ಶುದ್ಧೀಕರಣ, ಮರುಬಳಕೆ ಘಟಕ ನಿರ್ಮಾಣ
ಕುಡಿಯುವ ನೀರು ಸರಬರಾಜು ವ್ಯವಸ್ಥೆ ಉನ್ನತೀಕರಣ
Team Udayavani, Jun 29, 2020, 6:31 AM IST
ವಿಶೇಷ ವರದಿ-ಮಹಾನಗರ: ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಆಗುವ ತುಂಬೆ ವೆಂಟೆಡ್ ಡ್ಯಾಂ ಸಮೀಪ ರಾಮಲ್‌ಕಟ್ಟೆಯಲ್ಲಿ ಹೊಸದಾಗಿ 20 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಸ್ಥಾವರ ಹಾಗೂ ಶುದ್ಧೀಕರಣ ಪ್ರಕ್ರಿಯೆ ಸಂದರ್ಭ ಹೊರಬಿಡುವ ನೀರು ಮರು ಬಳಕೆ ಘಟಕ (ಬ್ಯಾಕ್‌ವಾಶ್ ಟ್ರೀಟ್‌ಮೆಂಟ್ ಪ್ಲಾಂಟ್) ನಿರ್ಮಾಣವಾಗಲಿದೆ. ನಿರ್ಮಾಣಕ್ಕೆ ಅವಶ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ.
ಹೊಸ 20 ಎಂಎಲ್‌ಡಿ ಸಾಮರ್ಥ್ಯದ ನೀರು ಸಂಸ್ಕರಣ ಘಟಕ ನಿರ್ಮಾಣ, ಈಗ ಇರುವ ನೀರು ಶುದ್ಧೀಕರಣ ಘಟಕದ ದುರಸ್ತಿ, ತುಂಬೆಯಲ್ಲಿ ವೆಂಟೆಡ್‌ಡ್ಯಾಂ ಬಳಿ ಇರುವ ಮೂರು ಜಾಕ್‌ವೆಲ್‌ಗಳ ಉನ್ನತೀಕರಣ ಕಾರ್ಯಕ್ಕೆ ಅಮೃತ್ ಯೋಜನೆಯಡಿ 33.26 ಕೋ.ರೂ. ಮೀಸಲಿರಿಸಲಾಗಿದೆ. ಪ್ರಸ್ತುತ ರಾಮಲ್‌ಕಟ್ಟೆಯಲ್ಲಿ 1971ರಲ್ಲಿ ನಿರ್ಮಾಣ ಗೊಂಡಿ ರುವ 80 ಎಂಎಲ್‌ಡಿ, ಬಳಿಕ ಎಡಿಬಿ 1ರಲ್ಲಿ ನಿರ್ಮಾಣವಾದ 80 ಎಂಎಲ್‌ಡಿ ಸೇರಿ ಒಟ್ಟು ಎರಡು ನೀರು ಶುದ್ಧೀಕರಣ ಸ್ಥಾವರಗಳಿವೆ.
2.5 ಎಕ್ರೆಯಲ್ಲಿ ಘಟಕ ನಿರ್ಮಾಣ
ತುಂಬೆ ರಾಮಲ್‌ಕಟ್ಟೆ ಬಳಿ 2.5 ಎಕ್ರೆ ಜಾಗದಲ್ಲಿ ನೀರು ಸಂಸ್ಕರಣೆ ಸ್ಥಾವರ, ಮರು ಶುದ್ಧೀಕರಣ ಘಟಕ ನಿರ್ಮಾಣ ಗೊಳ್ಳಲಿದ್ದು, ಭೂಸ್ವಾಧೀನಕ್ಕೆ ಜಿಲ್ಲಾಧಿಕಾರಿ ಯವರು ಅಧಿಸೂಚನೆ ಹೊರಡಿಸಿದ್ದಾರೆ.
ಮಂಗಳೂರು ಮಹಾನಗರಕ್ಕೆ ಕುಡಿ ಯುವ ನೀರಿನ ಬೇಡಿಕೆಯಲ್ಲಿ ಗಣನೀ ಯವಾಗಿ ಏರಿಕೆಯಾಗಿರುವ ಹಿನ್ನೆಲೆ ಯಲ್ಲಿ ನೀರು ವಿತರಣೆ ವ್ಯವಸ್ಥೆಯನ್ನು ಬಲಗೊಳಿಸಿ ದಿನದ 24 ತಾಸುಗಳ (24×7) ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕ್ಯುಮಿಪ್ ಯೋಜನೆಯಡಿಯಲ್ಲಿ (ಜಲಸಿರಿ) ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ದಿನಂಪ್ರತಿ 8 ಲಕ್ಷ ಲೀ. ನೀರು ವ್ಯರ್ಥರಾಮಲ್‌ಕಟ್ಟೆ ನೀರು ಸಂಸ್ಕರಣ ಸ್ಥಾವರದಲ್ಲಿ 160 ಎಂಎಲ್‌ಡಿ ನೀರು ಶುದ್ಧೀಕರಣ ಪ್ರಕ್ರಿಯೆ ವೇಳೆ ದಿನವೊಂದಕ್ಕೆ ಸುಮಾರು 8 ಲಕ್ಷ ಲೀಟರ್ ನೀರು ಹೊರಗೆ ಹರಿದು ಹೋಗುತ್ತಿದೆ. ಇದನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಘಟಕ (ಬ್ಯಾಕ್ ವಾಶ್ ಟ್ರೀಟ್‌ಮೆಂಟ್ ಪ್ಲಾಂಟ್) ಸ್ಥಾಪನೆಯಾಗಲಿದೆ.
ಇದಲ್ಲದೆ ಪ್ರಸ್ತುತ ಹೊರಬಿಡುವ ನೀರು ಸೂಕ್ಷ್ಮ ಮಣ್ಣಿನಿಂದ ಕೂಡಿದ್ದು ತೋಡು, ಪಕ್ಕದ ಪ್ರದೇಶಗಳಲ್ಲಿ ಶೇಖರವಾಗಿ ಸಮಸ್ಯೆ ಸೃಷ್ಟಿಸುತ್ತಿದೆ. ಮರುಬಳಕೆ ಘಟಕ ಸ್ಥಾಪನೆಯಾದರೆ ಈ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ.
ಪ್ರಕ್ರಿಯೆ ಆರಂಭಗೊಂಡಿದೆ
ತುಂಬೆ ವೆಂಟೆಡ್ ಡ್ಯಾಂ ಬಳಿಯ ರಾಮಲ್‌ಕಟ್ಟೆಯಲ್ಲಿರುವ ನೀರು ಶುದ್ಧೀಕರಣ ಸ್ಥಾವರದ ಸಮೀಪ ಹೊಸದಾಗಿ ನೀರು ಶುದ್ಧೀಕರಣ ಸ್ಥಾವರವು ಬ್ಯಾಕ್‌ವಾಶ್ ಟ್ರೀಟ್‌ಮೆಂಟ್ ಪ್ಲಾಂಟ್ ಕ್ವಿಮಿಪ್ ಯೋಜನೆಯಡಿ ನಿರ್ಮಾಣವಾಗಲಿದ್ದು, ಇದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳು ಆರಂಭಗೊಂಡಿವೆೆ. ಅವಶ್ಯವಿರುವ 2.52 ಎಕ್ರೆ ಭೂಮಿಗೆ ಪ್ರಸ್ತಾವನೆಯನ್ನು ಪಾಲಿಕೆಯಿಂದ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಯವರು ಈಗಾಗಲೇ ಅಧಿಸೂಚನೆ ಹೊರಡಿಸಿದ್ದಾರೆ.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು ಮನಪಾ
ಜಾಲ ಸುಧಾರಣೆ
ನಗರದ ಕುಡಿಯುವ ನೀರಿನ ಸರಬರಾಜು,ವಿತರಣೆ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ 460.83 ಕೋ.ರೂ. ವೆಚ್ಚದ ಜಲಸಿರಿ ಯೋಜನೆ ರೂಪಿಸಲಾಗಿದೆ. ನಗರದಲ್ಲಿ ಒಟ್ಟು 96,300 ನೀರಿನ ಸಂಪರ್ಕಗಳಿವೆ ಸರಾಗ ನೀರು ಪೂರೈಕೆ ನಿಟ್ಟಿನಲ್ಲಿ ನಗರದೊಳಗೆ ಒಟ್ಟು 1,388.74 ಕಿ.ಮೀ. ಎಚ್‌ಡಿಪಿಇ ಅಳವಡಿಸಲಾಗುತ್ತಿದೆ. ಪಡೀಲು, ಬೆಂದೂರು, ಮೇರಿಹಿಲ್, ಲೇಡಿಹಿಲ್, ಬೊಂದೇಲ್, ಶಕ್ತಿನಗರ, ಬಾಳದಲ್ಲಿ ಪಂಪ್‌ಹೌಸ್ ನಿರ್ಮಾಣ, ಹೊಸದಾಗಿ 14 ಸ್ಥಳಗಳಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳ ನಿರ್ಮಾಣ, ಹೊಸ ಓವರ್‌ಹೆಡ್ ಟ್ಯಾಂಕ್‌ಗಳಿಗೆ ಸುಮಾರು 35.57 ಕಿ.ಮೀ. ಕೊಳವೆ ಅಳವಡಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.