ಕೊನೆಗೊಂಡ ಸಿಟಿ ಬಸ್‌ ಉಚಿತ ಸೇವೆ: ಇಂದಿನಿಂದ ಸಂಚಾರ ಪುನರಾರಂಭ


Team Udayavani, Jun 1, 2020, 5:04 AM IST

ಕೊನೆಗೊಂಡ ಸಿಟಿ ಬಸ್‌ ಉಚಿತ ಸೇವೆ: ಇಂದಿನಿಂದ ಸಂಚಾರ ಪುನರಾರಂಭ

ಉಡುಪಿ: ಕೋವಿಡ್‌ -19 ಹಲವು ಪಾಠ ಕಲಿಸಿದೆ. ಜೀವನ ಅನುಭವ‌ ಸಿಕ್ಕಿದೆ. ಸಂಕಷ್ಟದಲ್ಲಿ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಗಣೇಶೋತ್ಸವ ಸಮಿತಿಯವರು, ಆಸರೆ ಚಾರಿಟೆಬಲ್‌ ಟ್ರಸ್ಟ್‌ನವರು, ನಗರಸಭೆ ಸದಸ್ಯರು, ಕಾರ್ಯಕರ್ತರು ಹಗಲು ರಾತ್ರಿ ದುಡಿದಿದ್ದಾರೆ. ಬಸ್‌ ಮಾಲಕ ಸಂಘದವರು, ಚಾಲಕರು ಎಲ್ಲರ ಪ್ರಯತ್ನದ ಫ‌ಲವಾಗಿ ಜನರಲ್ಲಿ ಬಸ್‌ಗಳಲ್ಲಿ ಸಂಚರಿಸಬಹುದು ಎನ್ನುವ ವಿಶ್ವಾಸ ಬಂದಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

ಆರು ದಿನಗಳ ಉಚಿತ ಸಿಟಿ ಬಸ್‌ ಸೇವೆ ಕೊನೆಯ ಹಂತದಲ್ಲಿ ಬಿಜೆಪಿ ಯುವ ಮೋರ್ಚಾ ಉಡುಪಿ ನಗರ ವತಿಯಿಂದ ಸ್ವಚ್ಛ ಭಾರತ್‌ ಅಭಿಯಾನದಡಿ ಕಾರ್ಯಕರ್ತರು, ಸ್ವಯಂ ಸೇವಕರು ನಡೆಸಿದ ಸಿಟಿ ಬಸ್‌ ನಿಲ್ದಾಣ ಸ್ವಚ್ಛತೆ ಮತ್ತು ಸ್ಯಾನಿಟೈಸಿಂಗ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿಟಿ ಬಸ್‌ ಮಾಲಕ ಸಂಘದ ಜಿಲ್ಲಾಧ್ಯಕ್ಷ ಸುರೇಶ್‌ ನಾಯಕ್‌ ಕುಯಿಲಾಡಿ ಮಾತನಾಡಿ, ಉಚಿತ ಬಸ್‌ ಓಡಾಟದ ಮೂಲಕ ಉಡುಪಿ ಜನತೆಯಲ್ಲಿ ವಿಶ್ವಾಸ ತುಂಬಿದ್ದೇವೆ. ಬಸ್‌ನಲ್ಲಿ ಇನ್ನು ಪ್ರಯಾಣ ಬೆಳೆಸಬಹುದು ಎನ್ನುವುದು ಜನರ ಮನಸ್ಸಿಗೆ ತೋಚಿದೆ. ಯಾವುದೇ ಭೀತಿ ಇಲ್ಲದೆ ಮುಂಜಾಗ್ರತ ಕ್ರಮಗಳನ್ನು ಪಾಲಿಸುವ ಮೂಲಕ ಬಸ್‌ಗಳಲ್ಲಿ ಮುಂದಿನ ದಿನಗಳಲ್ಲಿ ಸಂಚರಿಸಬಹುದು ಎಂದರು.

ಬಿಜೆಪಿ ನಗರಾಧ್ಯಕ್ಷ ಮಹೇಶ್‌ ಠಾಕೂರ್‌, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರೋಶನ್‌ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಶೆಟ್ಟಿ, ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ನಗರಸಭೆ ಸದಸ್ಯರು, ಸ್ವಯಂ ಸೇವಕರು ಉಪಸ್ಥಿತರಿದ್ದರು.

ಕೋವಿಡ್‌ -19 ಲಾಕ್‌ಡೌನ್‌ನಿಂದ ಸ್ಥಗಿತ ಗೊಂಡಿದ್ದ ಸಮೂಹ ಸಾರಿಗೆಯ ಬಳಕೆ ಹಾಗೂ ಕೊರೊನಾ ಭೀತಿಯನ್ನು ದೂರ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೆಬಲ್‌ ಟ್ರಸ್ಟ್‌ನ ಮೂಲಕ ಶಾಸಕ ಕೆ. ರಘುಪತಿ ಭಟ್‌ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸಹಕಾರಲ್ಲಿ ಮೇ 25ರಿಂದ ನಗರದಲ್ಲಿ ಉಚಿತ ಬಸ್‌ ಸೇವೆ ಆರಂಭಿಸಿತ್ತು. ರವಿವಾರಕ್ಕೆ ಅದು ಮುಕ್ತಾಯ ಕಂಡಿತ್ತು. ಇದುವರೆಗೆ ಸುಮಾರು 30 ಸಾವಿರ ಮಂದಿ ಪ್ರಯಾಣಿಕರು ಉಚಿತವಾಗಿ ಬಸ್‌ನಲ್ಲಿ ಸಂಚರಿಸಿ ಪ್ರಯೋಜನ ಪಡೆಕೊಂಡಿದ್ದಾರೆ.

ದರ ಏರಿಕೆ: ಸಂಬಂಧವಿಲ್ಲ
ಸಿಟಿ ಬಸ್‌ ದರ ಶೇ. 15 ಏರಿಸಿರುವುದಕ್ಕೂ ಕೋವಿಡ್‌ -19 ಕ್ಕೂ ಸಂಬಂಧವಿಲ್ಲ. 2013ರಿಂದ ಸಿಟ ಬಸ್‌ ದರ ಏರಿಸಿರಲಿಲ್ಲ. ಡೀಸೆಲ್‌ ದರ ಹೆಚ್ಚಳ, ನಿರ್ವಹಣೆ ವೆಚ್ಚ ಇತ್ಯಾದಿ ಹೊರೆಯಿಂದ ದರ ಏರಿಕೆ ಕುರಿತು ಬಸ್‌ ಮಾಲಕರ ಬೇಡಿಕೆ ಇತ್ತು. ಅದಕ್ಕೆ ಈಗ ಸಮ್ಮತಿ ಸಿಕ್ಕಿದೆ. ಉಚಿತ ಬಸ್‌ ಓಡಿಸಿ ದರ ಏರಿಸಿದ್ದಾರೆ ಎನ್ನುವ ಟೀಕೆಗಳಿಗೆ ಅರ್ಥವಿಲ್ಲ. ಗಣೇಶೋತ್ಸವ ಸಮಿತಿ ಮತ್ತು ನಗರಸಭೆ ಸದಸ್ಯರೆಲ್ಲ ಸೇರಿ ನಾವು ಜನಪ್ರತಿನಿಧಿಗಳು ಬಸ್‌ ಮಾಲಕರಿಗೆ ಧೈರ್ಯ ತುಂಬಿದ್ದರಿಂದ ಅವರು ಜನರ ಕಷ್ಟಕ್ಕೆ ಸ್ಪಂದಿಸುವ ಇಚ್ಚೆ ವ್ಯಕ್ತಪಡಿಸಿದ್ದರು ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

ಇಂದಿನಿಂದ ಸಿಟಿ ಬಸ್‌ ಓಡಾಟ ಆರಂಭ: ಕುಯಿಲಾಡಿ
ಉಚಿತ ಬಸ್‌ ಸೇವೆ ಮುಕ್ತಾಯ ಕಂಡ ಬೆನ್ನಲ್ಲೆ ಸೋಮವಾರದಿಂದ ಈ ಹಿಂದಿನಂತೆ ಸಿಟಿ ಬಸ್‌ಗಳು ಸಂಚಾರ ಆರಂಭಿಸಲಿವೆ. ಸೋಮವಾರ ಸಿಟಿ ಬಸ್‌ ನಿಲ್ದಾಣದಿಂದ 20 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಓಡಾಟ ನಡೆಸಲಿವೆ. ಹಂತಹಂತವಾಗಿ ಬಸ್‌ ಓಡಾಟ ಹೆಚ್ಚಿಸುತ್ತೇವೆ. ಸಂಚಾರ ವೇಳೆ ಉಚಿತ ಬಸ್‌ ಸಂಚಾರ ಅವಧಿಯಲ್ಲಿ ಪಾಲಿಸಿದ ಎಲ್ಲ ನಿಯಮಗಳನ್ನು ಪಾಲಿಸಿಕೊಂಡು ನಮ್ಮ ಬಸ್‌ ಸಿಬಂದಿಗಳಿಗೆ ಸಹಕಾರ ನೀಡುವಂತೆ ಸಿಟಿ ಬಸ್‌ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಹೇಳಿದರು.

ಟಾಪ್ ನ್ಯೂಸ್

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

1-magu

Manipal; ಝೀರೋ ಟ್ರಾಫಿಕ್‌ನಲ್ಲಿ ಮಗು ಬೆಂಗಳೂರಿಗೆ : ಈಶ್ವರ ಮಲ್ಪೆ ನೆರವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.