ಹೊಸ ಕೈಗಾರಿಕೋದ್ಯಮಿಗಳಿಗೆ ನೂತನ ಆದೇಶದಿಂದ ತೊಡಕು
10 ವರ್ಷದ ಮಾಲಿನ್ಯ ತೆರಿಗೆ ಏಕಗಂಟಿನಲ್ಲಿ ಪಾವತಿ
Team Udayavani, May 4, 2022, 7:25 AM IST
ಹೊಸ ಆದೇಶದಂತೆ ಹಾಲಿ ಇರುವ ಕೈಗಾರಿಕೆಗಳು ಪರವಾನಿಗೆ ನವೀಕರಣ ಸಂದರ್ಭ ಮುಂದಿನ 10 ವರ್ಷದ ಮಾಲಿನ್ಯ ಶುಲ್ಕ ಪಾವತಿಸಬೇಕು. ಹೊಸ ಕಾರ್ಖಾ ನೆಗಳು ನೋಂದಣಿ ಸಂದರ್ಭ ಇದನ್ನು ಪಾವತಿಸಬೇಕು ಎಂದಿದೆ.
ಉಡುಪಿ:ಕೈಗಾರಿಕೆಮಂಡಳಿಯು ಕೈಗಾರಿಕೆಗಳ ಮೇಲೆ ವಿಧಿಸುವ “ಸಮ್ಮತಿ ಶುಲ್ಕ’ವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಿರು ವುದು ಹೊಸ ಕೈಗಾರಿಕೆ ಆರಂಭಿಸುವ ಉಮೇದಿನಲ್ಲಿರುವವರಿಗೆ ನಿರಾಸೆ ಉಂಟುಮಾಡಿದೆ.
ವರ್ಷಕ್ಕೊಂದು ಬಾರಿ ಕಾರ್ಖಾನೆಗಳು ಮಾಲಿನ್ಯ ಶುಲ್ಕ ಪಾವತಿಸ ಬೇಕಿತ್ತು. ಆದರೆ ಈಗ 10 ವರ್ಷದ ಮಾಲಿನ್ಯ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸಬೇಕು ಎಂದು ಸರಕಾರ ಆದೇಶಿಸಿದೆ. ಇದು ಹೊಸ ಕೈಗಾರಿಕೆ ಗಳಿಗೆ ನುಂಗಲಾರದ ತುತ್ತಾಗಿದೆ.
ಈ ನಿಯಮ ಪಾಲನೆ ಕಷ್ಟವಾಗಿರು ವುದಿಂದ ಅನೇಕರು ಹೊಸದಾಗಿ ಕೈಗಾರಿಕೆ ಸ್ಥಾಪಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಖಾನೆ ಆರಂಭಕ್ಕೂ ಮುನ್ನವೇ 10 ವರ್ಷದ ಮಾಲಿನ್ಯ ಶುಲ್ಕ ಪಾವತಿಸಿ ಆ ಕಾರ್ಖಾನೆ ಅಷ್ಟು ವರ್ಷಗಳ ಕಾಲ ಕಾರ್ಯಾಚರಣೆ ಮಾಡದೇ ಹೋದರೆ ಬಹಳಷ್ಟು ನಷ್ಟ ಎದುರಾಗಲಿದೆ. ಈ ಕಾರಣಕ್ಕೆ ಹೊಸ ಕಾರ್ಖಾನೆ ಸ್ಥಾಪನೆಗೆ ಉದ್ಯಮಿಗಳು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ.
ಪರವಾನಿಗೆ ಅತ್ಯಗತ್ಯ
ಯಾವುದೇ ಹೊಸ ಉದ್ಯಮ ಆರಂಭಿಸುವ ಮೊದಲು ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ ಯಿಂದ ಅನುಮತಿ ಪತ್ರ ಕಡ್ಡಾಯ. ಯಾವುದೇ ಕೈಗಾರಿಕೆ ಆದರೂ ಅದರಿಂದ ಉತ್ಪನ್ನವಾಗುವ ತ್ಯಾಜ್ಯ, ಶಬ್ದ, ವಿಕಿರಣ, ವಿದ್ಯುತ್ಕಾಂತೀಯ ವಿಕಿರಣ, ಕಂಪನಗಳಿಂದಾಗಿ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಿಗದಿಪಡಿಸಿದ ಶುಲ್ಕವನ್ನು ಅನಿವಾರ್ಯವಾಗಿ ಪಾವತಿಸಲೇಬೇಕು.
ಶುಲ್ಕ ಪಾವತಿ ನಿರ್ಧಾರ ಹೇಗೆ?
ಮಾಲಿನ್ಯ ಶುಲ್ಕವನ್ನು ಲೆಕ್ಕಾಚಾರ ಮತ್ತು ಪರಿಸರ ಎರಡು ಅಂಶಗಳ ಆಧಾರದ ಮೇಲೆ ನಿರ್ಧರಿಸುತ್ತದೆ. ಅನುಮತಿ ಮಿತಿಗಳನ್ನು ಉತ್ಪಾದಿಸಲ್ಪಟ್ಟ ವಿಷಕಾರಿ ವಸ್ತುಗಳ ಬಿಡುಗಡೆ ಅಥವಾ ಸೂಚಿಸಿದ ಒಪ್ಪಿಗೆ ಮಿತಿಯನ್ನು ಮೀರಿ ಅಪಾಯಕಾರಿ ವಸ್ತುಗಳನ್ನು ವಾತಾವರಣಕ್ಕೆ ಬಿಡುಗಡೆಯಾಗುವ ಪ್ರಮಾಣಗಳನ್ನು ಆಧರಿಸಿ ಮಾಲಿನ್ಯ ಶುಲ್ಕ ತೆರಿಗೆ ವಿಧಿಸಲಾಗುತ್ತದೆ. ಇದಕ್ಕೆ ಶೇ. 18ರಷ್ಟು ಜಿಎಸ್‌ಟಿ ಕಷ್ಟಬೇಕು.
ಆದೇಶದಿಂದ ಹೊಸ ಕೈಗಾರಿ ಕೋದ್ಯಮಿಗಳಿಗೆ ತೊಂದರೆಯಾಗಿದೆ. ಸ್ಥಾಪಿತ ಕಾರ್ಖಾನೆಗಳು 10 ವರ್ಷಗಳ ಕಾಲ ಮುಂದುವರಿಯದಿದ್ದರೆ ಅದೊಂದು ರೀತಿಯಲ್ಲಿ ನಷ್ಟ. ಹಾಗೆಯೇ ಪಾವತಿಸಿದ 10 ವರ್ಷಗಳ ಮಾಲಿನ್ಯ ಶುಲ್ಕವೂ ಹಿಂದೆ ಪಡೆಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ಹೊಸದಾಗಿ ಉದ್ಯಮ ಆರಂಭಿಸಲು ಮನಸ್ಸು ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಹಿಂದಿನಂತೆಯೇ ವರ್ಷಕ್ಕೆ ಒಂದು ಬಾರಿ ಮಾಲಿನ್ಯ ಶುಲ್ಕ ಪಡೆಯುವ ಪದ್ಧತಿಯನ್ನೇ ಮುಂದುವರಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದೇವೆ.
– ಅಂಡಾರು ದೇವಿಪ್ರಸಾದ್ ಶೆಟ್ಟಿ,
ಅಧ್ಯಕ್ಷರು, ಚೇಂಬರ್ ಆಫ್ ಕಾಮರ್ಸ್, ಉಡುಪಿ
-ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.