Coastal: ಅಭಿವೃದ್ಧಿ ನಿರೀಕ್ಷೆಯಲ್ಲಿ ಕರಾವಳಿಯ ಆರ್ಥಿಕ ಹೆಬ್ಟಾಗಿಲು
ಮೂರು ಮೀನುಗಾರಿಕೆ ಬಂದರುಗಳಿಗೆ ಆಧುನೀಕರಣ ಭಾಗ್ಯ
Team Udayavani, Dec 7, 2023, 12:50 AM IST
ಮಂಗಳೂರು: “ಮೀನುಗಾರಿಕೆ ಬಂದರು’ ಕರಾವಳಿಯ ಆರ್ಥಿಕ ಚಟುವಟಿಕೆಯ ಹೆಬ್ಟಾಗಿಲು ಎಂಬುದಾಗಿ ಕರೆಯಲ್ಪಡುತ್ತಿ ದ್ದರೂ ಮೂಲಸೌಕರ್ಯಗಳ ಕೊರತೆ ನೀಗಿಲ್ಲ. ಈ ಹಿನ್ನೆಲೆ ಯಲ್ಲಿ ಮಂಗಳೂರು, ಮಲ್ಪೆ, ಗಂಗೊಳ್ಳಿ ಮೀನುಗಾರಿಕೆ ಬಂದರುಗಳ ಆಧುನೀಕರಣಕ್ಕೆ ಕಾಲ ಕೂಡಿ ಬಂದಿದೆ.
“ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ”ಯಲ್ಲಿ (ಪಿಎಂಎಂಎಸ್‌ವೈ) 3 ಬಂದರುಗಳನ್ನು ಒಟ್ಟು 72.20 ಕೋ.ರೂ. ವೆಚ್ಚದಲ್ಲಿ ಅಭಿವೃದ್ದಿ ಮಾಡಲಾಗುತ್ತಿದ್ದು, ಇದಕ್ಕೆ ಶೇ. 60 (43.32 ಕೋ.ರೂ.) ಕೇಂದ್ರ ಸರಕಾರ ಹಾಗೂ ಶೇ. 40 (ಶೇ. 28.88 ಕೋ.ರೂ.) ರಾಜ್ಯ ಸರಕಾರದ ಪಾಲು ಇರಲಿದೆ. 10 ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಬೀಳುವ ಸಾಧ್ಯತೆ ಇದ್ದು, ಮೂರೂ ಬಂದರು ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಹೆಚ್ಚಿಸಿ ಪೂರಕ ವ್ಯವಸ್ಥೆ ಮಾಡುವ ಉದ್ದೇಶ ಇದೆ.
ಎರಡನೇ ಹಂತದ ಜೆಟ್ಟಿ 144 ಲಕ್ಷ ರೂ.ಗಳಲ್ಲಿ 2009-10ರಲ್ಲಿ ನಿರ್ಮಾಣವಾಗಿತ್ತು. ಬಳಿಕ 2011ರಲ್ಲಿ 3ನೇ ಹಂತದ ಜೆಟ್ಟಿ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯ 1 ಹಾಗೂ 2ನೇ ಹಂತದ ಜೆಟ್ಟಿಯಲ್ಲಿರುವ ಹಲವು ಕೊರತೆಗಳ ಪೈಕಿ ಕುಡಿಯುವ ನೀರಿನ ಯೋಜನೆ, ನೀರಿನ ಟ್ಯಾಂಕ್, ಹರಾಜು ಕಟ್ಟಡದ ಪುನರ್ ನಿರ್ಮಾಣ, “ಮಲ್ಟಿಲೆವೆಲ್ ಫಿಶ್ ಬಾಕ್ಸ್ ಸ್ಟೋರೇಜ್’ ನಿರ್ಮಿಸುವ ಮೂಲಕ ಪಾರ್ಕಿಂಗ್‌ಗೆ ಅನುಕೂಲ, ಮೀನು/ಐಸ್ ನಿರ್ವಹಣೆಗೆ ವ್ಯವಸ್ಥೆ, ಏಕೀಕೃತ ಮೀನುಗಾರಿಕೆ ಇಲಾಖೆಯ ಕಟ್ಟಡ, ಸುಸಜ್ಜಿತ ಶೌಚಾಲಯ, ಒಳಚರಂಡಿ ವ್ಯವಸ್ಥೆ ಹಾಗೂ ಬಂದರು ಪ್ರವೇಶ ದ್ವಾರದ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಮಲ್ಪೆ ಬಂದರು
ಕರ್ನಾಟಕ ಕರಾವಳಿಯ ಅತ್ಯಂತ ದೊಡ್ಡ ಮೀನುಗಾರಿಕೆ ಬಂದರು ಮಲ್ಪೆ. 1985-86ರಲ್ಲಿ 5.46 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ ಬಂದರಿನಲ್ಲಿ 1996ರಲ್ಲಿ 2ನೇ ಹಂತದ ಜೆಟ್ಟಿ ನಿರ್ಮಿಸಲಾಯಿತು. 3ನೇ ಹಂತದ ಜೆಟ್ಟಿ ನಿರ್ಮಾಣಕ್ಕೆ 49.90 ಕೋ.ರೂ. ವೆಚ್ಚವಾಗಿದೆ. ಇಲ್ಲಿ ಒಳಚರಂಡಿ ವ್ಯವಸ್ಥೆಯ ಸುಧಾರಣೆ ಹಾಗೂ 600 ಕೆಎಲ್‌ಡಿ ಸಾಮರ್ಥ್ಯದ ಇಟಿಪಿ ನಿರ್ಮಿಸಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಭದ್ರತಾ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಓವರ್ ಹೆಡ್ ಟ್ಯಾಂಕ್, ಆರ್‌ಒ ಫ್ಲ್ಯಾಂಟ್ ನಿರ್ಮಾಣವಾಗಲಿದೆ.
ಗಂಗೊಳ್ಳಿ ಬಂದರು
ಗಂಗೊಳ್ಳಿ ಮೀನುಗಾರಿಕೆ ಬಂದರು ಹಳೆಯ ಬಂದರು. 2006ರಲ್ಲಿ 8.32 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಬೋಟುಗಳ ಸಂಖ್ಯೆಯೂ ಏರಿಕೆ ಯಾಗಿದೆ. ಪ್ರಮುಖ ಬಂದರು ಆಗಿರುವ ಕಾರಣ, ಇಲ್ಲಿ 2 ಮೀನು ಹರಾಜು ಪ್ರಾಂಗಣವನ್ನು ನಿರ್ಮಿಸ ಲಾಗುವುದು. ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆಯ ಸುಧಾರಣೆ ಹಾಗೂ ಇಟಿಪಿ ನಿರ್ಮಾಣ ವಾಗಲಿದೆ. ಕಾಂಪೌಂಡ್ ವಾಲ್, ಓವರ್‌ಹೆಡ್ ಟ್ಯಾಂಕ್, ಪ್ರವೇಶ ದ್ವಾರದೊಂದಿಗೆ ಭದ್ರತಾ ಕೊಠಡಿ ನಿರ್ಮಿಸಲಾಗುವುದು.
ಮಂಗಳೂರು ಬಂದರು
ಮಂಗಳೂರು ಮೀನುಗಾರಿಕೆ ಬಂದರಿನ ಮೊದಲ ಜೆಟ್ಟಿಯನ್ನು 1991ರಲ್ಲಿ 99.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
ಟೆಂಡರ್ ಕರೆದು ಕಾಮಗಾರಿ
ಮಂಗಳೂರು, ಮಲ್ಪೆ ಹಾಗೂ ಗಂಗೊಳ್ಳಿ ಮೀನುಗಾರಿಕೆ ಬಂದರುಗಳ ಆಧುನೀಕರಣಕ್ಕೆ ಒಟ್ಟು 72.20 ಕೋ.ರೂ. ಅನುದಾನ ಮಂಜೂರಾಗಿದೆ. ಶೀಘ್ರವೇ ಕಾರ್ಯಾದೇಶ ಸಿಗುವ ಸಾಧ್ಯತೆ ಇದ್ದು, ಬಳಿಕ ಟೆಂಡರ್ ಕರೆದು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.-ಹರೀಶ್ ಕುಮಾರ್,
ಅಪರ ಮೀನುಗಾರಿಕೆ ನಿರ್ದೇಶಕರು, ಮೀನುಗಾರಿಕೆ ಬಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.