Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ
Team Udayavani, Jul 5, 2024, 12:48 AM IST
ಬಜಪೆ: ಬಜಪೆ – ಪೊರ್ಕೋಡಿ ರಸ್ತೆಯಲ್ಲಿ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿಯಿರುವ ಮೋರಿಯ ಬಳಿ ಬುಧವಾರ ರಾತ್ರಿ ಗುಂಡಿ ಬಿದ್ದ ಕಾರಣ ಘನ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಮಳೆನೀರು ಹರಿವಿಗೆ ಮೋರಿಯಲ್ಲಿ ತಡೆಯಾಗಿ, ಮೋರಿಯ ಮೇಲಿಂದಲೇ ನೀರು ಹರಿದಿದೆ. ಪರಿಣಾಮವಾಗಿ ಮೋರಿಯ ಮಣ್ಣು ಸವೆದು ರಸ್ತೆಯಲ್ಲಿ ಗುಂಡಿಬಿದ್ದಿದೆ. ಈ ಮೋರಿಯ ಅಪಾಯದ ಬಗ್ಗೆ ಸ್ಥಳೀಯರು ಈ ಮೊದಲೇ ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದರು.
ಗುಂಡಿ ಸೃಷ್ಟಿಯಾದ ಕಾರಣ ಗುರುವಾರ ಈ ರಸ್ತೆಯಲ್ಲಿ ಲಘುವಾಹನಗಳು ಮಾತ್ರ ಸಂಚರಿಸಿದವು. ಬಸ್ಸು ಹಾಗೂ ಲಾರಿಗಳು ಬಜಪೆಯಿಂದ ಕಳುವಾರು, ಜೋಕಟ್ಟೆಯಾಗಿ ಹಾಗೂ ಕೆಲವು ವಾಹನಗಳು ಕರಂಬಾರು, ತಾರಬರಿ, ಪೊರ್ಕೋಡಿ ಮಾರ್ಗದಲ್ಲಿ ಸಂಚರಿಸಿದವು.
ಬಜಪೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗುಂಡಿಗೆ ಮಣ್ಣು ಹಾಕಿ ದುರಸ್ತಿ ಮಾಡಿದರು. ಮಧ್ಯಾಹ್ನ 12 ಗಂಟೆ ಬಳಿಕ ವಾಹನ ಸಂಚಾರ ಯಥಾಸ್ಥಿತಿಗೆ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.