Chhattisgarh: ಕಾಂಗ್ರೆಸ್ ಗ್ರಹಣ “ಅಧಿಕಾರದಿಂದ ಕಿತ್ತೂಗೆಯುವ ಕಾಲ ಬಂದಿದೆ”:ಜೆ.ಪಿ.ನಡ್ಡಾ
Team Udayavani, Oct 29, 2023, 11:13 PM IST
ಹೊಸದಿಲ್ಲಿ: “ಛತ್ತೀಸ್‌ಗಢದಲ್ಲಿನ ಕಾಂಗ್ರೆಸ್ ಸರಕಾರವು ಬಡಜನರ ಕಲ್ಯಾಣವನ್ನು ನಿರ್ಲಕ್ಷಿಸಿದೆ. ಕಳೆದ 5 ವರ್ಷಗಳಿಂದಲೂ ರಾಜ್ಯಕ್ಕೆ “ಗ್ರಹಣ’ ಬಡಿದಿತ್ತು. ಈಗ ಆ ಪಕ್ಷವನ್ನು ಕಿತ್ತೂಗೆ ಯುವ ಸಮಯ ಬಂದಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ರವಿವಾರ ಛತ್ತೀಸ್‌ಗಢದ ರಾಯ್ಪುರದಲ್ಲಿ “ಬೂತ್ ವಿಜಯ್ ಸಂಕಲ್ಪ ಅಭಿಯಾನ್’ ಉದ್ದೇಶಿಸಿ ಮಾತ ನಾಡಿದ ಅವರು, ನಾವು ಭೂಪೇಶ್ ಬಘೇಲ್ ಅವರ ಭ್ರಷ್ಟ, ಅಸಮರ್ಥ, ನಂಬಿಕೆಗೆ ಅರ್ಹವಲ್ಲ, ಊಹಿ ಸಿಕೊಳ್ಳಲೂ ಆಗದ ಸರಕಾರ ವನ್ನು ನೋಡುತ್ತಿದ್ದೇವೆ. ನಂಬಿಕೆಗೆ ಅರ್ಹವಲ್ಲ ಎಂದು ನಾನೇಕೆ ಹೇಳಿದೆ ಎಂದರೆ, ಇಲ್ಲಿ ಮುಖ್ಯಮಂತ್ರಿಯವರ ಕಾರ್ಯದರ್ಶಿಯೇ ಹಲವು ವರ್ಷಗಳ ಕಾಲ ಜೈಲಲ್ಲಿದ್ದರು. ಇಂಥದ್ದನ್ನು ನೀವೆಲ್ಲಾದರೂ ಕಂಡಿದ್ದೀರಾ? ಈಗ ಇಂಥ ಭ್ರಷ್ಟ ಸರಕಾರ ಅಧಿಕಾ ರದಲ್ಲಿರಬೇಕೇ, ಬೇಡವೇ ಎಂಬುದನ್ನು ಜನರೇ ನಿರ್ಧ ರಿಸಬೇಕು ಎಂದಿದ್ದಾರೆ.
ಪ್ರತಿ ಯೊಂದು ಬೂತ್‌ನಲ್ಲೂ ಮನೆ ಮನೆಗೆ ಹೋಗಿ, ಮುಂದಿನ ತಿಂಗಳ ಚುನಾವ ಣೆಯಲ್ಲಿ ಮತದಾನ ಮಾಡುವಂತೆ ಜನರನ್ನು ಉತ್ತೇಜಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಕರ್ನಾಟಕಕ್ಕೆ ಬರಲೇಬೇಕೆಂದಿಲ್ಲ: ಕೆಟಿಆರ್
“ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ನೋಡಲು ಕರ್ನಾಟಕಕ್ಕೆ ಹೋಗಲೇಬೇ ಕೆಂದೇನೂ ಇಲ್ಲ’. ಹೀಗೆಂದು ಹೇಳಿದ್ದು ತೆಲಂಗಾಣದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್. ತೆಲಂಗಾಣದಲ್ಲಿ ಶನಿವಾರ ಚುನಾವಣ ಪ್ರಚಾರದಲ್ಲಿ ಮಾತ ನಾಡಿದ್ದ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, “ಕಾಂಗ್ರೆಸ್ ಚುನಾವಣೆಗೂ ಮುನ್ನ ಘೋಷಿಸಿದ್ದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆಯೇ, ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕೆಂದರೆ ಕರ್ನಾಟಕಕ್ಕೆ ಒಮ್ಮೆ ಭೇಟಿ ನೀಡಿ’ ಎಂದು ಕೆಟಿಆರ್‌ಗೆ ಸವಾಲು ಹಾಕಿದ್ದರು. ಅದಕ್ಕೆ ರವಿವಾರ ಪ್ರತಿಕ್ರಿಯಿಸಿರುವ ಕೆ.ಟಿ.ರಾಮರಾವ್, “ನಿಮ್ಮ ವೈಫಲ್ಯಗಳನ್ನು ನೋಡಲು ಕರ್ನಾಟಕಕ್ಕೆ ಬರಲೇಬೇಕೆಂದಿಲ್ಲ. ಏಕೆಂದರೆ ನಿಮ್ಮಿಂದ ವಂಚನೆಗೆ ಒಳಗಾದ ರೈತರೇ ಇಲ್ಲಿಗೆ ಬಂದು ಅವರಿಗಾದ ಅನ್ಯಾಯವನ್ನು ಬಿಡಿಸಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರೆ ಮುಂದಾಗುವ ಅಪಾಯಗಳ ಬಗ್ಗೆ ಅವರೇ ತೆಲಂಗಾಣದ ರೈತರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ತೆಲಂಗಾಣದ ಜನರು ಯಾವತ್ತೂ ಕಾಂಗ್ರೆಸನ್ನು ನಂಬಲ್ಲ’ ಎಂದು ಎಕ್ಸ್(ಟ್ವಿಟರ್)ನಲ್ಲಿ ಬರೆದುಕೊಂಡಿದ್ದಾರೆ.
ಚುನಾವಣೆಯಿಂದ ದೂರ ಸರಿದ ತೆಲುಗು ದೇಶಂ ಪಾರ್ಟಿ!
ತೆಲಂಗಾಣದಲ್ಲಿ ಈ ಬಾರಿ ಚುನಾವಣ ಕಣದಿಂದ ಹೊರಗುಳಿಯಲು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ(ತೆಲುಗು ದೇಶಂ ಪಾರ್ಟಿ) ನಿರ್ಧರಿಸಿದೆ. ಭ್ರಷ್ಟಾಚಾರದ ಆರೋಪದಲ್ಲಿ ನಾಯ್ಡು ಅವರು ಜೈಲು ಸೇರಿರುವ ಕಾರಣ ಕಣದಿಂದ ದೂರ ಸರಿಯುತ್ತಿರುವುದಾಗಿ ಪಕ್ಷ ಹೇಳಿದೆ. ಇತ್ತೀಚೆಗೆ ಜೈಲಿನಲ್ಲಿ ನಾಯ್ಡು ಅವರನ್ನು ಭೇಟಿಯಾದ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ಕಸಾನಿ ಜ್ಞಾನೇಶ್ವರ್ ಈ ವಿಚಾರ ತಿಳಿಸಿದ್ದಾರೆ. 2014ರ ಅಸೆಂಬ್ಲಿ ಚುನಾವಣೆಯಲ್ಲಿ ಟಿಡಿಪಿ 15 ಸ್ಥಾನಗಳಲ್ಲಿ ಜಯ ಗಳಿಸಿತ್ತು. 2018ರಲ್ಲಿ 2 ಸೀಟುಗಳನ್ನು ಗಳಿಸಿತ್ತು. ಅನಂತರದಲ್ಲಿ ಆ 2 ಶಾಸಕರೂ ಆಡಳಿತಾರೂಢ ಪಕ್ಷಕ್ಕೆ ನಿಷ್ಠೆ ಬದಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.