಿದೆ. ಬೇರೆ ದೇಶಗಳಲ್ಲಿ ಇದರ ಬಳಕೆಗೆ ತುರ್ತು ಅನುಮೋದನೆ ದೊರೆತಿರುವ ಕಾರಣ, ಭಾರತದಲ್ಲೂ ಅದಕ್ಕೆ ಒಪ್ಪಿಗೆ ಸಿಗಲಿದೆ. ಅಲ್ಲದೆ ಇಲ್ಲಿ ಪ್ರಯೋಗ ನಡೆಸಬೇಕೆಂಬ ಷರತ್ತಿನಿಂದ ವಿನಾಯಿತಿಯೂ ಸಿಗಲಿದೆ.
ಸ್ಪುಟ್ನಿಕ್ ವಿ
ಸ್ಪುಟ್ನಿಕ್ ವಿ ಅನ್ನು ಮಕ್ಕಳ ವಯೋಮಿತಿ, ತೂಕ ಸೇರಿ ವಿವಿಧ ಅಂಶದ ಆಧಾರದ ಮೇಲೆ ಪ್ರಯೋಗ ನಡೆಸಲು ರಷ್ಯಾದ ಆರೋಗ್ಯ ಸಚಿವಾಲಯ ಅನುಮತಿ ನೀಡಿದ್ದು, ಮುಂದಿನ ಕೆಲವು ವಾರಗಳಲ್ಲಿ ಪ್ರಯೋಗ ಪ್ರಾರಂಭವಾಗಲಿದೆ. ವಯಸ್ಕರಿಗೆ ನೀಡಲಾಗುವ ಸ್ಪುಟ್ನಿಕ್ ವಿ ಲಸಿಕೆಗೆ ಭಾರತದಲ್ಲಿ ಈಗಾಗಲೇ ಒಪ್ಪಿಗೆ ದೊರೆತಿದೆ. ಸದ್ಯದಲ್ಲೇ ಮಕ್ಕಳ ಲಸಿಕೆಗೂ ಅನುಮತಿ ದೊರೆಯುವ ಸಾಧ್ಯತೆಯಿದೆ.
ಮಾಡೆರ್ನಾ
ನಮ್ಮ ಲಸಿಕೆಯು ಸುರಕ್ಷಿತವಾಗಿದ್ದು, 12 ವರ್ಷದ ಮಕ್ಕಳನ್ನೂ ಲಸಿಕೆಯು ಸಂರಕ್ಷಿಸಲಿದೆ ಎಂದು ಮಾಡೆರ್ನಾ ಕಂಪೆನಿ ಹೇಳಿದೆ. ಅಮೆರಿಕದಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕರೆ 12-17 ವರ್ಷದ ಮಕ್ಕಳನ್ನು ರಕ್ಷಿಸುವ 2ನೇ ಉತ್ತಮ ಲಸಿಕೆ ಇದಾಗಲಿದೆ. ಇದನ್ನು ಭಾರತಕ್ಕೆ ತರುವ ಮಾತುಕತೆಗಳು ಇನ್ನೂ ಆರಂಭವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.