ಅಂಕಣ: ಕರುನಾಡಿನ ಗಟ್ಟಿರಾಮಯ್ಯ

ಹೊಳಬಸುಷ ಶೆಟ್ಟರ, ಗುಳೇದಗುಡ್ಡ-ಬಾದಾಮಿ

Team Udayavani, Aug 3, 2023, 7:55 AM IST

thumb-2

ನನ್ನ ಬದುಕಿನಲ್ಲಿ ನೋಡಿದ ಅದ್ಭುತ ಮಹಾನ್‌ ಶಕ್ತಿ ನಮ್ಮ ಸಾಹೇಬರು. ಅವರ ಪಕ್ಕದಲ್ಲಿ, ಅವರ ಕಷ್ಟ-ಸುಖ ದಲ್ಲಿ, ಅವರ ಪ್ರೀತಿಯ ಪುತ್ರನಂತೆ ನನ್ನನ್ನು ಕಾಣುವ ಅವರ ಜತೆಗೆ ಒಡನಾಟದ ಭಾಗ್ಯ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ.

ಸಿದ್ದರಾಮಯ್ಯ ಎಂಬ ಶಕ್ತಿಯೇ ಅದ್ಭುತ. ಕೆಲವೇ ಕೆಲವರು ರಾಜಕೀಯವಾಗಿ ಅವರನ್ನು ವಿರೋಧಿಸಿದರೂ ಅಂತರಾಳಲ್ಲಿ ಪಕ್ಷಾತೀತವಾಗಿ ಗೌರವಿಸುವ, ಆದರದಿಂದ ಕಾಣುವ ದೊಡ್ಡ ಪಡೆಯೇ ನಾಡಿನಲ್ಲಿದೆ.

ತಮ್ಮ ಇಡೀ ರಾಜಕೀಯ ಜೀವನದಲ್ಲಿ ಜಾತಿ-ಧರ್ಮಕ್ಕೆ ಸೀಮಿತರಾದವರಲ್ಲ. ನೊಂದವರು, ದೀನದಲಿತರು ಹಾಗೂ ಬಡವರ ಬದುಕು ಹಸನಾಗಬೇಕು. ಸಿಕ್ಕ ಅಧಿಕಾರ ಸಮಾಜಕ್ಕೆ ಸದ್ಬಳಕೆಯಾಗಬೇಕು ಎ ಂಬುದು ಅವರ ದಿಟ್ಟ ನಿಲುವು. ಎಷ್ಟೇ ಕಷ್ಟ ಬರಲಿ, ಯಾರೇ ಟ್ರೋಲ್‌ ಮಾಡಲಿ, ನಿಲುವು ಮಾತ್ರ ಬದಲಿಸದ “ಗಟ್ಟಿರಾಮಯ್ಯ” ಎಂದರೂ ತಪ್ಪಲ್ಲ.

ಸಮಾಜಮುಖೀ ನಾಯಕ: ಸಿದ್ದರಾಮಯ್ಯ 2 ಬಾರಿ ಮುಖ್ಯಮಂತ್ರಿಯಾದರೂ ತಮ್ಮ ಹಳ್ಳಿಯ ಸೊಗಡು, ಕರುನಾಡಿನ ಸಂಸ್ಕೃತಿ ಬಿಟ್ಟ ವರಲ್ಲ. ತಮ್ಮ ಬಾಲ್ಯ ಮತ್ತು ಯುವಕರಾಗಿದ್ದಾಗ ಪಟ್ಟ ಕಷ್ಟಗಳನ್ನೇ ಮೆಟ್ಟಿನಿಂತು ರಾಜ ಕೀಯದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದವರು. ತಮಗಾಗಿ ಏನನ್ನೂ ಮಾಡಿಕೊಳ್ಳದ, ಸಮಾಜಮುಖೀ ನಾಯಕರು.
ಇಂತಹ ನಾಯಕರು, ನಮ್ಮ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರು ಎಂಬುದು ನಮಗೆಲ್ಲ ದೊಡ್ಡ ಹೆಮ್ಮೆ ಮತ್ತು ಗೌರವ ತಂದಿತ್ತು. ಆದರೆ, ಬಾದಾಮಿ ಶಾಸಕರಾಗಿದ್ದಾಗಲೇ ನಾಡಿನ ಮುಖ್ಯಮಂತ್ರಿ ಆಗಬೇಕೆಂಬ ನಮ್ಮ ಬಯಕೆ ಈಡೇರದಿದ್ದರೂ, ಬಾಗಲಕೋಟೆ ಜಿಲ್ಲೆಯ ಬಗ್ಗೆ, ಬಾದಾಮಿ ಕ್ಷೇತ್ರದ ಬಗ್ಗೆ ಅವರಿಗೆ ಅತೀವ ಕಾಳಜಿ. ಕೇವಲ ಬಾದಾಮಿ ಅಷ್ಟೇ ಅಲ್ಲ, ಕರುನಾಡಿನ ಪ್ರತಿ ಹಳ್ಳಿ, ನಗರ-ಪಟ್ಟಣಗಳ ಸಮಗ್ರ ಮಾಹಿತಿ, ಕುಂದು-ಕೊರತೆ ಆಲಿಸುವ ಹೃದಯವಂತರವರು.

ಪ್ರದೇಶ-ಧರ್ಮಕ್ಕೆ ಸೀಮಿತರಲ್ಲ: ರಾಜಕಾರಣ ಎನ್ನುವುದು ಒಂದು ಅಧಿಕಾರ ಎಂದು ಅವರೆಂದೂ ಭಾವಿಸಿಲ್ಲ. ಅಧಿಕಾರ ಎಂಬುದು ಜನರ ಸೇವೆ ಮಾಡಲು ಸಿಕ್ಕ ಒಂದು ಅವಕಾಶ ಎಂದು ಸದಾ ಅವರು ಹೇಳುತ್ತಿರುತ್ತಾರೆ. ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಸಿಕ್ಕ ಅವಕಾಶವನ್ನು ಸಮಗ್ರತೆಯ ಸಮೃದ್ಧ ನಾಡು ಕಟ್ಟಲು ಬಳಸಿಕೊಂಡಿದ್ದಾರೆ.

ಮಾತು ತಪ್ಪದ ಮಹಾನ್‌ ನಾಯಕ: ಸಿದ್ದರಾಮಯ್ಯ ಅವರು ಆಗದೇ ಇರುವುದನ್ನು ಮಾತಾಡಲ್ಲ. ಕೊಟ್ಟ ಮಾತು ತಪ್ಪಿದ್ದು ಅವರ ರಾಜಕೀಯ ಜೀವನದಲ್ಲಿಯೇ ಇಲ್ಲ. ಇದನ್ನು ಪ್ರಸ್ತುತ 5 ಗ್ಯಾರಂಟಿ ಯೋಜನೆಗಳೇ ಸಾರಿ ಹೇಳುತ್ತವೆ. ಮೊನ್ನೆಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾಡಿನ ಜನ, ಸಿದ್ದರಾಮಯ್ಯ ಅವರ ಮೇಲೆ ಹಾಗೂ ಕಾಂಗ್ರೆಸ್‌ ಪಕ್ಷದ ಮೇಲೆ ವಿಶ್ವಾಸವಿಟ್ಟು, ಸ್ಪಷ್ಟ ಬಹುಮತದ ಸರಕಾರ ರಚನೆಗೆ ಕಾರಣರಾದರು. ಜನರಿಗೆ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದಾರೆ. ಕನ್ನಡದ ಕಟ್ಟಾಳು: ಸಿದ್ದರಾಮಯ್ಯ ಅವರಿಗೆ ಕನ್ನಡ ಭಾಷೆ-ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ-ಗೌರವ ಕೂಡ. ಕನ್ನಡ ಭಾಷೆಯ ಮೇಲೂ ಅಷ್ಟೇ ಹಿಡಿತ ಕೂಡ ಹೊಂದಿದವರು. ಬಾಲ್ಯದಲ್ಲೇ ಕಲಿತ ಕನ್ನಡ ವ್ಯಾಕರಣವನ್ನು ಇಂದಿಗೂ ಮರೆಯದವರು. ಇಂತಹ ಕನ್ನಡದ ಕಟ್ಟಾಳು, ನಾಡಿನ ಮುಖ್ಯ ಮಂತ್ರಿಯಾಗಿರುವುದು ಸಮಸ್ತ ಕನ್ನಡಿಗರಿಗೂ ಹೆಮ್ಮೆ.

ಆರ್ಥಿಕ ಸಮತೋಲನದ ತಜ್ಞ: ಡಿಸಿಎಂ, ಸಿಎಂ ಆಗಿ ಅವರು ಈವರೆಗೆ ಮಂಡಿಸಿದ ಬಜೆಟ್‌ಗಳಲ್ಲಿ ನಾಡಿನ ಸಮಗ್ರ ಅಭಿವೃದ್ಧಿ, ಬಡವರ ಪರವಾದ ಯೋಜನೆಗಳು, ಅನ್ನ, ಆರೋಗ್ಯ, ಶಿಕ್ಷಣ, ಮೂಲ ಭೂತ ಸೌಲಭ್ಯ ಹೀಗೆ ಪ್ರತೀ ಕ್ಷೇತ್ರಗಳಿಗೂ ಆದ್ಯತೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಆರ್ಥಿಕ ಹೊರೆ ಮಾಡದ ಆಯವ್ಯಯ ಮಂಡನೆ ಅವರ ಹಿರಿಮೆ.
ಇಂತಹ ಸಮಾಜವಾದಿ, ಸಮಾಜಮುಖೀ ನಾಯಕರನ್ನು ಪಡೆದ ನಾವೇ ಧನ್ಯರು. ನಮ್ಮ ನಾಯಕರು ಇಂದು 75 ವರ್ಷ ಪೂರೈಸಿ, 76ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ದೇವರು ಆಯುಷ್ಯ, ಆರೋಗ್ಯ, ನಾಡಿನ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಕೊಡಲೆಂದು ಹೃದಯಂತರಾಳದಿಂದ ಹಾರೈಸುತ್ತೇನೆ.

 

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.