Coastal Politics: ಹೀಗೂ ಉಂಟು! ಕರಾವಳಿ ರಾಜಕೀಯದಲ್ಲಿ “ತಂದೆ- ಮಗ’ನ ಪವರ್
ಒಂದೇ ಕುಟುಂಬದ ಸದಸ್ಯರು ಒಟ್ಟು 6 ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.
Team Udayavani, Apr 14, 2023, 10:59 AM IST
Malpe Madhwaraj
ಮಂಗಳೂರು: ದೇಶದೆಲ್ಲೆಡೆ ಕುಟುಂಬ ರಾಜಕೀಯದ ಬಗ್ಗೆ ಮಾತು ಕೇಳಿಬರುತ್ತದೆ. ಇದಕ್ಕೆ ಕರಾವಳಿ ಕೂಡ ಹೊರತಾಗಿಲ್ಲ. ಇಲ್ಲಿಯೂ ಕುಟುಂಬ ರಾಜಕೀಯವೂ ಕೆಲವು ಕಡೆ ಇದೆ. ಅದ ರಲ್ಲಿಯೂ ತಂದೆ- ಮಗನ ರಾಜಕೀಯ ಇಲ್ಲಿ ಇನ್ನಷ್ಟು ರೋಚಕ!
ಬಂಟ್ವಾಳದ ಕೊಡ್ಮಾಣ್‌ಗುತ್ತು ಡಾ| ಕೆ. ನಾಗಪ್ಪ ಆಳ್ವ ಅವರು 1957ರಿಂದ ವಿಧಾನಸಭಾ ಸದಸ್ಯರಾಗಿ ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಅವರ ಪುತ್ರ ಡಾ| ಜೀವರಾಜ ಆಳ್ವ ಅವರು 28ರ ಹರೆಯದಲ್ಲೇ ವಿಧಾನಸಭೆ ಪ್ರವೇಶಿಸಿ ಸತತ ಐದು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು.
ಉಡುಪಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಎಂ. ಮಧ್ವರಾಜ್, ಅವರ ಪತ್ನಿ ಮನೋರಮಾ ಮಧ್ವರಾಜ್ ಹಾಗೂ ಪುತ್ರ ಪ್ರಮೋದ್ ಮಧ್ವರಾಜ್ ಪ್ರತಿನಿಧಿಸಿರುವುದು ಮತ್ತೊಂದು ವಿಶೇಷ. ಒಂದೇ ಕುಟುಂಬದ ಸದಸ್ಯರು ಒಟ್ಟು 6 ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.
ತಂದೆ ಪ್ರತಿನಿಧಿಸಿದ ಕ್ಷೇತ್ರವನ್ನು ಬಳಿಕ ಪುತ್ರ ಕೂಡ ಪ್ರತಿನಿಧಿಸಿದ ದ.ಕ. ಜಿಲ್ಲೆಯ ಏಕೈಕ ನಿದರ್ಶನ ಅಂದಿನ “ಉಳ್ಳಾಲ’ ಅರ್ಥಾತ್ ಇಂದಿನ “ಮಂಗಳೂರು ವಿಧಾನಸಭಾ ಕ್ಷೇತ್ರ’. ಯು.ಟಿ. ಫರೀದ್ ಅವರು ಈ ಕ್ಷೇತ್ರವನ್ನು 1972, 1978, 1999, 2004ರಲ್ಲಿ ಜಯಿಸಿದರು. ಅವರ ನಿಧನದ ಬಳಿಕ ಅವರ ಪುತ್ರ ಯು.ಟಿ. ಖಾದರ್ ಈ ಕ್ಷೇತ್ರವನ್ನು 2007, 2008, 2013 ಹಾಗೂ 2018ರಲ್ಲಿ ಜಯಿಸಿದ್ದಾರೆ. ಇಲ್ಲಿ ತಂದೆ- ಮಗ ಒಟ್ಟು 8 ಬಾರಿ ಗೆದ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ ಅವರ ಪುತ್ರ ಹರ್ಷ ಮೊಲಿ ಅವರನ್ನು ಕೂಡ ರಾಜಕೀಯಕ್ಕೆ ತರುವ “ದಿಢೀರ್’ ಪ್ರಯತ್ನ ಒಮ್ಮೆ ಮಾಡಿದರಾದರೂ ಅದು ಸಫಲವಾಗಿರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.