ಚೀನ: ಲಾಕ್‌ಡೌನ್ ತೆರವಾದರೂ ಕಚೇರಿಗಳು ಖಾಲಿ
Team Udayavani, May 5, 2020, 12:14 PM IST
ಮಣಿಪಾಲ: ಫೆಬ್ರವರಿಯ ಬಳಿಕ ಚೀನದ ಬಹುಪಾಲು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದರು. ಇದು ಅನೇಕರಿಗೆ ಹೊಸ ಅನುಭವವಾಗಿತ್ತು. ಕೆಲವರು ಮನೆಯಿಂದ ಕೆಲಸ ಮಾಡುವ ವಿಧಾನವನ್ನು ಸದ್ಬಳಕೆ ಮಾಡಿಕೊಂಡಿಲ್ಲ. ಈಗ ಬಹುತೇಕರು ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಆರ್ಥಿಕವಾಗಿ ಚೇತರಿಕೆ ಕಾಣದ ಸಂಸ್ಥೆಗಳು ತಮ್ಮ ಕೆಲಸದ ಸಮಯವನ್ನು ಕಡಿತಗೊಳಿಸಿ ಆ ಸಮಯಕ್ಕೆ ಮಾತ್ರ ವೇತನ ಪಾವತಿಸುತ್ತಿವೆ.
ಕಂಪೆನಿಗೆ ಹೊರಗಡೆಯಿಂದ ಹೆಚ್ಚು ಸಂಪರ್ಕಗಳನ್ನು ಹೊಂದಿರುವ ಕೆಲವು ವಿಭಾಗಗಳು ಹೆಚ್ಚು ಮಾರ್ಕೆಟ್‌ಗಳನ್ನು ಎದುರು ನೋಡುತ್ತಿದ್ದಾರೆ. ಕೆಲವು ಸಂಸ್ಥೆಗಳಲ್ಲಿ ಮಾತ್ರ ಅವಧಿಗಿಂತ ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ. ಆದರೆ ಕೋವಿಡ್ -19ನ ಭಯ ಎಲ್ಲರ ಮನಸ್ಸಿನಲ್ಲಿದೆ. ವುಹಾನ್‌ನಲ್ಲಿನ ಆರೋಗ್ಯ ಅಧಿಕಾರಿಗಳು ಸೋಂಕಿನ ಮರುಕಳಿಕೆಯ ಕುರಿತು ಚಿಂತೆಯಲ್ಲಿದ್ದಾರೆ. ಕಚೇರಿ ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಸಂದರ್ಶಕರ ತಾಪಮಾನ ತಪಾಸಣೆಗೆ ಭದ್ರತಾ ಸಿಬಂದಿಯನ್ನು ನೇಮಿಸಿವೆ.
ಕೆಲಸದ ಸಮಯದಲ್ಲಿ ಬದಲಾವಣೆ
ಕಚೇರಿಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಗಳನ್ನು ಹೊಂದಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾದುಕೊಳ್ಳಬೇಕು. ನಗರದ ಎಲ್ಲಾ ಕಚೇರಿಗಳು ಪ್ರತ್ಯೇಕ ಸಮಯವನ್ನು ಪಾಲಿಸುತ್ತಿವೆ. ಸಾರ್ವಜನಿಕ ಸಾರಿಗೆಯಲ್ಲಿ ಜನ ಸಂದಣಿಯನ್ನು ದೂರ ಮಾಡಲು ಹಾಗೂ ಒಂದೇ ಸಮಯದಲ್ಲಿ ಹಲವು ಜನರು ಕಚೇರಿಗೆ ಬರುವುದನ್ನು ತಡೆಯಲು ಲಾಗಿನ್ ಮತ್ತು ಲಾಗೌಟ್ ಸಮಯ ಗಳನ್ನು ಬದಲಾಯಿಸಿಕೊಳ್ಳಲಾಗಿದೆ.
ತೆರೆದ ಶಾಲೆಗಳು
ಜನವರಿ ಅಂತ್ಯದಿಂದ ಮುಚ್ಚಿದ ಶಾಲೆಗಳು ಮಾರ್ಚ್ ಮಧ್ಯದಲ್ಲಿ ಪ್ರಾರಂಭವಾದವು. ತಾಪಮಾನ ಪರೀಕ್ಷೆ, ಮಾಸ್ಕ್ ಗಳು ಆರೋಗ್ಯ ಮುನ್ನೆಚ್ಚರಿಕೆಗಳನ್ನು ಶಾಲೆಗಳಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಚೀನ ಸಹಜ ಸ್ಥಿತಿಗೆ ಬಂದಿದ್ದರೂ ಜನರಲ್ಲಿ ಭಯ ಕಡಿಮೆಯಾಗಿಲ್ಲ.
ಚೀನದಲ್ಲಿ ಲೂನಾರ್ ನ್ಯೂ ಇಯರ್ ಅನ್ನು ಆಚರಿಸಲಾಗುವ ಕಾರಣ ಸಾರ್ವತ್ರಿಕ ರಜೆಯನ್ನೂ ನೀಡಲಾಗುತ್ತದೆ. ತನ್ನ ಹಳೆಯ ಸ್ನೇಹಿತರ ಜತೆ ಲೂನಾರ್ ಹಬ್ಬವನ್ನು ಆಚರಿಸಲು ವುಹಾನ್‌ನಿಂದ ಕೆಲವರು ತಮ್ಮ ಹುಟ್ಟೂರಿಗೆ ಹೋಗಿದ್ದರು. ಇದಾದ ಎರಡು ದಿನಗಳ ಬಳಿಕ ಲಾಕ್‌ಡೌನ್ ಜಾರಿಯಾಗಿತ್ತು. ಜನರು ಇದ್ದಲ್ಲೇ 68 ದಿನ ಬಂದಿಯಾಗಬೇಕಾಯಿತು. ಎರಡು ತಿಂಗಳ ಬಳಿಕ ಮಾರ್ಚ್ 29ರಂದು ಲಾಕ್‌ಡೌನ್ ತೆರವಾದ ಸಂದರ್ಭ ಎಲ್ಲರೂ ಕೆಲಸಕ್ಕೆ ಹೋಗಲು ತೊಡಗಿದ್ದಾರೆ. ಸಾರ್ವಜನಿಕ ಪ್ರಯಾಣದಲ್ಲಿ ಜನರು ಮಾಸ್ಕ್ ಗಳನ್ನು ಧರಿಸಿದ್ದು, ಹೊರತುಪಡಿಸಿದರೆ ಬೇರೆ ಯಾವುದೇ ಬದಲಾವಣೆಗಳು ಕಂಡುಬರುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.