ಕಾಲೇಜುಗಳ ಶಿಕ್ಷಕ, ಶಿಕ್ಷಕೇತರರ ಪರದಾಟ! ಉನ್ನತ ಶಿಕ್ಷಣ ಇಲಾಖೆ ಆದೇಶ
Team Udayavani, May 9, 2020, 6:05 AM IST
ಉಡುಪಿ: ಸರಕಾರಿ ಕಚೇರಿಗಳನ್ನು ಶೇ. 100ರಷ್ಟು ಸಿಬಂದಿಯೊಂದಿಗೆ ತೆರೆದಿಡುವಂತೆ ರಾಜ್ಯ ಸರಕಾರ ಆದೇಶ ನೀಡಿದ್ದು, ಉನ್ನತ ಶಿಕ್ಷಣ ಇಲಾಖೆಯಡಿ ಬರುವ ರಾಜ್ಯದ ಸರಕಾರಿ, ಅನುದಾನಿತ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬಂದಿಯನ್ನು ಸಂಕಷ್ಟಕ್ಕೆ ನೂಕಿದೆ.
ಉನ್ನತ ಶಿಕ್ಷಣ ಇಲಾಖೆಯು ಶಿಕ್ಷಕ, ಶಿಕ್ಷಕೇತರ ಸಿಬಂದಿಯನ್ನು ಮೇ 4ರಿಂದ ಕಾಲೇಜಿಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ. ಆದರೆ ಲಾಕ್‌ಡೌನ್‌ಗೆ ಮುನ್ನ ತಮ್ಮ ಊರುಗಳಿಗೆ ತೆರಳಿದ್ದವರು ಈಗ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅಲ್ಲೇ ಬಾಕಿ ಆಗಿದ್ದು, ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಅಗತ್ಯವಿಲ್ಲದಿದ್ದರೂ ಕರೆ !
ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಬರುವ ಉಡುಪಿ, ದ.ಕ., ಕೊಡಗು ಜಿಲ್ಲೆಯ ಕಾಲೇಜುಗಳ ಶಿಕ್ಷಕರು ಮನೆ ಯಲ್ಲೇ ಇದ್ದುಕೊಂಡು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ತೆಗೆದುಕೊಂಡಿದ್ದು; ತರಗತಿಗಳು ಪೂರ್ಣಗೊಂಡಿವೆ. ಮೇ ತಿಂಗಳು ಸಾಮಾನ್ಯವಾಗಿ ನಮ ಗೆಲ್ಲರಿಗೂ ರಜೆ ಅವಧಿ. ಲಾಕ್‌ಡೌನ್ ತೆರವುಗೊಂಡ ಬಳಿಕವಷ್ಟೇ ಶೈಕ್ಷಣಿಕ ಪ್ರಕ್ರಿಯೆಗಳು ಆರಂಭಗೊಳ್ಳ ಬೇಕಿವೆ. ಈಗ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಇಲ್ಲದೆ ಇರುವಾಗ ಸಿಬಂದಿಯನ್ನು ಮಾತ್ರ ಕರೆಯುವ ಅಗತ್ಯವೇನಿತ್ತು ಎಂದು ಉಡುಪಿಯ ಸಹಾಯಕ ಉಪನ್ಯಾಸಕರೊಬ್ಬರು ಪ್ರಶ್ನಿಸಿದ್ದಾರೆ.
ಗೈರು ಹಾಜರಾತಿ ಭಯ
ಕೋವಿಡ್-19 ಕೆಂಪು ವಲಯಗಳಾಗಿ ಗುರುತಿಸಿಕೊಂಡಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕಂಟೈನ್ಮೆಂಟ್ ವಲಯಗಳಲ್ಲಿ ಇರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿ ಸರಕಾರದ ಆದೇಶದಿಂದ ಕಾಲೇಜುಗಳಿಗೆ ಬರಲಾಗದೆ ತಮ್ಮ ಸಿಎಲ್ ಇತ್ಯಾದಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಪ್ರಾರಂಭವಾಗಿಲ್ಲ. ಇಲಾಖೆಯ ಆದೇಶದಿಂದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬಂದಿ ಪರದಾಡುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಒಂದು ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡಲು ಸಿಬಂದಿ ಸಿದ್ಧರಿದ್ದಾರೆ.
– ಡಾ| ಎಚ್. ನಾರಾಯಣ,
ಪ್ರ. ಕಾರ್ಯದರ್ಶಿ, ಕರ್ನಾಟಕ ಸರಕಾರಿ ಕಾಲೇಜುಗಳ ಅಧ್ಯಾಪಕರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kota: ಬ್ಲಾಕ್ ಲಿಸ್ಟ್‌ನಿಂದ ಅಪಾಯಕಾರಿ ಸ್ಥಳಗಳೇ ಔಟ್!
Karkala: ಹೆದ್ದಾರಿಯಲ್ಲಿ ದಾರಿ ತಪ್ಪಿಸುವ ಡೈವರ್ಶನ್‌ಗಳು!
Udupi: ಯಕ್ಷಗಾನದಲ್ಲಿ ಭಗವದ್ಗೀತೆ ಪ್ರಯೋಗ: ಡಾ| ಪ್ರಭಾಕರ್ ಜೋಶಿ
ಇ-ಖಾತಾ ತಿದ್ದುಪಡಿಯೇ ಭಾರೀ ಸವಾಲು; ತಿದ್ದುಪಡಿ ಅವಕಾಶ ಶೇ.3ರಿಂದ ಶೇ.15ಕ್ಕೆ ಏರಿಕೆಗೆ ಆಗ್ರಹ
Karkala: ಹೋಂ ನರ್ಸ್ 9 ಲಕ್ಷ ರೂ. ವಂಚನೆಗೈದ ಪ್ರಕರಣ: ಮುಂಬಯಿಯಲ್ಲಿ ಇಬ್ಬರು ಆರೋಪಿಗಳ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.