Nava Kerala ಸದಸ್‌ಗೆ ಪೈವಳಿಕೆಯಲ್ಲಿ ಸಿಎಂ ಚಾಲನೆ
ಜನಕ್ಷೇಮಕ್ಕಾಗಿ ವಿವಿಧ ಕಾರ್ಯಕ್ರಮ: ಪಿಣರಾಯಿ
Team Udayavani, Nov 18, 2023, 11:37 PM IST
ಕುಂಬಳೆ: ಕೇರಳ ರಾಜ್ಯ ಸರಕಾರದ ವತಿಯಿಂದ ರಾಜ್ಯಾದ್ಯಂತ ಎಲ್ಲ 140 ನಿಯೋಜಕ ಮಂಡಲಗಳಲ್ಲಿ ನಡೆಯಲಿರುವ ನವ ಕೇರಳ ಸದಸ್ (ಸಭೆ)ನ ಪ್ರಥಮ ಕಾರ್ಯಕ್ರಮವು ಮಂಜೇಶ್ವರ ವಿಧಾನಸಭಾ ಕೇÒತ್ರದ ಪೈವಳಿಕೆ ಹೈಯರ್ ಸೆಕೆಂಡರಿ ವಿದ್ಯಾಲ ಯದಲ್ಲಿ ಶನಿವಾರ ಸಂಜೆ ಜರಗಿತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿ ಮಾತನಾಡಿ, ರಾಜ್ಯ ಎಡರಂಗ ಸರಕಾರವು ಬಡವರ ಕ್ಷೇಮಕ್ಕಾಗಿ ವಿವಿಧ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಡರಂಗ ಸರಕಾರ ಆಡಳಿತವನ್ನು ಇಲ್ಲವಾಗಿಸಲು ಕೇಂದ್ರದ ಬಿಜೆಪಿ ಸರಕಾರ ಮತ್ತು ಐಕ್ಯರಂಗ ಯತ್ನಿಸುತ್ತಿವೆ. ಆದರೆ ಇದು ನಡೆಯದು ಎಂದು ಹೇಳಿದರು.
ನವಕೇರಳ ಸಭೆಯಲ್ಲಿ ಜನರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮತ್ತು ಸಮಸ್ಯೆಯನ್ನು ಮುಕ್ತವಾಗಿ ಆಲಿಸಲು ವೇದಿಕೆಯನ್ನು ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗುವುದೆಂದರು. ಕಂದಾಯ ವಸತಿ ಇಲಾಖೆ ಸಚಿವ ಕೆ. ರಾಜನ್ ಅಧ್ಯಕ್ಷತೆ ವಹಿಸಿದ್ದರು. ಸಂಪುಟದ ಎಲ್ಲ 20 ಮಂದಿ ಸಚಿವರು ಭಾಗವಹಿಸಿದ್ದರು.
ವಿವಿಧ ಕೌಂಟರ್‌ಗಳಲ್ಲಿ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತ ರಿದ್ದು ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಿದರು. ಹಾಲಿ ಮತ್ತು ಮಾಜಿ ಶಾಸಕರು, ವಿವಿಧ ಗ್ರಾ.ಪಂ.ಗಳ ಅಧ್ಯಕ್ಷರು, ಜಿಲ್ಲಾಧಿಕಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಹಿತ ರಾಜ್ಯದ ಎಲ್ಲ ಸಚಿವರು ವಿಶೇಷವಾಗಿ ನಿರ್ಮಿಸಿದ ಒಂದೇ ಬಸ್ಸಿನಲ್ಲಿ ಆಗಮಿಸಿದರು. ಕೊಂಬು ಕಹಳೆಯಲ್ಲಿ ಸ್ವಾಗತಿಸಿ ಎಲ್ಲರಿಗೂ ಮೈಸೂರು ಪೇಟ ತೊಡಿಸಲಾಯಿತು. ರಾಜ್ಯ ಸರಕಾರದ ಚೀಫ್ ಸೆಕ್ರೆಟರಿ ಡಾ| ವೇಣು ಸ್ವಾಗತಿಸಿದರು.
ಐಕ್ಯರಂಗ, ಬಿಜೆಪಿ ಬಹಿಷ್ಕಾರ
ನವಕೇರಳ ಸಭೆ ಕಾರ್ಯಕ್ರಮವು 19ರಂದು ಕಾಸರಗೋಡಿನಲ್ಲಿ ಜರಗಲಿದ್ದು ರಾಜ್ಯದ ಎಲ್ಲ 140 ವಿಧಾನಸಭಾ ಕ್ಷೇತ್ರಗಳಲ್ಲಿ ಜರಗಿ ಡಿ. 24ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿರುವುದು. ಇದು ಸರಕಾರದ ಕಾರ್ಯಕ್ರಮವಾಗಿದ್ದರೂ ವಿಪಕ್ಷ ಐಕ್ಯರಂಗ ಮತ್ತು ಬಿಜೆಪಿ ಬಹಿಷ್ಕರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.