ಜೆಡಿಎಸ್‌ನಲ್ಲಿ ಎಚ್ಎಂಟಿ ಕ್ಷೇತ್ರಗಳದ್ದೇ ಚಿಂತೆ


Team Udayavani, May 22, 2019, 6:00 AM IST

z-27

ಬೆಂಗಳೂರು: ಲೋಕಸಭೆ ಚುನಾವಣೆ ಫ‌ಲಿತಾಂಶ ಹೊರಬೀಳಲು ಒಂದು ದಿನ ಬಾಕಿ ಇರುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖೀಲ್, ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್, ಮಾಜಿ ಸಿಎಂ ಎಸ್‌.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಭವಿಷ್ಯದ ಬಗ್ಗೆ ಜೆಡಿಎಸ್‌ನಲ್ಲಿ ತಲೆಬಿಸಿಯುಂಟಾಗಿದೆ.

ತುಮಕೂರು, ಹಾಸನ, ಮಂಡ್ಯ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಹೊಂದಿದ್ದ ಜೆಡಿಎಸ್‌ಗೆ ಮತದಾನೋತ್ತರ ಸಮೀಕ್ಷೆಗಳಲ್ಲಿ ಎರಡು ಸ್ಥಾನಗಳು ಮಾತ್ರ ಗೆಲ್ಲುವುದಾಗಿ ತಿಳಿಸಿರುವುದು ಆತಂಕಕ್ಕೆ ಕಾರಣ ವಾಗಿದೆ. ಜತೆಗೆ, ಪಕ್ಷದ ಮುಂದಿನ ಭವಿಷ್ಯ, ಸಮ್ಮಿಶ್ರ ಸರ್ಕಾರದ ಸ್ಥಿರತೆಯೂ ಫ‌ಲಿತಾಂಶದ ಮೇಲೆಯೇ ಅವಲಂಬಿತವಾಗಿದೆ.

ಎರಡು ಕ್ಷೇತ್ರ ಮಾತ್ರ ಗೆಲ್ಲುವುದಾದರೆ ಆ ಕ್ಷೇತ್ರಗಳು ಯಾವುವು? ಅದರಲ್ಲಿ ಮಂಡ್ಯ ಅಥವಾ ತುಮಕೂರು ಇಲ್ಲವಾ? ಶಿವಮೊಗ್ಗ-ಹಾಸನ ಇಲ್ಲವಾ ಎಂಬ ಅನುಮಾನ ಪ್ರಾರಂಭವಾಗಿದೆ. ಕಾಂಗ್ರೆಸ್‌ ಮೈತ್ರಿಯಿಂದ ಜೆಡಿಎಸ್‌ಗೆ ಲಾಭವಾಗುತ್ತಾ, ನಷ್ಟವಾಗುತ್ತಾ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ನಿಖೀಲ್ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಆದರೆ, ಮತದಾನೋತ್ತರ ಸಮೀಕ್ಷೆಗಳಲ್ಲಿ 50:50 ಸಾಧ್ಯತೆಯಿದೆ ಎಂದು ಹೇಳಿರುವುದು ಕುಮಾರಸ್ವಾಮಿ ಅವರಲ್ಲಿ ಗೊಂದಲ ಮೂಡಿಸಿದ್ದು, ಮಂಡ್ಯದ ಶಾಸಕರ ಬಳಿ ಚರ್ಚಿಸಿದ್ದಾರೆ. ಜತೆಗೆ ತಮ್ಮದೇ ಮೂಲಗಳಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆಂದು ಹೇಳಲಾಗಿದೆ.

ತುಮಕೂರು ಕ್ಷೇತ್ರದ ಬಗ್ಗೆಯೂ ಜೆಡಿಎಸ್‌ನಲ್ಲಿ ಸಾಕಷ್ಟು ನಿರೀಕ್ಷೆಯಿದೆ. ದೇವೇಗೌಡರು ಅಲ್ಲಿ ಸ್ಪರ್ಧಿಸಿರುವುದರಿಂದ ಅಲ್ಲಿನ ಗೆಲುವು ಪಕ್ಷದ ಪ್ರತಿಷ್ಠೆ ಪ್ರಶ್ನೆ. ಮತದಾನದ ನಂತರ ಕಾಂಗ್ರೆಸ್‌ನಲ್ಲಿನ ಆಂತರಿಕ ಜಗಳ ಬಯಲಾಗುತ್ತಿದ್ದು ಕಾಂಗ್ರೆಸ್‌ನವರು ನಿಜಕ್ಕೂ ಜೆಡಿಎಸ್‌ ಪರ ಕೆಲಸ ಮಾಡಿದ್ದಾರಾ ಎಂಬ ಅನುಮಾನ ಉಂಟಾಗಲು ಕಾರಣವಾಗಿದೆ.

ಮಂಡ್ಯದಲ್ಲಿ ಕಾಂಗ್ರೆಸ್‌ ನಾಯಕರು ಬಹಿರಂಗ ವಾಗಿಯೇ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆಲಸ ಮಾಡಿದ್ದು ಜಗಜ್ಜಾಹೀರಾಗಿತ್ತು. ಇದೀಗ ತುಮಕೂರಿನ ಬಗ್ಗೆಯೂ ಜೆಡಿಎಸ್‌ನಲ್ಲಿ ಅಂತದ್ದೇ ಅನುಮಾನ ಉಂಟಾಗಿದೆ. ಹಾಸನದ ವಿಚಾರದಲ್ಲಿ ಒಳ ಏಟು ಬಹಿರಂಗವಾಗಿಲ್ಲ, ಆದರೂ ಒಳಗೊಳಗೇ ಏನಾದರೂ ‘ಆಟ’ ನಡೆದಿದೆಯಾ ಎಂಬ ಆತಂಕವೂ ಇದೆ.

ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳು ಜೆಡಿಎಸ್‌ ಪಾಲಿಗಂತೂ ತೀವ್ರ ಪ್ರತಿಷ್ಠೆ ಹಾಗೂ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ತುಮಕೂರಿನಲ್ಲಿ ಬಂಡಾಯ ಶಮನವಾಗಿದ್ದರೂ ಕ್ಷೇತ್ರವಾರು ಮತದಾನ ಹಾಗೂ ಕಾಂಗ್ರೆಸ್‌ ನಾಯಕರ ‘ಸೈಲಂಟ್’ ನಿಂದ ಕೆಲವೆಡೆ ಲೀಡ್‌ ಕೈಕೊಡುವ ಸಾಧ್ಯತೆಯ ಬಗ್ಗೆಯೂ ನಾಯಕರಿಗೆ ಅನುಮಾನವಿದೆ.

ಕುಮಾರಸ್ವಾಮಿಯವರ ಪುತ್ರನ ರಾಜಕೀಯ ಭವಿಷ್ಯ ಮಂಡ್ಯದಲ್ಲಿ ಅಡಗಿದ್ದರೆ, ದೇವೇಗೌಡರ ಭವಿಷ್ಯ ತುಮಕೂರಿನಲ್ಲಿದೆ. ಹಾಸನದಲ್ಲಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ಭವಿಷ್ಯ ಅಡಗಿದೆ. ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದರೆ ಒಂದೇ ಕುಟುಂಬದಿಂದ ಮೂವರು ಸಂಸತ್‌ ಪ್ರವೇಶಿಸಿದರೆ ಅದು ರಾಜ್ಯ ರಾಜ ಕೀಯ ಇತಿಹಾಸದಲ್ಲಿ ದಾಖಲೆಯೇ ಸರಿ. ಅದೇ ರೀತಿ ಫ‌ಲಿತಾಂಶದಲ್ಲಿ ವ್ಯತ್ಯಾಸವಾದರೆ ಗೌಡರ ಕುಟುಂಬದ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ.

ಹೀಗಾಗಿ, ಮೂರೂ ಕ್ಷೇತ್ರಗಳ ಫ‌ಲಿತಾಂಶ ಜೆಡಿಎಸ್‌ನಲ್ಲಿ ಕುತೂಹಲದ ಜತೆ ಏನಾಗುವುದೋ ಎಂಬ ಆತಂ ಕವನ್ನೂ ಮೂಡಿಸಿದೆ. ಜತೆಗೆ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯ ಸಾಧಿಸದಿದ್ದರೂ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುವ ಭಯವೂ ಆವರಿಸಿದೆ.

● ಎಸ್‌. ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌

GV-

New Bill: ಇನ್ನು ಪಂಚಾಯತ್‌ರಾಜ್‌ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ

BYV-yathnal

BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.