![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 11, 2021, 8:31 PM IST
ಎಚ್.ಡಿ.ಕೋಟೆ: ಶಾಲೆಗಳು ಶುರುವಾಗಿ ತಿಂಗಳು ಕಳೆದರೂ ಕೆಲ ಹಾಡಿಗಳ ಮಕ್ಕಳು ಶಾಲೆಯನ್ನೇ ಮರೆತು ಕಾಲಹರಣ ಮಾಡುತ್ತಿದ್ದಾರೆ. ತಾಲೂಕಿನ ಭೀಮನಹಳ್ಳಿ ಆಶ್ರಮ ಶಾಲೆಯ ರಾಜೇಗೌಡನಹುಂಡಿ ಹಾಡಿಯ ಆದಿವಾಸಿ ಮಕ್ಕಳು ಶಾಲೆಗೆ ಹೋಗದೇ ಹಾಡಿಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇವರನ್ನು ಮನವೊಲಿಸಿ ಶಾಲೆಗೆ ಕಳುಹಿಸಲು ಯಾರೊಬ್ಬರೂ ಯಾವುದೇ ಕ್ರಮ ವಹಿಸಿಲ್ಲ.
ರಾಜೇಗೌಡನಹುಂಡಿ ಹಾಡಿಯಿಂದ ಕೇವಲ 1 ಕಿ.ಮೀ. ದೂರದ ಭೀಮನಹಳ್ಳಿ ಆಶ್ರಮ ಶಾಲೆಯಲ್ಲಿ ಹಾಡಿಯ ಮಕ್ಕಳು ಪ್ರವೇಶ ಪಡದಿವೆಯಾದರೂ ಇಲ್ಲಿಯ ತನಕ ತರಗತಿಗೆ ಹಾಜರಾಗಿಲ್ಲ. ಆದಿವಾಸಿ ಮಕ್ಕಳು ಶಾಲೆಗೆ ಹೋಗದೇ ರಸ್ತೆಯಲ್ಲಿ ಅಡ್ಡಾತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಮಕ್ಕಳು ಗುಂಪು ಕಟ್ಟಿಕೊಂಡು ಆಟೋಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಈ ಕುರಿತು ಮಕ್ಕಳನ್ನು ಪ್ರಶ್ನಿಸಿದರೆ, “ನಾವು ಶಾಲೆಗೆ ಹೋಗಲ್ಲ, ನಮಗೆ ಓದಕ್ಕೆ ಇಷ್ಟನೂ ಇಲ್ಲ’ ಎಂದು ನಿರುತ್ಸಾಹದ ಮಾತುಗಳನ್ನಾಡಿದರು. ದಿನಪೂರ್ತಿ ಗಿರಿಜನ ಮಕ್ಕಳು ಹಾಡಿಯಲ್ಲಿ ಬೀದಿ ಬೀದಿಗಳನ್ನು ಸುತ್ತುತ್ತಾ ಶಾಲೆಯ ಪರಿವೇ ಇಲ್ಲದಂತೆ ವರ್ತಿಸುತ್ತಿ ದ್ದಾರೆ. ಇವರ ಪೋಷಕರು ಅನಕ್ಷರಸ್ಥರಾಗಿದ್ದು, ಶಾಲೆ ಮಹತ್ವ ಇವರಿಗೆ ಗೊತ್ತಿಲ್ಲ. ಹೀಗಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಉತ್ಸಾಹ ತೋರುತ್ತಿಲ್ಲ.
ಹಾಡಿಯಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಮಕ್ಕಳು ದಾರಿ ತಪ್ಪಿ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಹೀಗಾಗಿ ಶಿಕ್ಷಣ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆ ಯರು ಕಾಳಜಿ ವಹಿಸಿ ಹಾಡಿಗಳ ಮಕ್ಕಳು ಶಾಲೆಗೆ ಹೋಗುವಂತೆ ಮನವೊಲಿ ಸಬೇಕು. ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಗಮನ ಹರಿಸಿ ಆಶ್ರಮ ಶಾಲೆಗೆ ಮಕ್ಕಳು ಬರುವಂತೆ ಕ್ರಮ ವಹಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.