ತೆಂಗು ಧಾರಣೆ ಕುಸಿತ: ಬೆಳೆಗಾರರ ಆತಂಕ
ಗ್ರಾಹಕ 1 ಕಾಯಿಗೆ ತೆರುವ ಬೆಲೆ ಬೆಳೆದವನಿಗೆ ಕೆ.ಜಿ.ಗೆ!
Team Udayavani, Apr 11, 2022, 7:05 AM IST
ಉಡುಪಿ: ಕರಾವಳಿಯಲ್ಲಿ ತೆಂಗಿನ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ಬೆಳೆಗಾರರಲ್ಲಿ ಬೆಲೆ ಕುಸಿತದ ಆತಂಕ ಸೃಷ್ಟಿಯಾಗಿದೆ. ಬೆಳೆಗಾರರು ಮಾರುವ ತೆಂಗಿನ ಕಾಯಿಯ ಧಾರಣೆ ಇಳಿಕೆಯಾಗಿದ್ದರೆ, ಗ್ರಾಹಕರು ಕೊಳ್ಳುವ ತೆಂಗಿನಕಾಯಿ, ಎಣ್ಣೆ ದುಬಾರಿಯಾಗಿವೆ.
ತೆಂಗಿನ ಕಾಯಿ (ಕೊಬ್ಬರಿ ಮಾತ್ರ)ಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡುವ ವ್ಯವಸ್ಥೆ ಹಿಂದೆ ಜಾರಿಯಲ್ಲಿತ್ತು, ಈಗ ಇಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿಗದಿ ಯಾಗುವ ಬೆಲೆಯಂತೆ ಬೆಳೆಗಾರರು ಕಾಯಿ ಮಾರಾಟ ಮಾಡುತ್ತಾರೆ. ದಕ್ಷಿಣ ಕನ್ನಡ, ಉಡುಪಿ ಯಲ್ಲಿ ಬಹುತೇಕ ತೆಂಗಿನ ಕಾಯಿ ವ್ಯಾಪಾರಿಗಳು ಬೆಳೆ ಗಾರರ ತೋಟಕ್ಕೆ ತೆರಳಿ ತೆಂಗಿನ ಕಾಯಿ ಖರೀದಿಸುತ್ತಾರೆ. ಕೆಲವು ಕಡೆ ಬೆಳೆಗಾರರೇ ನೇರ ವಾಗಿ ಎಪಿಎಂಸಿಗೆ ಮಾರು ತ್ತಾರೆ. ಸಿಪ್ಪೆ ಸಹಿತವಾದ ಒಂದು ಕಾಯಿಗೆ 14ರಿಂದ 16 ರೂ. ಖರೀದಿ ದರವಿದೆ. ಗಾತ್ರ ಚಿಕ್ಕದಿದ್ದರೆ 12 ರೂ. ವರೆಗೂ ಧಾರಣೆ ಇಳಿಯುತ್ತದೆ. ದೊಡ್ಡದಿದ್ದರೆ 18 ರೂ. ವರೆಗೆ ಇರುತ್ತದೆ. ಅದೇ ಸಿಪ್ಪೆ ತೆಗೆದ ಕಾಯಿ ಕೆ.ಜಿ.ಗೆ 30ರಿಂದ 35 ರೂ. ದರ ಇದೆ.
ಆದರೆ ಗ್ರಾಹಕರು ಖರೀದಿಸುವಾಗ ಸಿಪ್ಪೆ ತೆಗೆದ ಒಂದು ತೆಂಗಿನಕಾಯಿಗೆ 25ರಿಂದ 30 ರೂ. ದರ ಇರುತ್ತದೆ. ಬೆಳೆಗಾರ ಮಾರಾಟ ಮಾಡುವಾಗ ಒಂದು ಕೆ.ಜಿ. ಕಾಯಿಗೆ ಪಡೆ ಯುವ ಧಾರಣೆಯನ್ನು ಗ್ರಾಹಕ ತಾನು ಖರೀದಿಸುವಾಗ ಒಂದು ಕಾಯಿಗೆ ತೆರ ಬೇಕಾಗುತ್ತದೆ. ತೆಂಗಿನಕಾಯಿ ಬೆಳೆಗಾರರಿಗೆ ಈ ಬೆಲೆ ವ್ಯತ್ಯಾಸ-ಕುಸಿತದಿಂದ ಸಾಕಷ್ಟು ಸಮಸ್ಯೆ ಯಾಗುತ್ತಿದೆ ಎಂದು ತೆಂಗಿನಕಾಯಿ ಬೆಳೆಗಾರ ಯಡ್ತಾಡಿ ಸತೀಶ್‌ಕುಮಾ ರ್ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ತೆಂಗಿನ ಮರ ಏರಿ ಕಾಯಿ ಇಳಿಸುವುದಕ್ಕೆ 30 ರೂ.ಗಳಿಂದ 50 ರೂ.ಗಳ ವರೆಗೂ ಕೂಲಿ ಇದೆ. ಕೆಲವು ಕಡೆಗಳಲ್ಲಿ ಕಾಯಿ ಲೆಕ್ಕಾ ಚಾರ ದಲ್ಲಿ ಹಣ ಪಡೆಯುತ್ತಾರೆ. ಸಾಗಾಟ ವೆಚ್ಚ, ಕೂಲಿ ಇತ್ಯಾದಿ ಎಲ್ಲವೂ ಕಳೆದರೆ ಕೊನೆಗೆ ಬೆಳೆಗಾರನಿಗೆ ಎಳ್ಳಷ್ಟು ಲಾಭ ಇರುವುದಿಲ್ಲ. ಹೀಗಾಗಿ ಸರಕಾರವೇ ನಿರ್ದಿಷ್ಟ ಬೆಲೆ ನಿಗದಿ ಮಾಡಬೇಕು. ಬೆಲೆ ಕುಸಿತದ ಸಂದರ್ಭದಲ್ಲಿ ಬೆಂಬಲ ಬೆಲೆಯಡಿ ಖರೀದಿ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.
ಎಂಪಿಎಂಸಿಯಲ್ಲೇ ನಿರ್ಧಾರ
ತೆಂಗಿನ ಕಾಯಿಯ ಬೆಲೆ ಎಂಪಿಎಂಸಿಯಲ್ಲೇ ನಿರ್ಧಾರವಾ ಗುತ್ತದೆ. ತೋಟಗಾರಿಕೆ ಇಲಾಖೆಯು ತೆಂಗಿನಕಾಯಿ ಉತ್ಪತ್ತಿ ಹೆಚ್ಚಿ ಸುವ ಸಂಬಂಧ ಕೃಷಿಕರಿಗೆ ಮಾಹಿತಿ ನೀಡು ವುದು ಅಥವಾ ಅವರಿಗೆ ಗುಣಮಟ್ಟದ ತೆಂಗಿನ ಸಸಿ ಗಳನ್ನು ಒದಗಿಸುವುದು ಇತ್ಯಾದಿ ಮಾಡುತ್ತೇವೆ.
ಕಾಯಿಯ ದರ ನಿಗದಿ ಎಂಪಿಎಂಸಿಯಿಂದಲೇ ಆಗಲಿದೆ. ಎಪಿಎಂಸಿಯಲ್ಲಿ ತೆಂಗಿನ ಕಾಯಿಯ ಪೂರೈಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಅಂದಿನ ದರ ನಿಗದಿಯಾಗಲಿದೆ ಎಂದು ತೋಟ ಗಾರಿಕೆ ಇಲಾಖೆ ಅಧಿಕಾರಿ ಮತ್ತು ಎಂಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೆಂಗಿನ ಎಣ್ಣೆ ದುಬಾರಿ
ಶುದ್ಧ ತೆಂಗಿನ ಎಣ್ಣೆ (ಗಾಣದಿಂದ ಮಾಡಿದ ಎಣ್ಣೆ) ಒಂದು ಲೀಟರ್‌ಗೆ 300ರಿಂದ 350 ರೂ. ಇದೆ. ಸಾಮಾನ್ಯ ತೆಂಗಿನ ಎಣ್ಣೆ 250ರಿಂದ 275 ರೂ.ಗಳ ವರೆಗೂ ಇದೆ. ಶುದ್ಧ ತೆಂಗಿನ ಎಣ್ಣೆಗೆ ಬೇಡಿಕೆ ಹೆಚ್ಚು. ಅದರಲ್ಲೂ ಕರಾವಳಿ ಭಾಗದಲ್ಲಿ ಅಡುಗೆಗೆ ಹೆಚ್ಚಾಗಿ ತೆಂಗಿನ ಎಣ್ಣೆಯನ್ನೇ ಬಳಸು ತ್ತಾರೆ. ತೆಂಗಿನ ಕಾಯಿಗೆ ದರ ಕಡಿಮೆ ಯಾದರೂ ತೆಂಗಿನ ಎಣ್ಣೆಯ ಬೆಲೆ ಮಾತ್ರ ಕಡಿಮೆಯಾಗುವುದಿಲ್ಲ. ಸೋಮ ವಾರ ಜಿಲ್ಲೆಗೆ ಆಗಮಿಸುವ ಮುಖ್ಯ ಮಂತ್ರಿ ಗಳು ಬೆಳೆಗಾರರ ಈ ಸಂಕಷ್ಟಗಳಿಗೆ ಕಿವಿಯಾಗುವರೇ ಎಂದು ಕಾದು ನೋಡಬೇಕಾಗಿದೆ.
ತೆಂಗಿನಕಾಯಿ ಬೆಲೆ ಕುಸಿದಿರುವುದು ಗಮನಕ್ಕೆ ಬಂದಿದೆ. ಬೆಂಬಲ ಬೆಲೆಯಡಿ ಇದನ್ನು ಮತ್ತೆ ಸೇರಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜತೆಗೆ ಮಾತುಕತೆ ನಡೆಸಲಿದ್ದೇವೆ.
-ಎಸ್. ಅಂಗಾರ,
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.