ಚೀನ, ದ.ಕೊರಿಯಾದಲ್ಲಿ ಮತ್ತೆ ಕೋವಿಡ್ ಸೋಂಕಿನ ಹಾವಳಿ
Team Udayavani, Jun 28, 2020, 2:01 PM IST
ಮಣಿಪಾಲ : ಇತ್ತೀಚೆಗೆಯಷ್ಟೇ ಕೋವಿಡ್ ವೈರಸ್ ದಾಳಿ ಕಡಿಮೆಯಾಗಿ ಸ್ವಲ್ಪ ನಿರಾಳವಾಗುತ್ತಿದ್ದ ರಾಷ್ಟ್ರಗಳಲ್ಲಿ ಎರಡನೇ ಹಂತದ ಸೋಂಕು ಹಾವಳಿ ಪ್ರಾರಂಭವಾಗಿದೆ. ಅದರಲ್ಲೂ ಪ್ರಮುಖವಾಗಿ ಕೋವಿಡ್-19 ತವರೂರು ಎಂದೇ ಕುಖ್ಯಾತಿ ಪಡೆದಿದ್ದ ಚೀನ, ದಕ್ಷಿಣ ಕೊರಿಯಾಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಲೇ ಇದೆ. ಇತ್ತ ಅಮೆರಿಕದಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗದಿರುವುದು ಆಂತಕ ಮೂಡಿಸಿದೆ.
ಡ್ರ್ಯಾಗನ್‌ಗೆ ತಟ್ಟಿದ 2ನೇ ಸೋಂಕಿನ ಅಲೆ
ಚೀನದಲ್ಲೂ 2ನೇ ಬಾರಿಗೆ ಸೋಂಕು ಹರಡುತ್ತಿದ್ದು, ನಿರಂತರವಾಗಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಲೇ ಇವೆ. ಶನಿವಾರ ಒಂದೇ ದಿನ 21 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳು ಸ್ಥಳೀಯ ಹಿನ್ನೆಲೆಯದ್ದೇ ಆಗಿವೆ. ಈ ಹಿನ್ನಲೆಯಲ್ಲಿ ಆಡಳಿತಾಧಿಕಾರಿಗಳು ಮತ್ತೂಮ್ಮೆ ಲಾಕ್‌ಡೌನ್ ಮಂತ್ರದ ಮೊರೆ ಹೋಗಿದ್ದು, ಕೆಲ ಸ್ಥಳೀಯ ಪ್ರದೇಶಳಗಳ ಅಂಗಡಿ ಮುಂಗಟ್ಟುಗಳು ಸೇರಿದಂತೆ ಶಾಲೆ ಕಾಲೇಜುಗಳನ್ನು ಬಂದ್ ಮಾಡಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚೀನದಲ್ಲಿ ಎರಡಂಕಿಯ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.
ದಕ್ಷಿಣ ಕೊರಿಯಾಕ್ಕೆ ತಲೆನೋವು
ಸಿಯೋಲ್ ನಗರದಲ್ಲಿ ಎರಡನೇ ಹಂತದ ಸೋಂಕಿನ ಹಾವಳಿ ಪ್ರಾರಂಭವಾಗಿದ್ದು, ಪ್ರತ್ಯೇಕ ಸಿಯೋಲ್ ಸುತ್ತ ಮುತ್ತ ಪ್ರದೇಶಗಳಲ್ಲಿ ಸುಮಾರು 35 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ದೇಶದಲ್ಲಿ ಪಬ್, ರೆಸ್ಟೋರೆಂಟ್, ಚರ್ಚ್ ಸೇರಿದಂತೆ ವಲಸೆ ಕಾರ್ಮಿಕರಿಂದ ಸೋಂಕು ಹರಡುತ್ತಿದ್ದು, ಆರೋಗ್ಯಾಧಿಕಾರಿಗಳಿಗೆ ಸೋಂಕಿನ ಮೂಲ ಪತ್ತೆ ಹಚ್ಚುವುದೇ ದೊಡ್ಡ ತಲೆ ನೋವಾಗಿದೆ.
ಅಮೆರಿಕದಲ್ಲಿ ಲಗಾಮಿಲ್ಲ
ಅಮೆರಿಕದ ಪ್ರಕರಣಗಳ ಸಂಖ್ಯೆ 25 ಲಕ್ಷ ದಾಟಿದ್ದು, ಸೋಂಕು ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರತಿನಿತ್ಯ 20-40 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಮೃತರಾದವರ ಸಂಖ್ಯೆಯಲ್ಲೂ ಮೊದಲ ಸ್ಥಾನದಲ್ಲಿದೆ. ಈವರೆಗೆ 1.26 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದಾಗಿ ಮೃತರಾಗಿದ್ದಾರೆ. ಈಗಿನ ಲೆಕ್ಕಾಚಾರದ ಪ್ರಕಾರ ಸಾವಿನ ಪ್ರಮಾಣ 2 ಲಕ್ಷ ದಾಟುವ ಸಂಭವವಿದೆ. ಪ್ರತಿಯೋರ್ವ ಸೋಂಕಿತನಿಂದ ಕನಿಷ್ಠ 10 ಮಂದಿಗೆ ಸೋಂಕು ತಗುಲುತ್ತಿದೆ ಎಂದು ವರದಿ ಹೇಳಿದೆ. ಇನ್ನು ಹೆಚ್ಚಿನ ಸಂಖ್ಯೆಯ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಸರಕಾರ ವಿಫಲವಾಗಿದ್ದು, ದೇಶದ ಶೇ. 6ರಷ್ಟು ಜನರು ಸೋಂಕಿಗೆ ತುತ್ತಾಗಿದ್ದರೂ ಲಾಕ್‌ಡೌನ್ ನಿಯಮಗಳನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್‌ಶನ್ (ಸಿಡಿಸಿ) ನಿರ್ದೇಶಕ ಡಾ.ರಾಬರ್ಟ್ ರೆಡ್ ಪೀಲ್ಡ… ತಿಳಿಸಿ¨ªಾರೆ. ಅಮೆರಿಕದಲ್ಲಿ ಕೋವಿಡ್-19 ಸೋಂಕಿನ ಅಲೆ ಶುರುವಾಗಿ ಕಳೆದೊಂದು ತಿಂಗಳಲ್ಲಿ 10 ಸಾವಿರಕ್ಕಿಂತ ಹೆಚ್ಚೇ ಪ್ರಕರಣಗಳು ನಿತ್ಯವೂ ಕಂಡುಬಂದಿದ್ದವು. ಇದು ಅಲ್ಲಿನ ಆಡಳಿತವನ್ನು ಚಿಂತೆಗೀಡು ಮಾಡಿದೆ.
ಸೋಂಕಿಗೆ ಕಡಿವಾಣ ಹಾಕಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿರುವ ಅಭಿವೃದ್ಧಿ ರಾಷ್ಟ್ರಗಳ ವಾಸ್ತವ ಚಿತ್ರಣ ಬೇರೆಯದ್ದೇ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.