Tourism: ಕರಾವಳಿ ಪ್ರವಾಸೋದ್ಯಮ- ಅಭಿವೃದ್ಧಿ ಚಿಂತನೆಗಿದು ಸಕಾಲ
Team Udayavani, Nov 3, 2023, 11:59 PM IST
ಭಾರತದ ಒಟ್ಟು ಆಂತರಿಕ ಉತ್ಪನ್ನದ ಶೇ. 4.5ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಭಾರತದ ಪ್ರವಾಸೋದ್ಯಮದ ಅಗ್ರ ರಾಜ್ಯಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ಕರ್ನಾಟಕ ಶಿಲ್ಪಕಲಾ ವೈಭವದಿಂದಲೂ ಗಮನ ಸೆಳೆಯುತ್ತದೆ. ಕರಾವಳಿಯಂತೂ ಸಾಂಸ್ಕೃತಿಕ ಪ್ರವಾಸೋದ್ಯಮದ ಮೂಲಕ ಮತ್ತಷ್ಟು ಅವಕಾಶಗಳನ್ನು ಹೊಂದಿದೆ.
ಜಗತ್ತಿನಾದ್ಯಂತ ಕರಾವಳಿ ಪ್ರದೇಶ ಗಳು ಅಪಾರ ಸಂಖ್ಯೆಯಲ್ಲಿ ಪ್ರವಾಸಿ ಗರನ್ನು ಸೆಳೆಯುವುದು ಸಹಜ ಪ್ರಕ್ರಿಯೆ. ಸಾಗರ ಮತ್ತು ಸಮುದ್ರ ಕಿನಾರೆಗಳು ಅಪಾರ ಆಕರ್ಷಣೆಗೆ ಪಾತ್ರವಾಗಿ ರುವುದೇ ಇದಕ್ಕೆ ಕಾರಣ. ಸಾಗರ ಸಂಬಂಧಿತ ಸರ್ಫಿಂಗ್ ಇತ್ಯಾದಿ ಕ್ರೀಡೆಗ ಳಿಂದಲೂ ಈ ಆಕರ್ಷಣೆ ವೃದ್ಧಿಸುತ್ತದೆ. ಜಗತ್ತಿನ ಕೆಲವು ದೇಶಗಳು ಸಾಗರಿಕ ಪ್ರವಾಸೋದ್ಯಮವನ್ನೇ ಆದಾಯದ ಪ್ರಮುಖ ಮೂಲವನ್ನಾಗಿರಿಸಿಕೊಳ್ಳುವ ಪರಂಪರೆ ಇದೆ. ಇಂತಹ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಕರ್ನಾಟಕ ಕರಾವಳಿ ಯು ವೈಶಿಷ್ಟÂಪೂರ್ಣ ಭೌಗೋಳಿಕ ಹಿನ್ನೆಲೆಯಿಂದ ಜಗತ್ತಿನ ಆದ್ಯತೆಯ ಪ್ರವಾಸೋದ್ಯಮ ಕೇಂದ್ರ ಆಗುವ ಎಲ್ಲ ಸಾಧ್ಯತೆಗಳನ್ನು ಒಳಗೊಂಡಿದೆ.
ಕರ್ನಾಟಕ ಕರಾವಳಿ ಎಂದರೆ ಈಗಿನ ಭೌಗೋಳಿಕ ಸ್ವರೂಪದ ದ.ಕನ್ನಡ, ಉಡುಪಿ ಮತ್ತು ಕಾರವಾರ ಜಿಲ್ಲೆಗಳು. ಒಂದು ಅಂಚು ಪೂರ್ತಿ ನೀಲ ಕರಾವಳಿ. ಇನ್ನೊಂದು ಅಂಚು ಪೂರ್ತಿ ಹಸುರು ಪಶ್ಚಿಮಘಟ್ಟದ ಸಹ್ಯಾದ್ರಿ ಶ್ರೇಣಿ. ಈ ಎರಡು ಅಂಚುಗಳ ನಡುವೆ ಪ್ರವಾಸೋ ದ್ಯಮದ ಬಹು ಸಾಧ್ಯತೆಗಳಿಗೆ ತೆರೆದುಕೊಂಡಿರುವ ಕರ್ನಾಟಕ ಕರಾವಳಿ.
ಹಾಗೆಂದು ಇಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿಲ್ಲವೆಂದಲ್ಲ. ಕಳೆದ 3 ದಶಕಗಳಲ್ಲಿ ಬಹುಬಗೆ ಯಲ್ಲಿ ಇಲ್ಲಿ ಪ್ರವಾಸೋದ್ಯಮವು ವೃತ್ತಿಪರತೆ ಯೊಂದಿಗೆ ದೇಶ ವಿದೇಶದ ಜನರನ್ನು ಸೆಳೆಯು ತ್ತಲೇ ಇದೆ. ಪ್ರಮುಖವಾಗಿ ಉಲ್ಲೇಖೀಸುವುದಾದರೆ ಇಲ್ಲಿನ ಧಾರ್ಮಿಕ ಪ್ರವಾಸೋದ್ಯಮ. ಕರಾವಳಿ, ಮಲೆನಾಡು ಪ್ರದೇಶ ಬಹುಸಂಖ್ಯೆಯ ದೇವಾಲ ಯಗಳನ್ನು ಮತ್ತು ಚರ್ಚ್‌ಗಳು, ಮಸೀದಿಗಳು, ಬಸದಿಗಳು, ದರ್ಗಾಗಳ ಸಹಿತ ಧಾರ್ಮಿಕವಾಗಿ ಗಮನ ಸೆಳೆಯುತ್ತವೆ. ಇಲ್ಲಿನ ದೈವಸ್ಥಾನ, ಭೂತಾ ರಾಧನೆ, ನಾಗಾರಾಧನೆ ಎಲ್ಲವೂ ಕೂಡ ಅನನ್ಯವೇ ಆಗಿರುತ್ತವೆ. ಹಾಗಾಗಿ ಧಾರ್ಮಿಕ ಕ್ಷೇತ್ರಗಳ ಸಂದರ್ಶಿಸುವವರ ಸಂಖ್ಯೆ ಅಧಿಕವಾಗುತ್ತಲೇ ಇರುತ್ತವೆ.
ಅಂತೆಯೇ ಈ ಪ್ರದೇಶ ಶೈಕ್ಷಣಿಕ ಮಹಾ ಕೇಂದ್ರವೂ ಆಗಿರುವುದು ಇಲ್ಲಿ ಉಲ್ಲೇಖನೀಯ. ವೈದ್ಯಕೀಯ, ಎಂಜಿನಿಯರಿಂಗ್ ಸಹಿತ ಉನ್ನತ ಶಿಕ್ಷಣ ಈಗ ವಿಶ್ವವಿದ್ಯಾನಿಲಯ ಸ್ವಾಯತ್ತೆಯ ವಿವಿ ಸ್ವತಂತ್ರ ಆಡಳಿತ ಮುಂತಾದ ಸ್ವರೂಪದಲ್ಲಿ ವೃತ್ತಿಪರ ಶಿಕ್ಷಣ ಗಮನ ಸೆಳೆಯುವಂತಿದೆ. ಒಂದೂ ವರೆ ಶತಮಾನಕ್ಕಿಂತಲೂ ಮಿಕ್ಕಿದ ಇತಿಹಾಸವಿರುವ ಶಾಲಾ ಕಾಲೇಜುಗಳಿವೆ. ಈ ಕಾರಣಗಳಿಂದಾಗಿ ಇಲ್ಲಿ ಜಗತ್ತಿನ ವಿವಿಧ ದೇಶಗಳ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಅವರನ್ನು ಭೇಟಿ ಯಾಗುವ ಕಾರಣದಿಂದ ಕೂಡಾ ಅವರ ಹೆತ್ತವರು- ಪೋಷಕರು ಬರುತ್ತಿರುತ್ತಾರೆ. ಇವೆ ಲ್ಲವೂ ವಾಸ್ತವಿಕ ನೆಲೆಕಟ್ಟಿನ ಪ್ರವಾಸೋದ್ಯಮಕ್ಕೆ ಪೂರಕವಾಗುತ್ತದೆ.
ಪ್ರವಾಸೋದ್ಯಮ ತಜ್ಞರ ಪ್ರಕಾರ ಸದ್ಯಕ್ಕೆ ಫ್ರಾನ್ಸ್ ಕಳೆದ ವರ್ಷ 4.84 ಕೋಟಿ ಪ್ರವಾಸಿಗರ ಮೂಲಕ ಅಗ್ರ ಸ್ಥಾನದಲ್ಲಿದೆ. ಸುಮಾರು 75 ಲಕ್ಷ ವಿದೇಶಿ ಪ್ರವಾಸಿಗರೊಂದಿಗೆ ಭಾರತ 22ನೆಯ ಸ್ಥಾನದಲ್ಲಿದೆ. ಭಾರತದ ಒಟ್ಟು ಆಂತರಿಕ ಉತ್ಪನ್ನದ ಶೇ. 4.5ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಭಾರತದ ಪ್ರವಾಸೋದ್ಯಮದ ಅಗ್ರ ರಾಜ್ಯಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ಕರ್ನಾಟಕ ಶಿಲ್ಪಕಲಾ ವೈಭವದಿಂದಲೂ ಗಮನ ಸೆಳೆಯುತ್ತದೆ. ಕರಾವಳಿಯಂತೂ ಸಾಂಸ್ಕೃತಿಕ ಪ್ರವಾಸೋ ದ್ಯಮದ ಮೂಲಕ ಮತ್ತಷ್ಟು ಅವಕಾಶಗಳನ್ನು ಹೊಂದಿದೆ. ಇಲ್ಲಿನ ಯಕ್ಷಗಾನ, ಕಂಬಳ ಮುಂತಾದ ಪರಂ ಪರೆಯು ಈಗ ಸಮಗ್ರ ವಿವರಗಳನ್ನು ಬಹು ಮಾಧ್ಯಮಗಳಲ್ಲಿ ಒದಗಿಸುವುದರಿಂದ ಪ್ರದೇಶ, ದಿನಾಂಕ, ಸಮಯ ಎಲ್ಲ ವಿವರಗಳು ಪ್ರವಾಸಿಗರಿಗೆ ಬೆರಳ ತುದಿಯಲ್ಲೇ ಲಭ್ಯ.
ಜಗತ್ತಿನ ಅನೇಕ ದೇಶಗಳು ಉದಾ: ಮಲೇ ಶಿಯಾ, ಸಿಂಗಾಪುರ, ಥೈಲ್ಯಾಂಡ್ ಇತ್ಯಾದಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿವೆ. ಕರ್ನಾಟಕ ಕರಾವಳಿ ಸಹಿತ ಅಕ್ಕಪಕ್ಕದ ಪರಿಸರಗಳನ್ನು ಉಲ್ಲೇಖೀಸುವುದಾದರೆ ಪ್ರವಾಸೋದ್ಯಮವು ಅಪಾರ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಕೂಡ ರೂಪಿಸುತ್ತದೆ. ಸಾಮಾನ್ಯ ವಾಹನಗಳ ಜತೆಯಲ್ಲಿ ಸಂಪರ್ಕ ಸಾಧಿಸಬಲ್ಲ ಬಹುತೇಕ ವಾಹನಗಳು ಕೂಡ ಈ ವ್ಯವಸ್ಥೆಯ ಒಂದು ಭಾಗ ಆಗಿರುತ್ತದೆ. ಅಂತೆಯೇ ಈ ಪ್ರದೇಶ ತನ್ನದೇ ಆದ ಖಾದ್ಯ ವೈವಿಧ್ಯಗಳಿಂದ ಪ್ರಸಿದ್ಧವಾಗಿರುವುದ ರಿಂದ ಆಹಾರೋದ್ಯಮದ ಬೆಳವಣಿಗೆ ಯು ತನ್ಮೂಲಕ ಸಾಧ್ಯವಾಗುತ್ತದೆ.
ಇವೆಲ್ಲ ಸಾಧ್ಯತೆಗಳನ್ನು ಗಮನದಲ್ಲಿರಿ ಸಿಕೊಂಡಾಗ, ಪ್ರವಾಸಿಗರಿಗೆ ಒದಗ ಬೇಕಾದ ಮೂಲ ಸೌಕರ್ಯಗಳ ಕುರಿತು ಚಿಂತನೆ ಅನಿವಾರ್ಯ. ಸಂಬಂಧಿಸಿದ ಸರಕಾರಿ ಇಲಾಖೆಗಳಿವೆ. ಖಾಸಗಿಯಾಗಿ ಪ್ರವಾಸ ಪ್ಯಾಕೇಜ್ ಒದಗಿಸುವವರಿ ದ್ದಾರೆ. ಸಮೂಹ ಪ್ರವಾಸ ವ್ಯವಸ್ಥೆಯಲ್ಲಿ ಬರುವ ಮಂದಿಯೂ ಇದ್ದಾರೆ. ಆದರೆ ಅವರು ಈ ಪ್ರದೇಶದಲ್ಲಿ ಅವರ ಆಯ್ಕೆಯ ದಿನಗಳಲ್ಲಿ ಗರಿಷ್ಠ ಸಾಧ್ಯ ಪ್ರದೇಶಗಳನ್ನು, ಪ್ರದರ್ಶನಗಳನ್ನು, ಆಹಾರ ವೈವಿಧ್ಯಗಳನ್ನು ಹೊಂದುವಂತಾಗಲು ನೀಲನಕಾಶೆಯೊಂದು ಅತ್ಯಗತ್ಯ. ಈ ನಕಾಶೆಯ ಮೂಲಕ ಅವರು ಇಲ್ಲಿನ ಎಲ್ಲ ಪ್ರವಾಸೋದ್ಯಮ ಸಾಧ್ಯತೆಗಳನ್ನು ಬಳಸಿಕೊಳ್ಳಬಹುದಾಗುತ್ತದೆ.
ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ನವರಾತ್ರಿ ಮುಂತಾದ ಸಂದ ರ್ಭದ ಹಬ್ಬದ ಟೂರ್ ಪ್ಯಾಕೇಜ್ ಅನುಕರಣೀ ಯವಾಗಿದೆ. ನಿರ್ದಿಷ್ಟ ಹೈಟೆಕ್ ಬಸ್‌ಗಳಲ್ಲಿ ಪ್ರವಾಸಿಗರಿಗೆ ಸಾಮೂಹಿಕ ಅಥವಾ ವೈಯಕ್ತಿಕ ಮುಂಗಡ ಕಾದಿರಿಸುವಿಕೆಯ ಸೌಲಭ್ಯವು ಇಲ್ಲಿದೆ. ಧಾರ್ಮಿಕ ಕೇಂದ್ರಗಳ ಮತ್ತು ನಡುವಣ ಪ್ರವಾಸಿ ಕೇಂದ್ರಗಳ ಪ್ರವಾಸ ಈ ಪ್ಯಾಕೇಜ್‌ನಲ್ಲಿ ಒಂದೇ ದಿನ ಲಭ್ಯವಿದ್ದು, ಪ್ರವಾಸಿಗರಿಗೆ ಬಹು ಧಾರ್ಮಿಕ ಕೇಂದ್ರಗಳ ಸಂದರ್ಶನ ಸುಲಭ ಸಾಧ್ಯವಾಗುತ್ತದೆ. ಉದಾ: ಮಂಗಳೂರಿನಿಂದ ಕೊಲ್ಲೂರು, ಮಂಗ ಳೂರಿನಿಂದ ಮಡಿಕೇರಿ, ವಿವಿಧ ದೇವೀ ಕ್ಷೇತ್ರಗಳ ಸಂದರ್ಶನ. ಅದ್ಭುತವಾದ ಪ್ರತಿಕ್ರಿಯೆಯನ್ನು ಇಲಾಖೆ ಪಡೆಯುತ್ತಿರುತ್ತದೆ. ಇತ್ತೀಚೆಗಿನ ದಿನಗ ಳಲ್ಲಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಜಗತ್ತಿನ ಬಹು ವೈವಿಧ್ಯಗಳ ತಾಣವಾಗಿ ರೂಪು ಗೊಂಡಿದೆ. ಅಪಾರವಾದ ಸಾಧ್ಯತೆಗಳನ್ನು ಪ್ರವಾಸಿ ಗರಿಗಾಗಿ ಇಲ್ಲಿ ಅನುಷ್ಠಾನಗೊಳಿಸಲಾಗಿದೆ. ರಸ್ತೆ ಸಂಪರ್ಕದ ಪರಿಪೂರ್ಣತೆಯಿಂದ ಮತ್ತಷ್ಟು ಪ್ರವಾಸಿಗರನ್ನು ಇಲ್ಲಿಗೆ ಸೆಳೆಯಲು ಸಾಧ್ಯ. ಈ ಮೂಲಕ ವಿದೇಶೀ ವಿನಿಮಯ ಸಹಿತ ಸ್ಥಳೀಯ ಮತ್ತು ದೇಶದ ಆರ್ಥಿಕ ಬಲವರ್ಧನೆಯು ಸಾಧ್ಯವಾಗಬಹುದು.
ಅಂದಹಾಗೆ
ಮಂಗಳೂರು ಸಹಿತ ಈ ಪರಿಸರವು ಪ್ರವಾಸಿಗರಿಗೆ 4 ವಿಧದ ಸಂಪರ್ಕ ಒದಗಿಸುತ್ತಿದ್ದು, ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇಂತಹ ಕೇಂದ್ರಗಳಿವೆ. ಸೌಲಭ್ಯ- ಭೂಸಾರಿಗೆ, ಜಲಸಾರಿಗೆ, ವಾಯು ಸಾರಿಗೆ, ರೈಲ್ವೇ ಸಾರಿಗೆ.
ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.