ಕಡಲು- ಮಲೆನಾಡ ನಡುವಣ ಆಡುಂಬೊಲ
Team Udayavani, Feb 5, 2023, 6:15 AM IST
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ತನ್ನ ಪರಂಪರೆ ಯನ್ನು ಉಳಿಸಿಕೊಂಡ ಕಾರಣದಿಂದಾಗಿಯೇ ಇಲ್ಲಿನ ಜನರು ತಮ್ಮ ಆಯ್ದ ಕ್ಷೇತ್ರಗಳಲ್ಲಿ ಸಾಧಕರಾಗಲು ಸಾಧ್ಯವಾಗಿದೆ. ಯಾವುದೇ ಪ್ರದೇಶವಾದರೂ ತನ್ನ ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಂಡಾಗ ಮಾತ್ರ ಆಧುನಿಕತೆಯ ಪಾರ್ಶ್ವ ಪರಿಣಾಮಗಳಿಂದ ಪಾರಾಗಬಹುದು.
ಭಾರತೀಯ ಪರಂಪರೆಯಲ್ಲಿ ಕರ್ನಾಟಕ ಬಹುಬಗೆಯ ವೈಶಿಷ್ಟ್ಯಗಳಿಂದ ಅನನ್ಯವಾದ ಸ್ಥಾನ ಪಡೆದಿದೆ. ಸೃಷ್ಟಿ ಶೀಲತೆಯ ಎಲ್ಲ ಮಜಲುಗಳಲ್ಲೂ ಈ ವೈಶಿಷ್ಟéದ ವಿಸ್ತಾರವಿದೆ. ಈ ಪರಂಪರೆ ಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿ ರುವ ಕೀರ್ತಿ ಕರ್ನಾಟಕದ ಕರಾವಳಿಗಿದೆ. ತುಳುನಾಡು ಮತ್ತು ಪರಶುರಾಮ ಸೃಷ್ಟಿ ಎಂಬ ಪ್ರತೀತಿ ಜನಪದ, ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ಎಲ್ಲ ಪ್ರಕಾರಗಳಲ್ಲೂ ಉಲ್ಲೇಖವಿದೆ.
ಒಂದು ಕಾಲಕ್ಕೆ ಈಗಿನ ಭೌಗೋಳಿಕ ಸ್ವರೂಪದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳು ಈ ವ್ಯಾಪ್ತಿಯಲ್ಲಿ ಉಲ್ಲೇಖವಾಗುತ್ತಿದ್ದವು. ಬನವಾಸಿಯಿಂದ ಕನ್ಯಾಕುಮಾರಿ ಯವರೆಗೂ ಎಂಬ ಉಲ್ಲೇಖಗಳೂ ಇವೆ. ಕಾಲಾನುಕಾಲಕ್ಕೆ ವಿದೇಶಿಯರ ಆಡಳಿತದ ಸಂದರ್ಭದಲ್ಲಿ ಈಗಿನ ಸ್ವರೂಪದ ಈ ಜಿಲ್ಲೆಗಳ ಜತೆ ಕಣ್ಣನೂರು ಮತ್ತು ಲಕ್ಷದ್ವೀಪಗಳು ಒಳಗೊಂಡಿದ್ದವು. ಆದ್ದರಿಂದ ಇದು ಒಂದೆಡೆ ದೀರ್ಘ ಕರಾವಳಿ ಮತ್ತು ಇನ್ನೊಂದೆಡೆ ಪಶ್ಚಿಮಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಗಳ ನಡುವಿನ ನಿಸರ್ಗದ ಆಡುಂಬೊಲವಾಯಿತು.
ಈ ಎಲ್ಲ ಕಾರಣಗಳಿಂದ ಈ ಪ್ರದೇಶ ಬಹು ಸಂಸ್ಕೃತಿಯ, ಪ್ರತ್ಯೇಕ ಪಾರಂಪರಿಕ ಮೌಲ್ಯಗಳ, ಅನನ್ಯವಾದ ಜನಪದ ಸಂಪತ್ತಿನ ಕೇಂದ್ರವಾಗಿ ರೂಪುಗೊಂಡಿತು. ಮುಂದೆ ಪೋರ್ಚುಗೀಸರು, ಬ್ರಿಟಿಷರು ಮುಂತಾದವರ ಆಳ್ವಿಕೆಯಿಂದಾಗಿ ಮತ್ತಷ್ಟು ಸಂಗತಿಗಳು ಅನಿವಾರ್ಯವಾಗಿ ಸೇರಿದವು.
ಭಾರತ ಸ್ವಾತಂತ್ರ್ಯಗಳಿಸಿದ ಬಳಿಕ ಈ ಪ್ರದೇಶದಲ್ಲೂ ಸಾಕಷ್ಟು ಬದಲಾವಣೆಗಳಾದವು. ಕರಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರೂಪುಗೊಂಡಿತು. ವಿದೇಶಿಯರಿಗೆ ಕನ್ನಡ ಎಂದು ಉಚ್ಚರಿಸ ಲಾಗದೆ ಕೆನಾರ ಎಂದರು. ಬ್ರಿಟಿಷರು ಅನೇಕ ಪಟ್ಟಣ, ಹಳ್ಳಿಗಳ ಹೆಸರುಗಳನ್ನು ಅಪಭ್ರಂಶಗೊಳಿಸಿದರು. ಭಾಷಾವಾರು ಪ್ರಾಂತ ಗಳ ರಚನೆಯಾದ ಬಳಿಕ ಕಾಸರಗೋಡು ಕೈತಪ್ಪಿತು. ಮುಂದೆ ದಕ್ಷಿಣ ಕನ್ನಡ ಕೂಡ ವಿಭಜನೆಯಾಗಿ ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ರೂಪುಗೊಂಡವು. ಬ್ರಿಟಿಷರ ಕಾಲದಲ್ಲಿ ಇಲ್ಲಿನ ಕೆಲವು ಪ್ರದೇಶಗಳು ಆಗಿನ ಮದ್ರಾಸ್ ಮತ್ತು ಮುಂಬಯಿ ಪ್ರಾಂತಕ್ಕೂ ಸೇರ್ಪಡೆಯಾಗಿದ್ದವು.
ಈ ನೆನಪು ಚಿತ್ರಗಳ ಉಲ್ಲೇಖದ ಉದ್ದೇಶ ಇಷ್ಟೇ. ಕಾಲಾನು ಕಾಲಕ್ಕೆ ಅನೇಕ ಪ್ರದೇಶಗಳ ವಿಲೀನ, ವಿಭಜನೆಗಳ ಹೊರತಾ ಗಿಯೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ತಮ್ಮ ತಮ್ಮ ಪರಂಪರೆಯನ್ನು ಅಂತೆಯೇ ಉಳಿಸಿಕೊಂಡ ಕಾರಣ ದಿಂದಾಗಿಯೇ ಇಲ್ಲಿನ ಜನರು ತಮ್ಮ ಆಯ್ದ ಕ್ಷೇತ್ರಗಳಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಸಾಧಕರಾಗಲು ಸಾಧ್ಯವಾಗಿದೆ. ಯಾವುದೇ ಪ್ರದೇಶವಾದರೂ ತನ್ನ ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಂಡಾಗ ಮಾತ್ರ ಆಧುನಿಕತೆಯ ಪಾರ್ಶ್ವ ಪರಿಣಾಮ ಗಳಿಂದ ಪಾರಾಗಬಹುದು. ಮಾನವೀಯ ಮೌಲ್ಯಗಳ ಸಹಿತವಾದ ಜೀವನವನ್ನು ನಡೆಸಲು ಸಾಧ್ಯವಾಗುವುದು.
“ಜಿಲ್ಲೆ’ಯು ತಲಪಾಡಿಯಿಂದ ಬೈಂದೂರು ತನಕ ಸಮುದ್ರ ದಡವನ್ನು ಹೊಂದಿದೆ. ಪೂರ್ವ ದಿಕ್ಕಿನಲ್ಲಿ ಅತ್ಯಪರೂಪದ ಜೀವವೈವಿಧ್ಯ ಜಾಲದ ಸಹ್ಯಾದ್ರಿ ಪರ್ವತ ಶ್ರೇಣಿ ಇದೆ. ಇನ್ನೆರಡು ದಿಕ್ಕುಗಳಲ್ಲಿ ಮಹಾ ನಗರಗಳಾದ ಮುಂಬಯಿ ಮತ್ತು ಚೆನ್ನೈಯತ್ತ…
ಕರಾವಳಿಯ ಈ ಭಾಗದ ಸೌಂದರ್ಯವನ್ನು ಸಹಸ್ರ ಮಾನಗಳ ಹಿಂದೆಯೇ ಪಾಡªನಗಳಲ್ಲಿ ವರ್ಣಿಸಲಾಗಿದೆ. ಒಂದು ಉಲ್ಲೇಖ ಹೀಗಿದೆ:
ಸತ್ತಿಗೆದಾತ್ ಮಲ್ಲೆ
ಹರಿವಾಣದಾತ್ ಉರುಟು
ಪಣವುದಾತ್ ಪೊರ್ಲು
ತಿರ್ತ್ ತುಳುರಾಜ್ಯ ತೋಜುಂಡು
(ಕೊಡೆಯಷ್ಟು ದೊಡ್ಡದು, ಹರಿವಾಣದಷ್ಟು ದುಂಡಗೆ, ನಾಣ್ಯದಷ್ಟು ಅಂದ, ಕೆಳಗೆ ತುಳುರಾಜ್ಯ ಕಾಣಿಸುತ್ತಿದೆ)
ಇಂತಹ ಅನೇಕಾನೇಕ ದೃಷ್ಟಾಂತಗಳು ಇಲ್ಲಿನ ಜನಪದೀಯ ಪರಂಪರೆಯಲ್ಲಿ ಉಲ್ಲೇಖಗೊಂಡಿವೆ, ಶಾಸನಗಳಲ್ಲಿ ದಾಖ ಲಾಗಿವೆ. ಬಾಯ್ದೆರೆಯಾಗಿ ಕೂಡ ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದುಕೊಂಡು ಬಂದಿದೆ. ಈ ಪರಿಸರದ ಅನನ್ಯ ಸಾಂಸ್ಕೃತಿಕ ಸ್ವರೂಪಕ್ಕೆ ಮತ್ತಷ್ಟು ಮೆರುಗನ್ನು ತುಂಬಿದೆ.
ಇಷ್ಟೆಲ್ಲ ವಾಸ್ತವಗಳ ನಡುವೆ ಜಿಲ್ಲೆಯ ಸಾಂಸ್ಕೃತಿಕ, ಜನಪದ ಕ್ಷೇತ್ರಗಳ ಬಗೆಗಿನ ಸಮಕಾಲೀನವಾದ ಚಿಂತನೆಗಳು ಹೇಗಿವೆ? ಈ ಕುರಿತಾದ ಜಿಜ್ಞಾಸೆಯೇ ಇಲ್ಲಿನ ಮೂಲ ಆಶಯ. ಯಾರೂ ಏನು ಮಾಡಬೇಕಾಗಿಲ್ಲ. ಸಹಸ್ರಾರು ವರ್ಷಗಳ ಈ ಪರಂಪರೆ ಶಾಶ್ವತವಾಗಿರುತ್ತದೆ ಎಂಬ ಮಾತು ಕೂಡ ಕೇಳಿರಬಹುದು. ಅದು ಕೂಡ ಹೌದು. ಈ ಮೌಲ್ಯಗಳು ಸುರಕ್ಷೆಯಾಗಬೇಕು. ಇಲ್ಲಿನ ಪ್ರಕೃತಿಯ ವೈಶಿಷ್ಟ್ಯವೇ ಇಲ್ಲಿನ ಅನನ್ಯ ಜೀವನಶೈಲಿಯನ್ನು ರೂಪಿಸಿದೆ. ಇದು ಆಚಾರ, ವಿಚಾರ, ಉಡುಗೆ, ತೊಡುಗೆ ಆಹಾರ ಪದ್ಧತಿ, ನಾಗರಿಕ ಸ್ಪಂದನೆಗಳಲ್ಲೆಲ್ಲ ಪ್ರಭಾವ ಬೀರುತ್ತಿದೆ. ಈ ಪ್ರಭಾವದ ಅನುಭಾವ ಇಂದಿನ ಅತ್ಯಗತ್ಯ. ಇದನ್ನು ರಕ್ಷಿಸಬೇಕಾದವರು ಯುವಜನತೆ.
ಜಿಲ್ಲೆಯು ಇಂದಿಗೂ ಬಹುಹಳ್ಳಿಗಳನ್ನು ಹೊಂದಿರುವ ಪ್ರದೇಶ. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇತ್ಯಾದಿಗಳೆಲ್ಲವೂ ಆಧುನಿಕ ತಂತ್ರಜ್ಞಾನದ ಜತೆಜತೆಯೂ ಉಳಿದುಕೊಂಡಿದೆ ಮತ್ತು ಬಹುಜನತೆಯ ಜೀವನಾಧಾರವೂ ಆಗಿದೆ. ಈ ಎಲ್ಲ ವಾಸ್ತವಗಳ ಅರಿವನ್ನು ಮುಂದಿನ ಪೀಳಿಗೆಯವರು ಹೊಂದ ಬೇಕು ಅನ್ನುವುದು ಒಟ್ಟು ಚಿಂತನೆಯ ಸಾರಾಂಶ.
ಅಂದಹಾಗೆ; ಯುವಜನತೆ ನಮ್ಮ ಮಾತು ಕೇಳುತ್ತಿಲ್ಲ ಅಂತ ಹಿರಿಯರ ದೂರು. ಹಿರಿಯರು ನಮ್ಮನ್ನು ಅರ್ಥ ಮಾಡಿ ಕೊಳ್ಳುತ್ತಿಲ್ಲ ಎಂಬುದು ಯುವಜನತೆಯ ಪ್ರತಿದೂರು! ಇದಕ್ಕೇನು ಪರಿಹಾರ?
-ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.