ಮಣಿಪಾಲ : ಕಾಂಕ್ರೀಟ್‌ ಸ್ಲ್ಯಾಬ್ ಎದ್ದು ಹೋಗಿ ವರ್ಷ 2 ಕಳೆದರೂ ಸ್ಪಂದನೆಯಿಲ್ಲ

ಪಾದಚಾರಿಗಳಿಗೆ ಹೊಂಡ ಕಂಟಕ 

Team Udayavani, Feb 12, 2022, 11:38 AM IST

ಮಣಿಪಾಲ : ಕಾಂಕ್ರೀಟ್‌ ಸ್ಲ್ಯಾಬ್ ಎದ್ದು ಹೋಗಿ ವರ್ಷ 2 ಕಳೆದರೂ ಸ್ಪಂದನೆಯಿಲ್ಲ

ಉಡುಪಿ : ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ನಿಂದ ಟೈಗರ್‌ ಸರ್ಕಲ್‌ನತ್ತ ತೆರಳುವ ಪಾದಚಾರಿಗಳಿಗೆ ಡ್ರೈನೇಜ್‌ನ ಕಾಂಕ್ರೀಟ್‌ ಸ್ಲ್ಯಾಬ್ ಸಂಪೂರ್ಣ ಎದ್ದುಹೋದ ಕಾರಣ ಪಾದಚಾರಿಗಳು ಚರಂಡಿಯೊಳಗೆ ಬೀಳುವ ಸನ್ನಿವೇಶ ಎದುರಾಗಿದೆ.

ಇದೇ ಭಾಗದಲ್ಲಿ ನೆಹರೂ ಸ್ಮಾರಕ ಗ್ರಂಥಾಲಯವಿದ್ದು, ಹಲವು ಮಂದಿ ವಿದ್ಯಾರ್ಥಿಗಳು ಈ ಭಾಗದಲ್ಲಿ ತೆರಳು ತ್ತಾರೆ. ಕಳೆದ ಎರಡು ವರ್ಷಕ್ಕೂ ಅಧಿಕ ಸಮಯದಿಂದ ಗುಂಡಿ ತೆರೆದಿದೆ.
ತೆರೆದಿರುವ ಸ್ಲಾéಬ್‌ನ ಅಡಿಭಾಗದಲ್ಲಿ ಮದ್ಯದ ಬಾಟಲಿಗಳ ರಾಶಿ ಕಂಡು ಬರುತ್ತಿದೆ. ಗ್ರಂಥಾಲಯಕ್ಕೆ ಈ ಭಾಗದ ಸಹಿತ ವಿದೇಶಿ ವಿದ್ಯಾರ್ಥಿನಿಯರು ಆಗಮಿಸುತ್ತಿದ್ದು, ನಗರದ ಶೈಕ್ಷಣಿಕ ನಗರಿಯಲ್ಲಿ ಒಂದು ವರ್ಷದಿಂದ ತೆರೆದಿರುವ ಸ್ಲ್ಯಾಬ್ ಇನ್ನೂ ಮುಕ್ತಿ ನೀಡದಿರುವುದು ವಿಪರ್ಯಾಸವಾಗಿದೆ.

ಬೆಳಗ್ಗೆ, ಸಂಜೆ ಹಾಗೂ ರಾತ್ರಿ ವೇಳೆ ಹಲವರು ಈ ಭಾಗದಲ್ಲಿ ತೆರಳುತ್ತಾರೆ. ಕೆಲವೊಂದು ಕಾಂಕ್ರೀಟ್‌ ಸ್ಲ್ಯಾಬ್ ಎದ್ದು ಹೋಗಿರುವ ಕಾರಣ ಎಡವಿಬೀಳುವ ಘಟನೆ ನಡೆಯುತ್ತಿವೆ. ಬೀದಿ ದೀಪವಿದ್ದರೂ ರಾತ್ರಿವೇಳೆ ಅರಿವಿಗೆ ಬಾರದೆ ಹಲವರು ಹೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಲ್ಲದೆ ಗ್ರಂಥಾಲಯ, ಶೈಕ್ಷಣಿಕ ಸಂಸ್ಥೆಗಳಿರುವ ಮಣಿಪಾಲಕ್ಕೆ ಇದು ಶೋಭೆಯಲ್ಲ ಎನ್ನುತ್ತಾರೆ ಕೆಎಂಸಿ ನೌಕರ ಹಾಗೂ ಈ ಭಾಗದಲ್ಲಿ ದಿನನಿತ್ಯ ಗ್ರಂಥಾಲಯಕ್ಕೆ ಸಂಚರಿಸುವ ಶಿವಕುಮಾರ್‌ ಶೆಟ್ಟಿಗಾರ್‌ ಅವರು.

ಇದನ್ನೂ ಓದಿ : ಬೆಂಗಳೂರಿಗೆ ಕಾಲಿಟ್ಟ ಹಿಜಾಬ್ ವಿವಾದ : ಪ್ರೌಢಶಾಲೆಯಲ್ಲಿ ಬಿಗುವಿನ ವಾತಾವರಣ

ಟಾಪ್ ನ್ಯೂಸ್

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

10-kaup

Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ

ex-pm

EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್‌ ಅಂತ್ಯಕ್ರಿಯೆ

9-shivamogga

Shivamogga: ಮುಂದುವರಿದ ಕರಡಿಗಳ ಹಾವಳಿ; ಸ್ಥಳೀಯರಲ್ಲಿ ತೀವ್ರ ಆತಂಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-kaup

Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

5

Kinnigoli: ದಾಮಸ್‌ಕಟ್ಟೆ – ಏಳಿಂಜೆ ರಸ್ತೆ ಹೊಂಡಮಯ

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

4

Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು

Shimoga: ರಿಪ್ಪನ್ ಪೇಟೆ ಸಮೀಪ ಹಿಟ್ ಅಂಡ್ ರನ್; ಬೈಕ್ ಸವಾರ ಸಾವು

Shimoga: ರಿಪ್ಪನ್ ಪೇಟೆ ಸಮೀಪ ಹಿಟ್ ಅಂಡ್ ರನ್; ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.