ಚಿತ್ರಾಪುರ ಶ್ರೀ ದುರ್ಗಾಪರಮೇಶರೀ ದೇವಸ್ಥಾನ;ಬ್ರಹ್ಮಕಲಶೋತ್ಸವ,ಧಾರ್ಮಿಕ ಸಭೆ,ಧ್ವಜ ಪ್ರತಿಷ್ಠೆ
Team Udayavani, Mar 11, 2023, 2:11 PM IST
ಚಿತ್ರಾಪುರ: ಇಲ್ಲಿನ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಬೋಳೂರು ಅಮೃತಾನಂದಮಯೀ ಮಠದ ಸಾಧ್ವಿ ಮಂಗಳಾಮೃತಪ್ರಾಣ, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶೀಪಾದರು ಆಶೀರ್ವಚನ ನೀಡಿದರು.
ಕೆನರಾ ಕಾಲೇಜು ಪ್ರಾಧ್ಯಾಪಿಕೆ ಪ್ರಮಿಳಾ ರಾವ್ ಧಾರ್ಮಿಕ ಪ್ರವಚನ ನೀಡಿದರು. ಪಾಲಿಕೆ ಸದಸ್ಯರಾದ ಸುಮಿತ್ರಾ ಕರಿಯ, ವೇದಾವತಿ, ಸುಮಂಗಲಾ ರಾವ್, ಶಾಂತಾ ಕರ್ಕೇರ ಕುಳಾಯಿ, ಹೇಮಾವತಿ ಧಮ್‌ಪಾಲ್ ಚಿತ್ರಾಪುರ, ಹೇಮ ಕೇಶವ ಬೈಕಂಪಾಡಿ, ಸುಜಾತಾ ಕೃಷ್ಣ ಶೆಟ್ಟಿ ಶ್ರೀ ದ್ವಾರ ಚಿತ್ರಾಪುರ, ವಸಂತಿ ಶ್ರೀನಿವಾಸ ಗೋಕುಲನಗರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಸಾಲ್ಯಾನ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಹರೀಶ್ಚಂದ್ರ ಬೈಕಂಪಾಡಿ ನಿರೂಪಿಸಿದರು.
ಅಷ್ಟೋತ್ತರ ಶತಕಲಶಾಭಿಷೇಕ ಶುಕ್ರವಾರ ಉಮೇಶ್ ಟಿ. ಕರ್ಕೇರ ಹಾಗೂ ಕುಟುಂಬಸ್ಥರು ಕೊಡಮಾಡಿದ ಕೊಡಿಮರದಲ್ಲಿ ಧ್ವಜಪ್ರತಿಷ್ಠೆ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ಕುಡುಪು ವೇ| ಮೂ| ನರಸಿಂಹ ತಂತ್ರಿ, ವೇ| ಮೂ| ಕೃಷ್ಣರಾಜ ತಂತ್ರಿಗಳು, ಚಿತ್ರಾಪುರ ಮಠದ ಶ್ರೀ ವಿದ್ಯೆàಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನೆರವೇರಿಸಿದರು.
ಶ್ರೀ ಗಣಪತಿ ಹಾಗೂ ಶಾಸ್ತಾ ದೇವರಿಗೆ ಬ್ರಹ್ಮ ಕುಂಭ ಸಹಿತ ಅಷ್ಟೋತ್ತರ ಶತಕಲಶಾಭಿಷೇಕ ಮಹಾಪೂಜೆ ಜರಗಿತು.
ಇಂದಿನ ಕಾರ್ಯಕ್ರಮ
ಶನಿವಾರ ಬಲಿಶಿಲಾ ಪ್ರತಿಷ್ಠೆ, ಶ್ರೀ ಮಠದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ವಿಜಯಧ್ವಜ ಮಂಟಪದಲ್ಲಿ ಭಜನೆ, ಸಂಜೆ 5ಕ್ಕೆ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.
ಸಂಜೆ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಕಟೀಲು ವಾಸುದೇವ ಆಸ್ರಣ್ಣ ಉಪನ್ಯಾಸ ನೀಡಲಿರುವರು. ಬಳಿಕ ಏಳುವೆರ್ ದೈಯೈರ್ ನೃತ್ಯರೂಪಕ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.