ಮಂಗಳೂರಿಗೆ ಬಂದಿದೆ 12 ಲ. ರೂ. ಮೌಲ್ಯದ ಸೈಕಲ್!
Team Udayavani, Jun 4, 2020, 6:45 AM IST
ಮಂಗಳೂರು: ದುಬಾರಿ ಬೆಲೆಯ ಬೈಕ್, ಕಾರುಗಳ ಖರೀದಿ ಸಾಮಾನ್ಯ. ಆದರೆ ನಗರದಲ್ಲೊಬ್ಬರು 12 ಲ.ರೂ. ಮೌಲ್ಯದ ಸೈಕಲ್ ಖರೀದಿಸಿ ಗಮನ ಸೆಳೆದಿದ್ದಾರೆ.
ಕೆನಡಾ ಮೂಲದ ರೇಸಿಂಗ್ ಸೈಕಲ್ಗಳಲ್ಲಿ ಮಾನ್ಯತೆ ಪಡೆದ “ಸರ್ವೆಲ್ಲೊ’ ಕಂಪೆನಿಯವರ “ಪಿಎಕ್ಸ್ ಸೀರೀಸ್’ನ ಡ್ಯೂರೇಸ್ ಡೈ2 2020′ ಸೈಕಲ್ ಭಾರತದಲ್ಲಿಯೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪರಿಚಯ ವಾಗುತ್ತಿದೆ.
ಮೈಸೂರಿನ “ಟ್ರಯತ್ಲಾನ್’ ಕ್ರೀಡಾ ಪಟುವೊಬ್ಬರು ಪಂಪ್ವೆಲ್ನಲ್ಲಿರುವ ತಾಜ್ ಸೈಕಲ್ ಕಂಪೆನಿಯಲ್ಲಿ ಅದನ್ನು ಖರೀದಿಸಿದ್ದಾರೆ. ಈಗಾಗಲೇ ಮಳಿಗೆ ಯಲ್ಲಿ ಈ ಸೈಕಲ್ ಪ್ರದರ್ಶನಗೊಳ್ಳುತ್ತಿದ್ದು, ಜೂ. 4ರಂದು ಖರೀದಿದಾರರಿಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಪ್ರಮುಖರಾದ ಮುಬಿನ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಸೈಕಲ್ ಬಳಕೆ ಹೇಗೆ?
ಸೈಕ್ಲಿಂಗ್, ಈಜು ಹಾಗೂ ಓಟವಿರುವ “ಟ್ರಯತ್ಲಾನ್’ ಎಂಬ ಕ್ರೀಡೆಯ ಪೈಕಿ ಅತಿ ವೇಗದ ಸೈಕ್ಲಿಂಗ್ಗಾಗಿ ಇಂತಹ ಸೈಕಲ್ ಬಳಕೆಯಾಗುತ್ತವೆ. ಅತಿ ಹಗುರ ಹಾಗೂ ಮೋನೊಕಾಕ್ ಕಾರ್ಬನ್ನಿಂದ ತಯಾರಾಗಿರುವ ಇದು ಏರೋ ಬೇಸ್ ಬಾರ್, ಉತ್ಕೃಷ್ಟ ದರ್ಜೆಯ ಶಿಮಾನೊ ಡ್ನೂರೇಸ್ ಡೈ2 ಡಿರೈಲ್ಯೂರ್ಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.