Udupi: 1947ರ ಮೊದಲ ಸ್ವಾತಂತ್ರ್ಯ ದಿನದ ಸಂಭ್ರಮ ನೆನಪು

ಉಡುಪಿ ನಗರದಲ್ಲಿ 24 ಗಂಟೆಯೂ ಆಚರಣೆ | ನಗಾರಿ, ಬೆಡಿ ಸದ್ದಿನ ಅಬ್ಬರ

Team Udayavani, Aug 15, 2024, 2:41 PM IST

8

ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 1947ರಲ್ಲಿ ಆ. 14ರ ಸಂಜೆಯಿಂದ ಮರುದಿನ ಸಂಜೆ ವರೆಗೆ 24 ಗಂಟೆ ಉಡುಪಿ ನಗರದಲ್ಲಿ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಲಾಯಿತು. ಇದರ ಅನಂತರ ಇಷ್ಟು ದೀರ್ಘ‌ ಕಾಲದ ಸ್ವಾತಂತ್ರ್ಯ ದಿನಾಚರಣೆ ನಡೆಯಲಿಲ್ಲ ಎಂದು ತಿಳಿದುಬರುತ್ತದೆ.

1947ರ ಆಗಸ್ಟ್‌ 14ರ ಸಂಜೆ ಯಿಂದಲೇ ಚಟುವಟಿಕೆ ಆರಂಭ ವಾಯಿತು. ರಾತ್ರಿ 9.30ರಿಂದ ಮರುದಿನ ರಾತ್ರಿ 7.30ರವರೆಗೆ ಪ್ರಥಮ ಸ್ವಾತಂತ್ರ್ಯೋತ್ಸವ ಆಚರಣೆಯಾಯಿತು. ಎಲ್ಲ ದೇವಸ್ಥಾನಗಳು, ಮಠಗಳು, ಮನೆಗಳು, ರಸ್ತೆಗಳು ಅಲಂಕರಣ ಗೊಂಡಿದ್ದವು. ಆ. 14ರ ರಾತ್ರಿ ಪತ್ರಕರ್ತ ಎಂ.ವಿ.ಹೆಗ್ಡೆ ಅವರು ರಚಿಸಿದ “ಸ್ವರಾಜ್ಯ ವಿಜಯ’ ಯಕ್ಷಗಾನ ತಾಳಮದ್ದಲೆಯನ್ನು ಯುವಕ ಮಂಡಲದ ಸದಸ್ಯರು ಶ್ರೀಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿ ಪ್ರಸ್ತುತಪಡಿಸಿದರು. 1919ರಿಂದಲೂ ಉಡುಪಿ ರಥಬೀದಿ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರ ಸ್ಥಾನವಾಗಿತ್ತು. ರಥಬೀದಿಗೆ ಆಗಸ್ಟ್‌ 14ರ ರಾತ್ರಿ ಸ್ಥಳೀಯರು ಮತ್ತು ಆಸುಪಾಸಿನವರು ಜಮಾಯಿಸಿದರು.
ಮಧ್ಯರಾತ್ರಿ ವೇಳೆ ಸಂಭ್ರಮದ ಸಂಕೇತವಾಗಿ ಶ್ರೀಕೃಷ್ಣಮಠ ಮತ್ತು ದೇವಸ್ಥಾನಗಳ ನಗಾರಿ ಬಾರಿಸಲಾಯಿತು. ಇದಾದ ಬಳಿಕ ಬೆಡಿ ಸಿಡಿಸಲಾಯಿತು. ಆಗಿನ ಪರ್ಯಾಯ ಪೀಠಸ್ಥರಾಗಿದ್ದ ಶೀರೂರು ಮಠದ ಶ್ರೀಲಕ್ಷ್ಮೀಂದ್ರತೀರ್ಥ ಸ್ವಾಮೀಜಿ ಮತ್ತು ಇತರ ಅಷ್ಟಮಠಗಳ ಸ್ವಾಮೀಜಿಯವರು, ಭಂಡಾರಕೇರಿ ಮಠದ ಸ್ವಾಮೀಜಿ, ಸ್ವಾತಂತ್ರ್ಯ ಹೋರಾಟಗಾರರು, ಸತ್ಯಾಗ್ರಹಿಗಳು ರಥಬೀದಿಯಲ್ಲಿ ನಡೆದ ಜನಸಂಭ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜವನ್ನು ಅರಳಿಸಿದರು. (ಆ ಸಭೆಯಲ್ಲಿ ಪಾಲ್ಗೊಂಡ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು 2019ರ ವರೆಗೆ ಇದ್ದರು).

ಪ್ರಥಮ ಸ್ವಾತಂತ್ರ್ಯೋತ್ಸವವನ್ನು ಮಧ್ಯರಾತ್ರಿ ಆಚರಿಸುವಾಗ ಉಡುಪಿಯಲ್ಲಿ ಸಾಮಾನ್ಯ ಮಳೆಯಾಯಿತು. ಬಾಲಕರ ತರಬೇತಿ ಶಾಲೆಯ ಮುಖ್ಯ ಶಿಕ್ಷಕ ಸಂಜೀವ ಭಟ್‌ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀಚಂದ್ರಮೌಳೀಶ್ವರ ದೇವಸ್ಥಾನದ “ಕಲಾವೃಂದ’ ಸಾಂಸ್ಕೃತಿಕ ಸಂಸ್ಥೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.

ಆ. 15ರ ಬೆಳಗ್ಗೆ ಶ್ರೀಕೃಷ್ಣಮಠದಿಂದ ಶಿಸ್ತುಬದ್ಧ ಪ್ರಭಾತ್‌ಭೇರಿ ಮೆರವಣಿಗೆ ಹೊರಟು 1919ರಿಂದ ಸ್ವಾತಂತ್ರ್ಯ ಹೋರಾಟದ ಇನ್ನೊಂದು ಪ್ರಮುಖ ಕೇಂದ್ರವಾದ ಅಜ್ಜರಕಾಡು ಗಾಂಧೀ ಮೈದಾನದಲ್ಲಿ ಸಮಾಪನಗೊಂಡಿತು. (ಗಾಂಧೀಜಿಯವರು 1934ರ ಫೆಬ್ರವರಿ 25ರಂದು ಈ ಮೈದಾನದಲ್ಲಿ ಭಾಷಣ ಮಾಡಿದ್ದರು). ಉಡುಪಿಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿ ಪಾಂಗಾಳ ನಾಯಕ್‌ ಕುಟುಂಬದ ಪಿ. ಮನೋರಮಾ ಬಾಯಿ ರಾಷ್ಟ್ರಧ್ವಜವನ್ನು ಅರಳಿಸಿದರು. ಸೇವಾದಲ ಮತ್ತು ಶಾಲಾ ಮಕ್ಕಳು ರಾಷ್ಟ್ರಗೀತೆ ಮತ್ತು ದೇಶಭಕ್ತಿಗೀತೆಗಳನ್ನು ಹಾಡಿದರು. ಶಾಲೆಗಳಲ್ಲಿ ಸಿಹಿತಿಂಡಿ ವಿತರಿಸಲಾಯಿತು. ಸಂಜೆಯೂ ಅಜ್ಜರಕಾಡು ಪರಿಸರದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈಗಲೂ ಇದೇ ಮೈದಾನದಲ್ಲಿ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಆಚರಣೆಯಾಗುತ್ತಿದೆ.

1947ರಲ್ಲಿ ಮುನ್ಸಿಫ‌ರಾಗಿದ್ದ ಪಾಂಗಾಳ ಮೂಡಲಗಿರಿ ನಾಯಕ್‌ ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಅರಳಿಸಿದರು. ಹಿರಿಯರಾದ ಡಾ|ಕೆ.ಎಲ್‌.ಐತಾಳ್‌ ಡಾ|ಪಾಂಗಾಳ ರಾಘವೇಂದ್ರ ನಾಯಕ್‌, ಉಡುಪಿ ಪುರಸಭೆಯ ಸ್ಥಾಪಕಾಧ್ಯಕ್ಷ ಆರೂರು ಲಕ್ಷ್ಮೀನಾರಾಯಣ ರಾವ್‌, ವಿಟ್ಠಲ ಕಾಮತ್‌, ಕೆ.ಕೆ. ಶಾನುಭಾಗ್‌, ಪಾಂಗಾಳ ಲಕ್ಷ್ಮೀನಾರಾಯಣ ನಾಯಕ್‌, ಪಾಂಗಾಳ ಮನೋರಮಾ ಬಾಯಿ, ಆಗಿನ ಕಾಂಗ್ರೆಸ್‌ ಅಧ್ಯಕ್ಷ ಬಾಳ್ಕಟ್ಟಬೀಡು ಕೃಷ್ಣಯ್ಯ ಹೆಗ್ಡೆ ಮತ್ತು ತಹಶೀಲ್ದಾರ್‌ ಸದಾನಂದ ಪೈ ಮೊದಲಾದವರು ಪಾಲ್ಗೊಂಡಿ ದ್ದರು.

ಚಿತ್ರ ಸಂಗ್ರಹ: ಡಾ| ರವೀಂದ್ರನಾಥ ಶಾನುಭೋಗ್‌

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.