ಪಿಡಿಒ, ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕಿ ವಿರುದ್ಧ ದೂರು
ಮುಡಾರು: ಕಸ ವಿಲೇವಾರಿ ಮಾಡುವ ಮಹಿಳೆಗೆ ನಿಂದನೆ
Team Udayavani, Jun 5, 2022, 1:02 AM IST
ಕಾರ್ಕಳ: ಮುಡಾರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕಿ ವಿರುದ್ಧ ಮುಡಾರು ಗ್ರಾ.ಪಂ. ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಕಸವಿಲೇವಾರಿ ಕೆಲಸ ಮಾಡುತ್ತಿರುವ ಪರನೀರು ದರ್ಖಾಸು ಹೌಸ್ ನಿವಾಸಿ ಗಿರಿಜಾ ಎಂಬ ಮಹಿಳೆ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಲ್ಲೂರು ಗ್ರಾಮದ ಪ್ರತಿಮಾ, ಸರಿತಾ ಹಾಗೂ ಸುಧೀರ್ ಅವರೊಂದಿಗೆ ಸೇರಿ ಮುಡಾರು ಗ್ರಾ.ಪಂ.ಗೆ ಸಂಬಂಧಿಸಿದ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ತಾನು ಕಸ ವಿಲೇವಾರಿ ಕೆಲಸ ಮಾಡಿಕೊಂಡಿದ್ದು, ಕಸ ವಿಲೇವಾರಿ ಕೆಲಸದ ಬಗ್ಗೆ ಮುಡಾರು ಗ್ರಾ.ಪಂ.ನ ಪಿಡಿಒ ರಮೇಶ ಹಾಗೂ ಎಸ್‌ಎಲ್ ಆರ್‌ಎಂ ಘಟಕದ ಮೇಲ್ವಿಚಾರಕಿ ಮಾಧವಿ ವಿನಾ ಕಾರಣ ಅತೃಪ್ತಿ ವ್ಯಕ್ತಪಡಿಸಿ ತನಗೆ ಹಾಗೂ ಸಹೋದ್ಯೋಗಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.
ಕಳೆದ ಎರಡು ಮೂರು ಸಭೆಗಳಲ್ಲಿ ಸಾರ್ವಜನಿಕರು ಹಾಗೂ ಪಂಚಾಯತ್ ಸದಸ್ಯರ ಸಮಕ್ಷಮದಲ್ಲಿ ಉದ್ಯೋಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಅವಹೇಳನ ಮಾಡಿದ್ದು ಮೇ 31ರಂದು ಎಸ್‌ಎಲ್‌ಆರ್‌ಎಂ ಘಟಕದ ಮೀಟಿಂಗ್ ಕರೆದು ಅಧಿಕಾರಿಗಳಿಬ್ಬರು ಸೇರಿ ನನಗೆ ಹಾಗೂ ಉಳಿದ ಮೂವರಿಗೆ ನೀವು ಸರಿಯಾಗಿ ಕಸ ಮತ್ತು ಗಲೀಜು ವಸ್ತುಗಳನ್ನು ವಿಲೇವಾರಿ ಮಾಡುತ್ತಿಲ್ಲ ಎಂದು ನಿಂದನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ ಮೇರೆಗೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadri: ಬೃಹತ್ ಗಾತ್ರದ ಚಿಟ್ಟೆ, ಜೀರುಂಡೆ !
Shimoga: ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.