ತೆಂಗಿನ ಕಾಯಿ ಬೆಲೆ ಮತ್ತಷ್ಟು ಕುಸಿತ; ಸಂಕಷ್ಟದಲ್ಲಿ ಬೆಳೆಗಾರರು
Team Udayavani, Jun 9, 2022, 6:45 AM IST
ಉಡುಪಿ: ತೆಂಗು ಧಾರಣೆ ದಿನೇದಿನೆ ಕುಸಿಯುತ್ತಿದ್ದರೂ ತೆಂಗಿನ ಎಣ್ಣೆಯ ದರ ಮಾತ್ರ ಗಗನಕ್ಕೇರುತ್ತಿದೆ. ಕೃಷಿಕರಿಂದ 8 ರೂ., 9 ರೂ.ಗಳಿಗೆ ಖರೀದಿಯಾಗುತ್ತಿರುವ ತೆಂಗಿನ ಕಾಯಿಯ ಎಣ್ಣೆಯ ದರ ಮಾತ್ರ ಕೆಜಿಗೆ 280 ರೂ.ಗಳಿಂದ 300 ರೂ. ವರೆಗೂ ಇದೆ.
ಕರಾವಳಿಯಲ್ಲಿ ಈ ವರ್ಷ ತೆಂಗಿನ ಕಾಯಿಯ ದರ ನಿರೀಕ್ಷೆಗೂ ಮೀರಿ ಕುಸಿದಿದೆ. ಸಿಪ್ಪೆ ಸಹಿತ ತೆಂಗಿನ ಕಾಯಿಯನ್ನು 8 ರೂ., 9 ರೂ.ಗಳಿಗೆ ಮತ್ತು ಸಿಪ್ಪೆ ತೆಗೆದ ತೆಂಗಿನ ಕಾಯಿಯನ್ನು ಕೆಜಿಗೆ 24 ರೂ.ಗಳಿಂದ 26 ರೂ.ಗಳಿಗೆ ಕೃಷಿಕರು ಸಗಟು ವ್ಯಾಪಾರಿಗಳಿಗೆ ನೀಡುತ್ತಿದ್ದಾರೆ. ಸಗಟು ವ್ಯಾಪಾರಸ್ಥರಿಂದ ಅಂಗಡಿಯವರು ಖರೀದಿಸಿ ಕೆಜಿಗೆ 35 ರೂ.ಗಳಿಂದ 40 ರೂ.ಗಳಿಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
ಕೊಬ್ಬರಿಯೂ ಕುಸಿತ
ತೆಂಗಿನ ಕೊಬ್ಬರಿ ಕೆ.ಜಿ. ಸರಾಸರಿ 120 ರೂ.ಗಳಿಂದ 130 ರೂ.ಗಳವರೆಗೂ ಇರುತಿತ್ತು. ಈಗ ಅದು ಕೂಡ ಕಡಿಮೆಯಾಗಿದೆ. ಸುಪೀರಿಯರ್ ಗುಣಮಟ್ಟದ ಕೊಬ್ಬರಿಯ ಕೆಜಿಗೆ 80 ರೂ.ಗಳಿಂದ 85 ರೂ. ಹಾಗೂ ಸಾಮಾನ್ಯ ಕೊಬ್ಬರಿಗೆ ಕೆಜಿಗೆ 70 ರೂ.ಗಳಿಂದ 80 ರೂ.ಗೆ ಇಳಿದಿದೆ.
ಬೆಂಬಲ ಬೆಲೆಯೂ ಇಲ್ಲ
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿಗೆ ಯಾವ ಬೆಲೆ ನಿಗದಿ ಮಾಡಲಾಗುತ್ತದೆಯೋ ಅದರಂತೆ ಖರೀದಿ ನಡೆಯುತ್ತಿದೆ. ತೆಂಗಿಗೆ ಬೆಂಬಲ ಬೆಲೆ ಇಲ್ಲ. ಕೊಬ್ಬರಿಯ ಬೆಲೆ ತೀರ ಕುಸಿತ (ಸುಮಾರು 25 ರೂ.ಗಳಿಗೆ) ಕಂಡಾಗ ಮಾತ್ರ ಬೆಂಬಲ ಬೆಲೆಯಡಿ ಖರೀದಿಗೆ ಅವಕಾಶವಿದೆ. ಉಳಿದ ಸಮಯದಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಲು ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಎಣ್ಣೆ ಬೆಲೆ ಇಳಿದಿಲ್ಲ
ಸ್ಥಳೀಯವಾಗಿ ಅನೇಕ ಕಡೆಗಳಲ್ಲಿ ತೆಂಗಿನ ಎಣ್ಣೆ ಮಾಡಿಕೊಡಲಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸದೆ ಗಾಣಗಳ ಮೂಲಕ ಎಣ್ಣೆ ತೆಗೆಯುವ ವ್ಯವಸ್ಥೆಯೂ ಇದೆ. ಶುದ್ಧ ತೆಂಗಿನ ಎಣ್ಣೆಗೆ 300ರೂ.ಗಳಿಂದ 325 ರೂ.ಗಳ ವರೆಗೂ ದರವಿದೆ.
ಅನಂತರ ಗುಣಮಟ್ಟದ ಎಣ್ಣೆಗೆ 250 ರೂ.ಗಳಿಂದ 285 ರೂ. ಇದೆ. ತೆಂಗಿನ ಕಾಯಿ ದರ ನೆಲಕಚ್ಚಿದರೂ ತೆಂಗಿನ ಎಣ್ಣೆ ದರ ಮಾತ್ರ ಮೇಲೇರುತ್ತಲೇ ಇದೆ.
ಸಂಕಷ್ಟದಲ್ಲಿ ಬೆಳೆಗಾರರು
ತೆಂಗು ಬೆಳೆಗಾರರಿಗೆ ಈ ಬಾರಿ ಸಾಕಷ್ಟು ನಷ್ಟವಾಗಿದೆ. ದಿನೇದಿನೆ ದರ ಕುಸಿಯುತ್ತಲೇ ಇದೆ. ನಿರ್ದಿಷ್ಟಬೆಂಬಲ ಬೆಲೆ ಘೋಷಿಸುವಂತೆ ಸ್ಥಳೀಯ ಜನ ಪ್ರತಿನಿಧಿಗಳ ಮೂಲಕ ಸರಕಾರವನ್ನು ಆಗ್ರಹಿಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಸರಕಾರ ತೆಂಗು ಬೆಳೆಗಾರರ ಕಷ್ಟಕ್ಕೂ ಸ್ಪಂದಿಸಬೇಕು ಎಂದು ಕರಾವಳಿಯ ತೆಂಗು ಬೆಳೆಗಾರರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.