![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 18, 2024, 12:10 AM IST
ಬೀಜಿಂಗ್: ಜಗತ್ತಿಗೇ ಕೋವಿಡ್ ಸೋಂಕು ಹಬ್ಬಿಸಿ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಚೀನ ಜನಸಂಖ್ಯೆ ಕುಸಿತವನ್ನು ಅನುಭವಿಸಿದೆ. ಸತತ ಎರಡನೇ ವರ್ಷ ಕೂಡ ಆ ದೇಶದ ಒಟ್ಟು ಜನಸಂಖ್ಯೆ 20 ಲಕ್ಷ ಕಡಿಮೆಯಾಗಿದೆ. ಆದರೆ 2022ಕ್ಕೆ ಹೋಲಿಸಿದರೆ, ಚೀನ ಆರ್ಥಿಕತೆ ಶೇ.5.2ರಷ್ಟು ವೃದ್ಧಿಯಾಗಿದೆ.
ಕೋವಿಡ್ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಚೀನದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ವಾಪಸ್ ಪಡೆದ ನಂತರವೂ ಜನಸಂಖ್ಯೆ ವೃದ್ಧಿಯಾಗುವಲ್ಲಿ ನೆರವಾಗಿಲ್ಲ. ಜನನ ಪ್ರಮಾಣಕ್ಕಿಂತಲೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಚೀನದಲ್ಲಿ ಕಳೆದ ವರ್ಷ 11.1 ಮಿಲಿಯನ್ ಮಂದಿ ಜನರು ಅಸುನೀಗಿದ್ದರು. 2022ರಲ್ಲಿ ಜನರ ಸಾವಿನ ಪ್ರಮಾಣ 10.41 ಮಿಲಿಯನ್ ಆಗಿತ್ತು. 1961ರ ಬಳಿಕ ಮೊದಲ ಬಾರಿಗೆ 2022ರಿಂದ ಡ್ರ್ಯಾಗನ್ ರಾಷ್ಟ್ರದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ ಶುರುವಾಗಿತ್ತು.
ಸತತ ಏಳನೇ ವರ್ಷ ಜನನ ಪ್ರಮಾಣ ಕುಸಿತಗೊಂಡಿದೆ. ಸರ್ಕಾರದ ಪ್ರಕಾರ ಕಳೆದ ವರ್ಷ 9 ಮಿಲಿಯನ್ ಮಕ್ಕಳು ಜನಿಸಿದ್ದಾರೆ. 2016ಕ್ಕೆ ಹೋಲಿಕೆ ಮಾಡಿದರೆ ಇದು ಅರ್ಧದಷ್ಟಾಗಿದೆ. ಚೀನ ಈಗ ಪ್ರತಿ 1 ಸಾವಿರ ಮಂದಿಗೆ ಶೇ. 6.39 ಫಲವತ್ತತೆ ಹೊಂದಿದೆ.
ಜಿಡಿಪಿ ಕೂಡ ಚೇತರಿಕೆ: ಚೀನದ ಜಿಡಿಪಿ ಚೇತರಿಕೆ ಕಂಡಿದೆ. 2022-23ರ ನಾಲ್ಕನೇ ತ್ತೈಮಾಸಿಕಕ್ಕೆ ಹೋಲಿಸಿದರೆ 2023-24ರ ನಾಲ್ಕನೇ ತ್ತೈಮಾಸಿಕದಲ್ಲಿ ಜಿಡಿಪಿ ಶೇ.5.2ರಷ್ಟು ಏರಿಕೆಯಾಗಿದೆ. ಚೀನ ಈ ಅವಧಿಯಲ್ಲಿ ಶೇ.5ರಷ್ಟು ಜಿಡಿಪಿ ಏರಿಕೆಯ ಗುರಿ ಹೊಂದಿತ್ತು. ಗುರಿಗೂ ಮೀರಿ ಜಿಡಿಪಿ ಏರಿಕೆ ಕಂಡಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.