ಚಿತ್ರದುರ್ಗ: ದಾವಣಗೆರೆ-ತುಮಕೂರು ರೈಲು ಮಾರ್ಗ ನನೆಗುದಿಗೆ
890 ಎಕರೆ ಪೈಕಿ 400 ಎಕರೆಯ ಭೂಮಾಲೀಕರಿಗೆ ಪರಿಹಾರ ನೀಡಲಾಗಿದೆ
Team Udayavani, Jul 11, 2023, 5:30 PM IST
ಚಿತ್ರದುರ್ಗ: ಸರ್ಕಾರಿ ಸಾರಿಗೆ ಹಾಗೂ ರೈಲು ಸಂಪರ್ಕ ವಿಚಾರದಲ್ಲಿ ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಗೆ ಹಲವು ದಶಕಗಳಿಂದ ಅನ್ಯಾಯವಾಗುತ್ತಿದೆ. ಕಳೆದ ಎರಡು ದಶಕಗಳಿಂದ ಅಸ್ತಿತ್ವದಲ್ಲಿರುವ ದಾವಣಗೆರೆ-ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗ ಇದಕ್ಕೆ ಸ್ಪಷ್ಟ ಉದಾಹರಣೆ.
2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ .ಯಡಿಯೂರಪ್ಪ 1801 ಕೋಟಿ ರೂ. ವೆಚ್ಚದ ನೇರ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿ ರಾಜ್ಯದಿಂದ ಯೋಜನೆಯ ಶೇ. 50ರಷ್ಟು ವೆಚ್ಚ ಭರಿಸಲು ಒಪ್ಪಿಗೆ ಸೂಚಿಸಿದ್ದರು. 2011-12ರಲ್ಲಿ ಯೋಜನೆಗೆ ಮಂಜೂರಾತಿ ದೊರೆತಿದ್ದು, 2019ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ನಿಗ ದಿತ ಅವಧಿ ಗಿಂತ 4 ವರ್ಷ ಹೆಚ್ಚೇ
ಆಗಿದ್ದರೂ, ರೈಲ್ವೆ ಹಳಿ ಅಳವಡಿಸುವ ಕಾಮಗಾರಿ ಆರಂಭವಾಗಿಲ್ಲ. ಆಳುವ ಸರ್ಕಾರಗಳು ಕೇಂದ್ರ ಹಾಗೂ ರಾಜ್ಯದಲ್ಲಿ ಬದಲಾವಣೆಯಾಗಿದ್ದೂ ಹಿನ್ನಡೆಗೆ ಕಾರಣವಾಗಿತ್ತು.
2013ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಿದ್ದರಾಮಯ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಆದಾಯ ತಂದುಕೊಡುವ ಯೋಜನೆಗೆ ರಾಜ್ಯ ಸರ್ಕಾರ ಏಕೆ ಶೇ.50ರಷ್ಟು ಅನುದಾನ ಭರಿಸಬೇಕು ಎಂದು ಪ್ರಶ್ನಿಸಿತ್ತು. ಆನಂತರ ನಡೆದ ಹಲವು ಪತ್ರ ವ್ಯವಹಾರಗಳ ಬಳಿಕ ಒಪ್ಪಿ ಅನುದಾನ ಒದಗಿಸಿತ್ತು. ನಂತರ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರಗಳು ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ.
ಸದ್ಯ ರೈಲ್ವೆ ಯೋಜನೆ ಭೂಸ್ವಾಧೀನಕ್ಕೆ ಅಂದಾಜು 325 ಕೋಟಿ ರೂ.ಗಳಷ್ಟು ಅನುದಾನದ ಅಗತ್ಯವಿದೆ. ಜು.7ರಂದು ಸಿಎಂ ಸಿದ್ದರಾಮಯ್ಯ ಮಂಡಿಸುವ ಬಜೆಟ್‌ನಲ್ಲಿ ಈ ಯೋಜನೆಗೆ ಎಷ್ಟು ಅನುದಾನ ಘೋಷಣೆ ಮಾಡುತ್ತಾರೆ ಎನ್ನುವ ಆಧಾರದಲ್ಲಿ ಕಾಮಗಾರಿಯ ವೇಗವನ್ನು ಅಳೆಯಬಹುದಾಗಿದೆ.
“ಮಧ್ಯ ಕರ್ನಾಟಕ’ ಎಂದು ಹೆಸರೇ ಹೇಳುವಂತೆ ಇಲ್ಲಿ ನೇರ ರೈಲು ಸಂಪರ್ಕ ಸಿಕ್ಕಿದರೆ ಇಡೀ ರಾಜ್ಯಕ್ಕೆ ಅನುಕೂಲವಿದೆ. ದಾವಣಗೆರೆ ಅಥವಾ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಹೋಗಲು ಸದ್ಯಕ್ಕೆ ಇರುವ ಮಾರ್ಗ ಹಾಸನ, ಚಿಕ್ಕಮಗಳೂರು ಮೂಲಕ ಹಾದು ಹೋಗುತ್ತದೆ. ಚಿಕ್ಕಜಾಜೂರು ಜಂಕ್ಷನ್ ಇದ್ದರೂ ಅಲ್ಲಿಗೆ ಜಿಲ್ಲೆಯ ಇತರೆ ಭಾಗದ ಜನರು ಹೋಗಲಾರರು. ಈ ನಿಟ್ಟಿನಲ್ಲಿ 192 ಕಿಮೀ ಉದ್ದದ ದಾವಣಗೆರೆ-ಚಿತ್ರ ದುರ್ಗ-ತುಮಕೂರು ನೇರ ರೈಲು ಮಾರ್ಗದಿಂದ ದಾವಣಗೆರೆ-ಬೆಂಗಳೂರಿನ ನಡುವಿನ ಅಂತರ 53 ಕಿಮೀ ಕಡಿಮೆಯಾಗಲಿದೆ. ಹುಬ್ಬಳ್ಳಿ, ಬೆಳಗಾವಿ, ಗೋವಾ, ಮುಂಬೈಗೆ ಸಂಚಾರದ ಸಮಯ 1 ಗಂಟೆ ಕಡಿಮೆಯಾಗಲಿದೆ.
ಭೂಸ್ವಾಧೀನ ಪರಿಸ್ಥಿತಿ ಹೇಗಿದೆ?
ಈ ಯೋಜನೆಗೆ ಚಿತ್ರದುರ್ಗ ಜಿಲ್ಲೆಯಲ್ಲೇ ಅತಿ ಹೆಚ್ಚು ಭೂಸ್ವಾಧೀನ ಆಗಬೇಕಿದೆ. ಜಿಲ್ಲೆಯ 1242 ಎಕರೆ ಭೂಸ್ವಾಧೀನವಾಗಬೇಕು. ಇದರಲ್ಲಿ ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳಲ್ಲಿ 890 ಎಕರೆಗೆ ಅವಾರ್ಡ್ ಆಗಿದೆ. ಉಳಿದ 331 ಎಕರೆಯ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಇಲ್ಲಿ ಅವಾರ್ಡ್ ಆಗಿರುವ 890 ಎಕರೆ ಪೈಕಿ 400 ಎಕರೆಯ ಭೂಮಾಲೀಕರಿಗೆ ಪರಿಹಾರ ನೀಡಲಾಗಿದೆ. ಉಳಿದ 490 ಎಕರೆಗೆ ಪರಿಹಾರ ಪಾವತಿ ಕಾರ್ಯ ಪ್ರಗತಿಯಲ್ಲಿದೆ. ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ 331 ಎಕರೆ ಹಾಗೂ ಅವಾರ್ಡ್ ಅನುಮೋದನೆ ಆಗಿರುವ 890 ಎಕರೆಯಲ್ಲಿ 250 ಎಕರೆ ಸೇರಿ ಒಟ್ಟು 581 ಎಕರೆಗೆ 325 ಕೋಟಿ ರೂ. ಅನುದಾನ ನೀಡಬೇಕಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಯೋಜನೆಗೆ ಅಗತ್ಯವಿರುವ 209 ಎಕರೆಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಇಲಾಖೆ ಕಾಮಗಾರಿ ಆರಂಭಿಸಿದೆ.
ಸಂಚಾರ ಸಮಯ ಉಳಿಯಬೇಕಾದರೆ ದಾವಣಗೆರೆ-ತುಮಕೂರು ನಡುವೆ ನೇರ ಮಾರ್ಗ ಮಾಡುವುದಿದೆ. ಅದಕ್ಕೆ ಬೇಕಾಗುವ
ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಿಕೊಟ್ಟರೆ 45 ನಿಮಿಷ ಉಳಿಯಲಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮುತುವರ್ಜಿ ವಹಿಸುತ್ತಾರೆ ಎಂದು ಭಾವಿಸಿದ್ದೇನೆ. ನೇರ ಮಾರ್ಗವಾದರೆ 4 ಗಂಟೆ 30 ನಿಮಿಷಗಳಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ತಲುಪಬಹುದಾಗಿದೆ.
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
*ತಿಪ್ಪೇಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.