ಪರಿಷತ್ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್, ಶತಾಯಗತಾಯ ಗೆಲ್ಲಲು ಬಿಜೆಪಿ ಯತ್ನ
Team Udayavani, Nov 19, 2021, 7:50 PM IST
ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ತೆರೆಮರೆಯಲ್ಲೇ ಜಿದ್ದಾಜಿದ್ದಿನ ಕಸರತ್ತು ನಡೆಯುತ್ತಿದೆ. ಸತತ ಎರಡು ಅವಧಿಗೆ ಚಿತ್ರದುರ್ಗ ಕ್ಷೇತ್ರದಲ್ಲೇ ಗೆದ್ದು ಬೀಗಿದ್ದ ಕಾಂಗ್ರೆಸ್ ಮತ್ತೆ ಅ ಧಿಕಾರಕ್ಕೆರಲು ಸೂಕ್ತ ಅಭ್ಯರ್ಥಿಯ ತಲಾಶ್‌ನಲ್ಲಿದೆ. ಬಿಜೆಪಿ ಎರಡು ಬಾರಿ ಪರಾಭವಗೊಂಡಿದ್ದು, ಈ ಬಾರಿ ಶತಾಯಗತಾಯ ಪರಿಷತ್ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ತಯಾರಿ ನಡೆಸುತ್ತಿದೆ.
ಹಾಲಿ ಸದಸ್ಯ ರಘು ಆಚಾರ್ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ಹೊಸ ಅಭ್ಯರ್ಥಿ ಯಾರಾಗಲಿದ್ದಾರೆ, ಸ್ಥಳೀಯರೋ, ಹೊರಗಿನವರೋ ಎನ್ನುವ ಕುತೂಹಲ ಜಿಲ್ಲೆಯ ಜನರಲ್ಲಿ ಮೂಡಿದೆ. 9 ವಿಧಾನಸಭಾ ಕ್ಷೇತ್ರ ವ್ಯಾಪ್ತಿ: ವಿಧಾನ ಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವ್ಯಾಪ್ತಿಯಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆ ಸೇರಿ 9 ತಾಲೂಕುಗಳಿವೆ. ಹರಿಹರ, ಜಗಳೂರು ಹಾಗೂ ದಾವಣಗೆರೆ ಉತ್ತರ ಮತ್ತು ದಕ್ಷಿಣ ಭಾಗಗಳು, ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳು ಕ್ಷೇತ್ರ ವ್ಯಾಪ್ತಿಯಲ್ಲಿವೆ. 9 ವಿಧಾನಸಭಾ ಕ್ಷೇತ್ರಗಳಿಂದ 5070 ಮತದಾರರಿದ್ದಾರೆ.
ಕಳೆದ ಬಾರಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸೇರಿ 5348 ಮತದಾರರಿದ್ದರು. ಆದರೆ ಈ ವರ್ಷ ಚುನಾವಣೆ ನಡೆಯದ ಕಾರಣ ಕಾಯಂ ಮತಗಳೇ ಸಿಗುತ್ತಿಲ್ಲ. 260 ಕಾಯಂ ಮತಗಳು ಈ ಬಾರಿ ಸಿಗಲ್ಲ: ಸ್ಥಳೀಯ ಸಂಸ್ಥೆಗಳ ಮತದಾರರಿಂದ ವಿಧಾನ ಪರಿಷತ್ತಿಗೆ ಅಭ್ಯರ್ಥಿ ಆಯ್ಕೆಯಾಗುವುದರಿಂದ ಇಲ್ಲಿರುವ ಒಂದೊಂದು ಮತವೂ ಮುಖ್ಯ. ಚಿತ್ರದುರ್ಗ ಜಿಲ್ಲೆಯ ತಾಲೂಕು ಪಂಚಾಯಿತಿಗಳ 136 ಸ್ಥಾನಗಳು ಹಾಗೂ 37 ಜಿಲ್ಲಾ ಪಂಚಾಯಿತಿ ಸದಸ್ಯರ ಅವ ಧಿ ಪೂರ್ಣಗೊಂಡಿದೆ. ಮತ್ತೆ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಈ ಎಲ್ಲ ಮತಗಳು ಅಲಭ್ಯವಾಗಲಿವೆ. ಈ ಮತಗಳ ಜೊತೆಗೆ ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳನ್ನು ಸೇರಿಸಿದರೆ ಒಟ್ಟು 260 ಮತಗಳು ಕೈ ತಪ್ಪಲಿವೆ. ಯಾವ ಪಕ್ಷಕ್ಕೆ ಎಷ್ಟು ಮತಗಳು ಖೋತಾ?: 2016ರಲ್ಲಿ ನಡೆದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಆಧಾರದಲ್ಲಿ ಲೆಕ್ಕ ಹಾಕಿದರೆ ಒಟ್ಟು 9 ತಾಲೂಕುಗಳ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಅವ ಧಿ ಮುಗಿದಿದ್ದರೂ ಚುನಾವಣೆ ನಡೆಯದ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ 16 ಸದಸ್ಯರು ಸೇರಿ 260 ಮತಗಳಿವೆ. ಇದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 127, ಬಿಜೆಪಿ 96, ಜೆಡಿಎಸ್ 26 ಹಾಗೂ 11 ಪಕ್ಷೇತರ ಮತಗಳು ನೇರವಾಗಿ ಪಕ್ಷಗಳಿಗೆ ನಷ್ಟ ಉಂಟುಮಾಡುವ ಸಾಧ್ಯತೆ ಇದೆ.
ತಪ್ಪಿದ್ದರಲ್ಲಿಕಾಂಗ್ರೆಸ್ ಮತಗಳೇ ಹೆಚ್ಚು
ಕಳೆದ ಬಾರಿ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿತ್ತು. ಆದರೆ ಈ ವರ್ಷ ಬಿಜೆಪಿ ಮುಂದಿದೆ. ಇದು ಆ ಪಕ್ಷಕ್ಕೆ ಪ್ಲಸ್ ಆಗಬಹುದು. ಇದರ ಜತೆಗೆ ಜಿಪಂ, ತಾಪಂ ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದಿದ್ದರೆ ಇನ್ನೊಂದಿಷ್ಟು ಮತಗಳು ಮೂರು ಪಕ್ಷಗಳ ಬುಟ್ಟಿಗೆ ಸೇರುತ್ತಿದ್ದವು. ಕಳೆದ ಜಿಪಂ, ತಾಪಂ ಚುನಾವಣೆ ಮತಗಳ ಆಧಾರದಲ್ಲಿ ಮತಗಳ ಲೆಕ್ಕ ಹಾಕಿದರೆ ಮೇಲ್ನೋ ಟಕ್ಕೆ ಕಾಂಗ್ರೆಸ್ ಪಕ್ಷದ ಕಾಯಂ ಮತಗಳು ಹೆಚ್ಚು ಕೈತಪ್ಪಲಿವೆ. ನಂತರದ ಸ್ಥಾನದಲ್ಲಿ ಬಿಜೆಪಿ ಇದೆ. ಪಕ್ಷೇತರರ ಮತಗಳು ಎರಡು ಪ್ರಮುಖ ಪಕ್ಷಗಳಿಗೆ ವಿಭಜನೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ತಿಪ್ಪೇಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.