ಹವಾಮಾನ ಬದಲಾವಣೆ ಕುರಿತಾದ ಕೆಲವು ಪ್ರಮುಖ ಸಾಕ್ಷ್ಯ ಚಿತ್ರಗಳು..


Team Udayavani, Jul 25, 2020, 10:12 PM IST

ಹವಾಮಾನ ಬದಲಾವಣೆ ಕುರಿತಾದ ಕೆಲವು ಪ್ರಮುಕ ಸಾಕ್ಷ್ಯ ಚಿತ್ರಗಳು..

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಚೆರ್ಚೆಗೆ ಒಳಗಾಗುತ್ತಿರುವ ವಿಷಯಗಳಲ್ಲಿ ಹವಾಮಾನ ಬದಲಾವಣೆ ಪ್ರಮುಖವಾದದ್ದು. ಹವಾಮಾನ ಬದಲಾವಣೆ ಸುಧಾರಿಸುವ ಕುರಿತು ವಿಶ್ವಾದ್ಯಂತ ಅನೇಕ ರಾಷ್ಟ್ರಗಳು ನಡೆಸಿದ ಮಾತುಕತೆಗಳು, ಚೆರ್ಚೆಗಳು, ಶೃಂಗ ಸಭೆಗಳು ಕೇವಲ ನೆಪಮಾತ್ರವಾಗಿವೆ. ಇದರ ಹೊರತಾಗಿ ಯಾವೊಂದು ರಾಷ್ಟ್ರವೂ ಹವಾಮಾನ ಬದಲಾವಣೆ ತಡೆಯಲು ಸುಧಾರಣೆಯನ್ನು ಜಾರಿಗೆ ತರುವತ್ತ ಹೆಜ್ಜೆ ಇಟ್ಟಿಲ್ಲ. ಇಲ್ಲಿ ಸರಕಾರದ ಪ್ರಯತ್ನವಷ್ಟೇ ಸಾಲದು, ಜನರ ಪ್ರಯತ್ನವೂ ಬೇಕು. ಮುಖ್ಯವಾಗಿ ಇಂದು ಹೆಚ್ಚಿನ ಪ್ರಮಾಣದಲ್ಲಿರುವ ಯುವ ಶಕ್ತಿ ಪ್ರಜ್ಞಾವಂತರಾಗಬೇಕು. ತಮ್ಮ ಮೂಲಕ ಸಮಾಜಕ್ಕೂ ಇದರ ಕುರಿತು ಕಾಳಜಿ ಮೂಡಿಸುವಂತಾಗಬೇಕು.

ಹಸುರು ಮನೆ ಅನೀಲದಿಂದ ಇಂದು ವಾತಾವರಣದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಧ್ರುವಿಯ ಮಂಜಿನ ಪರ್ವತಗಳು ಕರಗಿ ಸಮುದ್ರ ಮಟ್ಟ ಹೆಚ್ಚಾಗುತ್ತಿದ್ದು, ಮುಂಬರುವ ಕಂಟಕವನ್ನು ತೊರುತ್ತಿದೆ. ಹವಾಮಾನ ಬದಲಾವಣೆ ಕುರಿತು ನೂರಾರು ಎನ್‌ಜಿಒಗಳು, ಅಕಾಡೆಮಿಗಳು ಸಾಮಾಜಿಕ ಜಾಲತಾಣ ಚಳವಳಿ ಮೂಲಕ ಕಾಳಜಿ ಮೂಡಿಸುತ್ತಿವೆ. ಇದರಲ್ಲಿ ಫಿಲ್ಮ್ ಮೇಕಿಂಗ್‌ನ ಕೊಡುಗೆ ಅಪಾರವಾಗಿದೆ. ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡು ಅನೇಕ ಕಿರುಚಿತ್ರಗಳು, ಡಾಕ್ಯುಮೆಂಟರಿಗಳು ತಯಾರಾದವು. ಅವುಗಳಲ್ಲಿ ಕೆಲವೊಂದು ಉತ್ತಮ ಡಾಕ್ಯುಮೆಂಟರಿಗಳನ್ನು ಆಯ್ದು ಇಲ್ಲಿ ನೀಡಿದ್ದೇವೆ.

ದಿ ವೀಪಿಂಗ್‌ ಆ್ಯಪಲ್‌ ಟ್ರೀ
ವಿಜಯ್‌ ಎಸ್‌ ಜೊಧಾ ನಿರ್ದೇಶನದ ಈ ಕಿರುಚಿತ್ರ ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯಲ್ಲಿ ಬೇಳೆಯುವ ಸೇಬಿನ ಕೃಷಿಯಮೇಲೆ ಬೆಳಕು ಚೆಲ್ಲುತ್ತದೆ. ಇದರ ಉತ್ತಮ ಛಾಯಾಗ್ರಹಣ ಮತ್ತು ಚಿತ್ರಕಥೆಯ ಮೂಲಕ ಹವಾಮಾನ ಬದಲಾವಣೆಯಂತ ಸಂಕೀರ್ಣ ಸಮಸ್ಯೆ ಮತ್ತು ಅದರಿಂದ ಸೇಬಿನ ಬೆಳೆಯ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ಇಲ್ಲಿ ಬಿಂಬಿಸಲಾಗಿದೆ.

ಕ್ಲೈಮೇಟ್ಸ್‌ ಫ‌ಸ್ಟ್‌ ಆರ್ಫನ್‌
ಇದು ಒರಿಸ್ಸಾದ ಕೆಂದ್ರಪರ ಜಿಲ್ಲೆಯ ಸತಭಯ ಎನ್ನುವ ಹಳ್ಳಿಯಮೇಲೆ ಹವಾಮಾನ ಬದಲಾವಣೆಯಿಂದ ಉಂಟಾದ ಪರಿಣಾಮದ ಗಂಭೀರತೆಯ ಬಗ್ಗೆ ತಿಳಿಸುತ್ತದೆ. ನೀಲಾ ಮಧಾಬ್‌ ಪಾಂಡಾ ಅವರಿಂದ ನಿರ್ದೇಶಿಸಲ್ಪಟ್ಟಿದ್ದು, ಇದು ಅಲ್ಲಿನ ಸ್ಥಳೀಯ ನಿರಾಶ್ರಿತರಿಂದಾದ ಭೂ ಒತ್ತುವರಿ ಮತ್ತು ಅನಂತರ ಕರವಾಳಿಯುದ್ದಕ್ಕೂ ಆಗುತ್ತಿರವ ಕೃಷಿ ವಿನಾಶದ ಬಗ್ಗೆ ಹೇಳುತ್ತದೆ.

ಶೋರ್ ಆಫ್ ಸೈಲೆನ್ಸ್‌ (shores of silence)
ಈ ಕಿರುಚಿತ್ರ ಒಂದು ಮೈಲುಗಲ್ಲು ಎಂದೇ ಹೇಳಬಹುದು. ಮೈಕ್‌ ಪಾಂಡೇ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕಾಡ್‌ ಲೀವರ್‌ ಎಣ್ಣೆಯ ಸಲುವಾಗಿ ತಿಮಿಂಗಲು ಮತ್ತು ಶಾರ್ಕ್‌ಗಳನ್ನು ಅನವಶ್ಯವಾಗಿ ಕೊಲ್ಲುತ್ತಿರುವುದರ ಬಗ್ಗೆ ವಿವರವಾಗಿ ಹೇಳಲಾಗಿದೆ. ಈ ಚಿತ್ರಕ್ಕೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೇ “ಗ್ರೀನ್‌ ಆಸ್ಕ್ರ್‌’ ಪ್ರಶಸ್ತಿ ಕೂಡ ಸಂದಿದೆ. ಅಲ್ಲದೇ ಜಗತ್ತಿನಾದ್ಯಂತ ಅನೇಕ ಕಾನೂನಾತ್ಮಕ ಬದಲಾವಣೆ ಮತ್ತು ಈ ಸಂತತಿಗಳನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಭಾರತ ಸರಕಾರವೂ ಕಾನೂನು ತಿದ್ದುಪಡಿಯ ಮೂಲಕ ತಿಮಿಂಗಲು ಮತ್ತು ಶಾರ್ಕ್‌ಗಳು ಅಳಿವಿಂಚಿನಲ್ಲಿರುವ ಜೀವಿಗಳು, 1972ರ ವನ್ಯಜೀವಿ ಕಾಯ್ದೆ ಪ್ರಕಾರ ಇವುಗಳನ್ನು ಹಿಡಿಯುವದು ಕಾನೂನು ಬಾಹೀರ ಎಂದು ಘೋಷಿಸಿದೆ.

ಎ ಗ್ರೀನ್‌ ಅಗೊನಿ (A Green Agony)
ಕೊಲ್ಲಿಗಳು ಮತ್ತು ಜಲಮೂಲಗಳಿಂದ ಕೂಡಿರುವ ಸುಂದರ್‌ಬನ್ಸ್‌ ಅರಣ್ಯ ಭಾರತದ ಅತ್ಯಂತ ಶ್ರೀಮಂತ ಜೀವ ವೈವಿಧ್ಯ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಸುಂದರ್‌ಬನ್ಸ್‌ ಅರಣ್ಯದಲ್ಲಿ ವಾಸಿಸುತ್ತಿರುವ ಜೀವಿ ಪ್ರಪಂಚದ ಮೇಲೆ ಹವಾಮಾನ ಬದಲಾವಣೆ ಬೀರಿರುವ ದುಷ್ಪರಿಣಾಮವನ್ನು ಇದು ಬಂಬಿಸಿದೆ. ಮಾನವ ಅನಗತ್ಯ ಚಟುವಟಿಕೆಗಳ ದೆಸೆಯಿಂದ ಭೂಮಿ ಮೆಲಾಗುತ್ತಿರುವ ಹೊರೆಯನ್ನು ಗಿತಾ ಸಿಂಗ್‌ ಅವರು ರಾಯಲ್‌ ಬೆಂಗಾಲ್‌ ಹುಲಿಯನ್ನು ಕಥಾವಸ್ತುವನ್ನಾಗಿ ಇಟ್ಟುಕೋಂಡು ಅತ್ಯಂತ ಮಾರ್ಮಿಕವಾಗಿ ತೊರಿಸಿದ್ದಾರೆ.

ಎ ಡ್ರೆಡ್‌ಫ‌ುಲ್‌ ಫೇಟ್‌ (A Dreadful Fate)
ಡೂಲಂ ಸತ್ಯನಾರಾಯಣ ಅವರ ನಿರ್ದೇಶನವಿರುವ ಈ ಕಿರುಚಿತ್ರ ಅಂತರ್ಜಲ ಸಂಪನ್ಮೂಲದ ಮಾಲಿನ್ಯದಿಂದ ಆಗುತ್ತಿರುವ ಗಂಭಿರ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಚಿತ್ರ ಸಂಪೂರ್ಣವಾಗಿ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಚಿತ್ರಿಕರಣಗೊಂಡಿದೆ. ಈ ಪ್ರದೇಶದ ಅಂತರ್ಜಲದಲ್ಲಿ ಹೆಚ್ಚುವರಿ ಪ್ಲೋರೈಡ್‌ ಅಂಶವಿದ್ದು , ಇದು ಮೂಳೆಗಳ ವಿರೂಪಕ್ಕೆ ಕಾರಣವಾಗುವ ಭಯಾನಕ ರೋಗ ಪ್ಲೋರಿಶಷ್‌ಗೆ ಎಡೆಮಾಡಿಕೊಡುತ್ತದೆ. ಸಾಕ್ಷ್ಯ ಚಿತ್ರಗಳಲ್ಲಿ ತೋರಿಸುವ ದೃಶ್ಯಗಳು ನೋಡುಗರ ಕಣ್ಣಂಚನ್ನು ಒದ್ದೆ ಮಾಡುತ್ತವೆ. ಈ ಪ್ರದೇಶದ ಜನರೂ ಇಂದಿಗೂ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

-ಶಿವಾನಂದ ಎಚ್‌

ಟಾಪ್ ನ್ಯೂಸ್

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.