ಸಿಟಿ ಬಸ್‌ ಪ್ರಯಾಣ ದರ ಪರಿಷ್ಕರಣೆ ಸಾಧ್ಯತೆ

ಸಾರಿಗೆ ಪ್ರಾಧಿಕಾರ ಆಯುಕ್ತರ ನೇತೃತ್ವದಲ್ಲಿ ಬಸ್‌ ಮಾಲಕರ ಸಂಘದ ಸಭೆ

Team Udayavani, May 9, 2020, 6:07 AM IST

ಸಿಟಿ ಬಸ್‌ ಪ್ರಯಾಣ ದರ ಪರಿಷ್ಕರಣೆ ಸಾಧ್ಯತೆ

ಸಾಂದರ್ಭಿಕ ಚಿತ್ರ.

ಮಂಗಳೂರು: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ಮಂಗಳೂರು ನಗರದಲ್ಲಿ ಸಿಟಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದು, ಬಸ್‌ ಓಡಾಟಕ್ಕೆ ಅನುಮತಿ ನೀಡಿದ ಬಳಿಕ ಬಸ್‌ ಪ್ರಯಾಣ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.

ಕಳೆದ ಕೆಲವು ತಿಂಗಳ ಹಿಂದೆ ಕೆಎಸ್ಸಾರ್ಟಿಸಿ ಬಸ್‌ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಖಾಸಗಿ ಸರ್ವೀಸ್‌-ಸಿಟಿ ಬಸ್‌ಗಳ ಪ್ರಯಾಣ ದರ ಹೆಚ್ಚಿಸುವಂತೆ ಬಸ್‌ ಮಾಲಕರ ಒಕ್ಕೂಟವು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಕೋವಿಡ್-19 ಸಂಬಂಧ ಬೆಂಗಳೂರಿನಲ್ಲಿ ಶುಕ್ರವಾರ ಸಾರಿಗೆ ಪ್ರಾಧಿಕಾರ ಆಯುಕ್ತರ ನೇತೃತ್ವದಲ್ಲಿ ಬಸ್‌ ಮಾಲಕರ ಸಂಘದ ಸಭೆ ನಡೆದಿದ್ದು, ಇದರಲ್ಲಿ ಬಸ್‌ ದರ ಪರಿಷ್ಕರಣೆ ಕುರಿತಂತೆ ತೀರ್ಮಾನಕ್ಕೆ ಬರಲಾಗಿದೆ.

ರಾಜ್ಯ ಸರಕಾರ 2013ರಿಂದ ಸರ್ವೀಸ್‌ ಬಸ್‌ ಪ್ರಯಾಣ ದರ ಪರಿಷ್ಕರಣೆ ಮಾಡಲಿಲ್ಲ. ಆದರೆ, ಡಿಸೇಲ್‌ ಮೇಲಿನ ಸೆಸ್‌ ದರ ಆಧಾರದಲ್ಲಿ 2018ರ ಎಪ್ರಿಲ್‌ನಲ್ಲಿ ಮಂಗಳೂರಿನಲ್ಲಿ ಓಡಾಡುವ ಸಿಟಿ ಬಸ್‌ ದರ ಮೊದಲ ಸ್ಟೇಜ್‌ಗೆ 1 ರೂ.ನಂತೆ ಹೆಚ್ಚಿಸಲಾಗಿತ್ತು. ಅದೇ ರೀತಿ ಟೋಲ್‌ ದರ ಹೆಚ್ಚಳವಾದ ಕಾರಣ ಟೋಲ್‌ ಮುಖಾಂತರ ಸಾಗುವ ಸರ್ವೀಸ್‌ ಬಸ್‌ ದರವನ್ನು ಕಳೆದ ಕೆಲವು ತಿಂಗಳ ಹಿಂದೆ ಪ್ರಥಮ ಸ್ಟೇಜ್‌ಗೆ 1 ರೂ. ಹೆಚ್ಚಳ ಮಾಡಲಾಗಿತ್ತು.

ಸ್ಟೇಜ್‌ಗೆ ಎರಡು ರೂ. ಹೆಚ್ಚಳಕ್ಕೆ ಮನವಿ
ಮಂಗಳೂರಿನಲ್ಲಿ ಓಡಾಡುವ ಖಾಸಗಿ ಬಸ್‌ಗಳಿಗೆ ಮೊದಲ ಸ್ಟೇಜ್‌ಗೆ 8 ರೂ. ದರ ನಿಗದಿಪಡಿಸಲಾಗಿದ್ದು, ಇದನ್ನು 10 ರೂ.ಗೆ ಏರಿಕೆ ಮಾಡಬೇಕೆಂಬ ಮನವಿ ಸಲ್ಲಿಸಲಾಗಿದೆ. ಅದೇ ರೀತಿ ಸರ್ವೀಸ್‌ ಬಸ್‌ ಪ್ರಯಾಣದಲ್ಲಿ ಒಂದು ಕಿ.ಮೀ.ಗೆ ಒಬ್ಬ ಪ್ರಯಾಣಿಕರಿಂದ 1.2 ರೂ. ನಷ್ಟ ಉಂಟಾಗುತ್ತಿದೆ. ಅದನ್ನು ಸರಿದೂಗಿಸಲು ದರ ಪರಿಷ್ಕರಣೆ ಮಾಡಬೇಕೆಂಬ ಮನವಿಯನ್ನೂ ಮಾಡಲಾಗಿದೆ.

 ನಿರ್ದೇಶನ ಬಂದಿಲ್ಲ
ಸಾರಿಗೆ ಆಯುಕ್ತರ ನೇತೃತ್ವದಲ್ಲಿ ಬಸ್‌ ಮಾಲಕರ ಸಂಘದ ಸಭೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ. ಈ ಸಭೆಯಲ್ಲಿ ಯಾವೆಲ್ಲ ವಿಷಯ ಚರ್ಚೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಸ್‌ ದರ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಸದ್ಯಕ್ಕೆ ಯಾವುದೇ ನಿರ್ದೇಶನ ಬಂದಿಲ್ಲ. ಈ ವಿಚಾರ ಆರ್‌ಟಿಇ ಸಭೆಯಲ್ಲಿ ನಿರ್ಧಾರವಾಗಲಿದೆ.
 - ಆರ್‌.ಎಂ. ವರ್ಣೇಕರ್‌
ಮಂಗಳೂರು ಆರ್‌ಟಿಒ

 ದರ ಪರಿಷ್ಕರಣೆಗೆ ಅವಕಾಶ
ಸಾರಿಗೆ ಪ್ರಾಧಿಕಾರ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆದಿದ್ದು, ಕೆಲವೊಂದು ಮಾರ್ಗಸೂಚಿ ನೀಡಿದ್ದಾರೆ. ಅದರಂತೆ, ಲಾಕ್‌ಡೌನ್‌ ತೆರವು ಬಳಿಕ ಬಸ್‌ ಸಂಚಾರ ಅನುಮತಿ ನಿರ್ಧಾರ ಜಿಲ್ಲಾಡಳಿತ ನೀಡಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶೇ. 50ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಬಹುದು. ರಸ್ತೆ ತೆರಿಗೆ ವಿಸ್ತರಣೆಗೆ ಮಾತ್ರ ಅವಕಾಶ ನೀಡಲಾಗಿದೆ. ದರ ಪರಿಷ್ಕರಣೆಗೆ ಅವಕಾಶ ನೀಡಿದ್ದಾರೆ.
 - ದಿಲ್‌ರಾಜ್‌ ಆಳ್ವ, ಅಧ್ಯಕ್ಷರು, ಸಿಟಿ ಬಸ್‌ ಮಾಲಕರ ಸಂಘ

ಟಾಪ್ ನ್ಯೂಸ್

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

Priyana-Bag-Poli

Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!

Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ

Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ  ಅಂತ್ಯ!

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!

14

ಸಾಕಿದ ನಾಯಿಗಾಗಿ ಬಾಯ್‌ ಫ್ರೆಂಡ್‌ ಜತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ

ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ಮದುಮಗ… ನನಗೆ ಈ ಹುಡುಗ ಬೇಡವೆಂದ ಮದುಮಗಳು

Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Mangaluru: ಕಾಂಕ್ರೀಟ್‌ ರಸ್ತೆಯ ನಡುವೆ ಹಣ್ಣಿನ ಫ‌ಸಲು!

5(1

Mangaluru: ಕದ್ರಿ ಹಿಲ್ಸ್‌  ಹುತಾತ್ಮರ ಸ್ಮಾರಕಕ್ಕೆ ಹೊಸ ರೂಪ

3

Ullal ಬೀಚ್‌ ಸುಂದರ, ಆದರೆ ಅವ್ಯವಸ್ಥೆಗಳ ಆಗರ!

ನನ್ನನ್ನು ಪರೀಕ್ಷಿಸಲು ಬಿವೈವಿ ಆಮಿಷ: ಅನ್ವರ್‌ ಮಾಣಿಪ್ಪಾಡಿ

ನನ್ನನ್ನು ಪರೀಕ್ಷಿಸಲು ಬಿವೈವಿ ಆಮಿಷ: ಅನ್ವರ್‌ ಮಾಣಿಪ್ಪಾಡಿ

Kite-Festival

Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

4-panaji

Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

Priyana-Bag-Poli

Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!

Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ

Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ  ಅಂತ್ಯ!

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.