ನಾವು ನೋಡಿದ ಸಿನಿಮಾ: ಶ್ವಾನ ಜಗದೊಳಗೆಒಂದು ಸುತ್ತಾಟ
Team Udayavani, May 5, 2020, 3:02 PM IST
A DOG’S PURPOSE
ಭಾಷೆ- ಇಂಗ್ಲಿಷ್
ಅವಧಿ- 120 ನಿಮಿಷ
ಎಲ್ಲಿ ಸಿಗುತ್ತದೆ? ಯು ಟ್ಯೂಬ್
ನಾನ್ಯಾಕೆ ಬದುಕಿದ್ದೇನೆ? ನನ್ನೀ ಬದುಕಿನ ಉದ್ದೇಶವಾದ್ರೂ ಏನು? ಆಗಾಗ ತಳೆಯೋ ನಮ್ಮ ಹುಟ್ಟಿಗೊಂದು ನಿರ್ದಿಷ್ಟವಾದ ಧ್ಯೇಯವೇನಾದ್ರೂ ಇರಲೇ ಬೇಕಲ್ಲ, ಇರೋದು ಹೌದೇ ಆಗಿದ್ರೆ ಅದು ಏನಿರಬಹುದು? ಸಾವು- ಬದುಕಿನ ಈ ಕಣ್ಣಾಮುಚ್ಚಾಲೆಯಾಟ, ಏನೋ ಮಹತ್ತರವಾದ ಕಾರ್ಯಕ್ಕಲ್ಲದೆ ವಿನಾಕಾರಣ ಜರುಗಲು ಸಾಧ್ಯವೇ?- ಇದು ಬೈಲೀ ಎಂಬ ನಾಯಿಯೊಂದು ತನಗೆ ತಾನೇ ಕೇಳಿಕೊಳ್ಳುವ ಪ್ರಶ್ನೆ.
ಇದಕ್ಕೆ ಕಾರಣವೂ ಇದೆ. ಐವತ್ತರ ದಶಕದಲ್ಲಿ, ಟೋಬಿ ಎಂಬ ನಾಯಿಮರಿಯಾಗಿ ಜನ್ಮ ತಳೆಯುವುದರೊಂದಿಗೆ ಶುರುವಾಗಿ, ಯಾವುದೇ ಭದ್ರತೆಯಿರದ ಬದುಕಿನ ಯಾನದಲ್ಲಿ, ಹಲವಾರು ಹುಟ್ಟುಪಡೆದರೂ, ಅಕಾಲಿಕವಾಗಿ ಮರಣ ಹೊಂದುತ್ತಾ ಸಾಗುತ್ತಿದ್ದ ಜನ್ಮಾಂತರಗಳ ಬದುಕಿನ ಹಾದಿಯಲ್ಲಿ, ಅದರ ಹುಟ್ಟಿಗೊಂದು ಸಾರ್ಥಕತೆ ಸಿಕ್ಕಿದ್ದು ಮಾತ್ರ ಅರವತ್ತರ ದಶಕದಲ್ಲಿ. ಅದೂ ಅನಿರೀಕ್ಷಿತ ಘಟನೆಯೊಂದರಲ್ಲಿ ಈಥನ್ ಎಂಬ ಬಾಲಕನ ತೆಕ್ಕೆಗೆ ಸೇರಿದ ನಂತರ. ಈಗ ನಾಯಿಮರಿಗೆ ಹೊಸಮನೆ ಹೊಸಸಂಗಾತಿಯ ಜೊತೆಗೆ, ಬೈಲಿಯೆಂಬ ಹೊಸದೊಂದು ಹೆಸರೂ ಜೊತೆಯಾಗುತ್ತದೆ. ಇದಿಷ್ಟು ಒಂದು ಕಥೆಯಾದರೆ, ಇಲ್ಲಿಂದ ಮುಂದೆ ನಡೆಯೋದೇ ಮತ್ತೂಂದು ರೋಚಕ ಅಧ್ಯಾಯ. ಇಲ್ಲಿಂದ ಮುಂದೆಯೂ ನಾಯಿಯಾಗಿಯೇ ಹಲವಾರು
ಜನ್ಮಗಳನ್ನು ತಳೆಯುತ್ತಾ ಸಾಗುತ್ತದೆ ಬೈಲಿ. ತನ್ನೀ ಬದುಕಿನ ಯಾತ್ರೆಗೆ ಕಾರಣ ಹಾಗೂ ಅಂತ್ಯ ಏನು ಎಂಬ ಅದರ ಪ್ರಶ್ನೆಗೆ ಉತ್ತರ ಸಿಗೋದು ಮಾತ್ರ ಕ್ಲೈಮ್ಯಾಕ್ಸಿನಲ್ಲಿ.
ಹೀಗೆ, ನಾಯಿಯೊಂದರ ಬದುಕಿನ ಹಲವಾರು ಮಜಲುಗಳನ್ನು, ಅದರದೇ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸುತ್ತಾ, ನಮ್ಮೊಳಗಿನ ಹಲವಾರು ಗೊಂದಲಗಳಿಗೆ, ಶ್ವಾನವೊಂದರ ರೂಪದಲ್ಲಿ ಅದರ ಬದುಕಿನಲ್ಲಾಗೋ ಘಟನಾವಳಿಗಳ ಮೂಲಕವೇ, ಉತ್ತರಿಸುತ್ತಾ ಸಾಗುವ ಅಪರೂಪದ ಸಿನಿಮಾ, 2017ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ತೆರೆಕಂಡ ಅ A Dog’s purpose ನಾಯಿಯನ್ನೇ ಪ್ರಧಾನ ಪಾತ್ರವನ್ನಾಗಿಸಿ, ಹಾಲಿವುಡ್ಡಿನಲ್ಲಿ ಎ ಡಾಗ್ಸ್ ವೇ ಹೋಮ್, ಹಾಚಿಕೋ, ಎ ಡಾಗ್ಸ್ ಜರ್ನಿ, ಮಾರ್ಲೆ ಮಿ, ಏಯ್ಟ್ ಬಿಲೋ ನಂತಹ ಹಲವಾರು ಅದ್ಭುತ ಸಿನಿಮಾಗಳು ತೆರೆಕಂಡಿವೆಯಾದರೂ, ಬಹುತೇಕ ಎಲ್ಲಾ ಸಿನಿಮಾಗಳ ಕಥೆಯೂ, ನಾಯಿ ಹಾಗೂ ಒಡೆಯನ ಅನ್ಯೋನ್ಯತೆ- ಅಗಲಿಕೆಗಳನ್ನೇ ಕಥಾ ವಸ್ತುವಾಗಿ ಹೊಂದಿವೆ. ಆದರೆ ಈ ಚಿತ್ರದಲ್ಲಿ ಇವುಗಳಿಗೆಲ್ಲಾ ಭಿನ್ನವೆಂಬಂತೆ, ಇಡೀ ಚಿತ್ರವನ್ನು ನಾಯಿಯೊಂದು ತನ್ನ ಹಲವಾರು ರೂಪಗಳ ಮುಖಾಂತರ ಜಗತ್ತನ್ನು ನೋಡುವಂತೆ, ತನ್ನದೇ ರೀತಿಯಲ್ಲಿ ಅರ್ಥೈಸಿಕೊಳ್ಳುವಂತೆ ಚಿತ್ರಿಸಲಾಗಿದೆ. ಅದೇ ಈ ಚಿತ್ರದ ವಿಶೇಷ.
ಸುಧೀರ್ ಸಾಗರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.