ಸಾವೊ ಪಾಲೊ : ಕಾರಲ್ಲೇ ಕೂತು ಸಿನೆಮಾ ನೋಡುವ ಮಜಾ
Team Udayavani, Jun 28, 2020, 2:59 PM IST
ಸಾವೊ ಪಾಲೊ : ಕೋವಿಡ್-19ನಿಂದ ಕ್ರೀಡೆಗಳಿಂದ ಹಿಡಿದು ಸಿನೆಮಾ ಇತ್ಯಾದಿ ಮನೋರಂಜನ ಕಾರ್ಯಕ್ರಮಗಳಿಗೆ ಬ್ರೇಕ್ ಬಿದಿದ್ದೆ. ಒಂದು ಹಂತಕ್ಕೆ ಎಲ್ಲ ದೇಶಗಳು ಆನ್‌ಲಾಕ್ ಆದರೂ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳು ಇನ್ನು ಲಾಕ್ ಆಗಿವೆ.
ಈ ನಡುವೆ ಬ್ರೆಜಿಲ್ ದೇಶ ವಿಭಿನ್ನ ರೀತಿಯಲ್ಲಿ ಚಲನಚಿತ್ರ ವೀಕ್ಷಣಾ ಕಾರ್ಯಕ್ರವನ್ನು ಆಯೋಜನೆ ಮಾಡಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ವಿಶೇಷ ಗಮನ ಸೆಳೆದಿದೆ.
ಸಾವೊ ಪೌಲೊದ ಸಾಕರ್ ಕ್ರೀಡಾಂಗಣದಲ್ಲಿ ನಡೆಸಲಾಗುವ ಮನರಂಜನಾ ಡ್ರೈವ್-ಇನ್ ಸಂಸ್ಕೃತಿ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಳ್ಳುತ್ತಿದ್ದು, ಕೋವಿಡ್-19 ಬಿಕ್ಕಟ್ಟಿನ ನಡುವೆಯೂ ಮನೋಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಈ ಮನರಂಜನಾ ಡ್ರೈವ್ – ಇನ್ ಕಾರ್ಯಕ್ರಮ ವ್ಯಾಪಕವಾಗಿ ಬೆಳೆಯುತ್ತಿದ್ದು, ಜನ ಕಾರಿನಲ್ಲಿ ಕುಳಿತುಕೊಂಡೇ ಬೃಹತ್ ಪರದೆಯ ಮೇಲೆ ಚಲನಚಿತ್ರ ವೀಕ್ಷಿಸಬಹುದಾಗಿದೆ. ವಿಶೇಷವೆಂದರೆ ಈ ಕ್ರೀಡಾಂಗಣದಲ್ಲಿ ಸುಮಾರು 300 ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸ ಬಹುದಾಗಿದ್ದು, ಪಿಚ್‌ಗಳನ್ನು ಬಳಸಿಕೊಂಡು ಉತ್ತಮ ಧ್ವನಿ ಸೌಲಭ್ಯಗಳ ವ್ಯವಸ್ಥೆಯನ್ನು ಮಾಡಿದೆ .
ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲೂ ಪಾಲ್ಮೇರಾಸ್‌ನ ಸಾಕರ್ ಕ್ಲಬ್ ಅದರ ಚಟುವಟಿಕೆಗಳನ್ನು ನಿಲ್ಲಿಸದೇ, ಆರ್ಥಿಕತೆಗೆ ಸಹಾಯ ಮಾಡುವಲ್ಲಿ ಮನರಂಜನಾ ಉದ್ಯಮವು ಕೊಡುಗೆ ನೀಡುತ್ತಿದೆ.
ಯಾವುದೇ ಸಮಯದಲ್ಲಿ ಎಂತಹ ಪರಿಸ್ಥಿತಿ ಬೇಕಾದರೂ ಎದುರಾಗಬಹುದೆಂಬ ಪಾಠವನ್ನು ಸದ್ಯದ ಪರಿಸ್ಥಿತಿ ಮನದಟ್ಟು ಮಾಡಿಸಿದ್ದು, ಎಲ್ಲ ಸಂದರ್ಭಗಳಿಗೆ ಹೊಂದುಕೊಂಡು ಹೋಗಬೇಕು ಎಂಬುದನ್ನು ಕೋವಿಡ್-19 ಸೃಷ್ಟಿಸಿರುವ ಬಿಕ್ಕಟ್ಟು ಅರ್ಥಮಾಡಿಸಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿವಾಸಿಯೊಬ್ಬರು ತಿಳಿಸಿ¨ªಾರೆ.
ಇನ್ನು ಕಾರ್ಯಕ್ರಮದಲ್ಲಿ ಕ್ಲಾಸಿಕ್ ಚಲನಚಿತ್ರಗಳು, ಪ್ರದರ್ಶನಗಳು, ಸ್ಟ್ಯಾಂಡ್ – ಅಪ್ ಕಾಮಿಡಿ ಮತ್ತು ಮಕ್ಕಳ ರಂಗಮಂದಿರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಜೂನ್ 24ರಂದು ಪ್ರಾರಂಭಗೊಂಡಿರುವ ಈ ಕಾರ್ಯಕ್ರಮ ಜುಲೈ 19ರವರೆಗೆ ನಡೆಯಲಿದೆ. ಗರಿಷ್ಠ ನಾಲ್ಕು ಜನರಿರುವ ಒಂದು ಕಾರಿನ ಟಿಕೆಟ್ ಬೆಲೆ 23 ರಿಂದ 100 ಡಾಲರ್‌ಗಳವರೆಗೆ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.