ಉದಯವಾಣಿ- ಎಂಐಸಿ “ನಮ್ಮ ಸಂತೆ’: ಮಳಿಗೆ ನೋಂದಣಿಗೆ ನಾಳೆವರೆಗೆ ಅವಕಾಶ
Team Udayavani, Feb 8, 2023, 9:00 AM IST
ಮಣಿಪಾಲ: ಸ್ಥಳೀಯ ಕುಶಲಕರ್ಮಿಗಳ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿ ಉತ್ತೇಜನ ನೀಡಲು ಉದಯವಾಣಿ, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ (ಎಂಐಸಿ) ಒಟ್ಟಾಗಿ ನಡೆಸುತ್ತಿರುವ ನಮ್ಮ ಸಂತೆಯಲ್ಲಿ ಮಳಿಗೆ ಇರಿಸಲು ಗುರುವಾರದ ವರೆಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಎಂಐಸಿ ಆವರಣದಲ್ಲಿ ಫೆ.11 ಮತ್ತು 12ರಂದು ನಡೆಯಲಿರುವ ನಮ್ಮ ಸಂತೆಯಲ್ಲಿ ಕರಕುಶಲ ಉತ್ಪನ್ನ ಪ್ರದರ್ಶನ ಮತ್ತು ಮಾರಾಟಕ್ಕೆ ಈಗಾಗಲೇ ವಿವಿಧ ಭಾಗಗಳಿಂದ ಕುಶಲಕರ್ಮಿಗಳು ಸಂಪರ್ಕಿಸಿ ತಮ್ಮ ಮಳಿಗೆಗೆ ಬೇಕಾದ ಸ್ಥಳಾವಕಾಶವನ್ನು ಕಾಯ್ದಿರಿಸಿಕೊಳ್ಳುತ್ತಿದ್ದಾರೆ. ಇನ್ನು ಎರಡು ದಿನಗಳ ಕಾಲ ನೋಂದಣಿಗೆ ಅವಕಾಶವಿದ್ದು, ಸದುಪಯೋಗ ಮಾಡಿಕೊಳ್ಳಬಹುದಾಗಿದೆ.
ಸ್ಥಳೀಯ ಉದ್ಯಮಿಗಳು, ಕರಕುಶಲ ಉತ್ಪನ್ನಗಾರರು, ಸ್ಥಳೀಯ ಕರಕುಶಲ ಕರ್ಮಿಗಳು, ಮಹಿಳಾ ಸ್ವಸಹಾಯ ಸಂಘಗಳ ಉತ್ಪಾದಕ ಸದಸ್ಯೆಯರು, ವಿಶೇಷ ಚೇತನ ನವೋದ್ಯಮಿಗಳು, ಕೃಷಿ ಉದ್ಯಮಿಗಳು, ಸಾವಯವ ಉತ್ಪನ್ನಕಾರರು, ಕಾಷ್ಠಶಿಲ್ಪಿಗಳು, ಲೋಹಶಿಲ್ಪಿಗಳು, ಗುಡಿ ಕೈಗಾರಿಕೆ ಉದ್ಯಮಿಗಳು ನಮ್ಮ ಸಂತೆಯಲ್ಲಿ ಮಳಿಗೆಯನ್ನು ಸ್ಥಾಪಿಸಿ, ತಮ್ಮ ಕರಕುಶಲ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಅನುಪಮ ವೇದಿಕೆಯಾಗಿದೆ.
ಮಳಿಗೆ ಸ್ಥಾಪನೆಗಾಗಿ ನೋಂದಣಿ ಮಾಡಿಕೊಳ್ಳಲು ಬುಧವಾರ ಮತ್ತು ಗುರುವಾರದ ವರೆಗೂ ಅವಕಾಶ ಇರಲಿದೆ. ಆಸಕ್ತರು ನಮ್ಮ ಸಂತೆಯಲ್ಲಿ ತಮ್ಮ ಮಳಿಗೆಗಳನ್ನು ಸ್ಥಾಪಿಸುವ ಸಂಬಂಧಿತ ಮಾಹಿತಿಗಾಗಿ 9449450175 ಅಥವಾ 9480479213 ಸಂಪರ್ಕಿಸಬಹುದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.