Rs 2,000: ನಾಗರಿಕರ ಬಳಿ ಇದೆ 2 ಸಾವಿರ ರೂ.ನ 9,760 ಕೋಟಿ ಮೌಲ್ಯದ ನೋಟುಗಳು
Team Udayavani, Dec 1, 2023, 9:40 PM IST
ಮುಂಬೈ: ಈವರೆಗೆ 2 ಸಾವಿರ ರೂ. ಮುಖಬೆಲೆಯ ಒಟ್ಟು ಶೇ.97.26ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಬಂದಿದ್ದು, ಕೇವಲ 9,760 ಕೋಟಿ ರೂ. ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕರ ಬಳಿಯೇ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಶುಕ್ರವಾರ ಮಾಹಿತಿ ನೀಡಿದೆ.
ಮೇ 19ರಂದು ಆರ್ಬಿಐ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು. ಅಂದು ದೇಶಾದ್ಯಂತ 3.56 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ನ.30ರ ವೇಳೆಗೆ ಈ ಮೌಲ್ಯ 9,760 ಕೋಟಿ ರೂ.ಗಳಿಗೆ ಇಳಿದಿದೆ. ಅಂದರೆ, ಶೇ.97.26ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಆರ್ಬಿಐ ಹೇಳಿದೆ. ಈಗಲೂ ನಾಗರಿಕರು ತಮ್ಮಲ್ಲಿರುವ ನೋಟುಗಳನ್ನು ಆರ್ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಜಮೆ ಅಥವಾ ವಿನಿಮಯ ಮಾಡಿಕೊಳ್ಳಲು ಹಾಗೂ ಭಾರತೀಯ ಅಂಚೆ ಮೂಲಕ ರವಾನಿಸಲು ಅವಕಾಶವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.