KArnataka: ಕಾಂಗ್ರೆಸ್-ಜೆಡಿಎಸ್ ಕರೆಂಟ್ ಜಗಳ
Team Udayavani, Nov 15, 2023, 11:33 PM IST
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ನಡುವೆ ಕರೆಂಟ್ ತಂತಿಗಳ ಸ್ಪರ್ಶಾಟ ಜೋರಾಗಿದ್ದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಿದ್ಯುತ್ ಕಳ್ಳತನದ ಆರೋಪ ಮಾಡಿರುವ ಕಾಂಗ್ರೆಸ್ ಮೇಲೆ ಜೆಡಿಎಸ್ ವಾಗ್ಧಾಳಿ ನಡೆಸಿದೆ.
ಒಂದು ವಾರದಿಂದ ಎಚ್.ಡಿ. ಕುಮಾರಸ್ವಾಮಿ ಅವರು ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗೆ ಕೈ ಪಡೆ ಸುಸ್ತಾಗಿದೆ. ಎಚ್‌ಡಿಕೆ ಅವರ ರವಿವಾರದ ಮಾಧ್ಯಮಗೋಷ್ಠಿ ಒಂದರಿಂದಲೇ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ. ಹಾಗಾಗಿ ಸದ್ಯ ಜನರ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್‌ನವರು ಕರೆಂಟ್ ವೈರ್ ಮೊರೆ ಹೋಗಿದ್ದಾರೆ ಎಂದು ಜೆಡಿಎಸ್ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಜೆಡಿಎಸ್, ಕಂಬದಿಂದ ಕರೆಂಟ್ ಪಡೆದಿರುವ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್ ವಿಕೃತಿ ಮಿತಿ ಮೀರಿದೆ. ಬೆಸ್ಕಾಂನವರು ವಿದ್ಯುತ್ ವೇಗದಲ್ಲಿ ಎಫ್ಐಆರ್ ದಾಖಲಿಸಿದ್ದಾ ರೆ. ಕುಮಾರಸ್ವಾಮಿ ಅವರು ತಿಹಾರ್ ಜೈಲಿಗೆ ಹೋಗುವ ತಪ್ಪೇನು ಮಾಡಿಲ್ಲ. ಇ.ಡಿ., ಸಿಬಿಐ, ಐಟಿಯವರು ಎಚ್‌ಡಿಕೆ ಬೆನ್ನು ಹತ್ತಿಲ್ಲ. ಯಾರಿಗೂ ಕುಮಾರಸ್ವಾಮಿ ಹೆದರಬೇಕಾಗಿಲ್ಲ ಎಂದು ಹೇಳಿದೆ.
ದಂಡ ಕಟ್ಟುವುದಾಗಿ ಹೇಳಿರುವುದು ಅಭಿನಂದನೀಯ: ಡಿಕೆಶಿ
ಅಚಾತುರ್ಯವೋ, ಕಳವೋ ಒಟ್ಟಿನಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಒಪ್ಪಿಕೊಂಡಿರುವ ಕುಮಾರಸ್ವಾಮಿ, ದಂಡ ಕಟ್ಟುವುದಾಗಿ ಹೇಳಿರುವುದು ಅಭಿನಂದನೀಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರ ಸ್ವಾಮಿ ಮನೆಗೆ ವಿದ್ಯುತ್ ಕಳವು ವಿಚಾರವನ್ನು ಮಾಧ್ಯಮ ಗಳಲ್ಲಿ ಗಮನಿಸಿದೆ. ಅವರ ನೆರೆಹೊರೆ ಯವರೇ ಅಕ್ರಮ ವಿದ್ಯುತ್ ಸಂಪ ರ್ಕದ ವೀಡಿಯೋ ಮಾಡಿ ಮಾಧ್ಯಮ ಗಳಿಗೆ ನೀಡಿದ್ದಾರೆ ಎಂದರು.
ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವುದು ಗೊತ್ತಾದ ಬಳಿಕ ನಮ್ಮ ಪಕ್ಷದ ಸಾಮಾಜಿಕ ಜಾಲತಾಣ ಘಟಕ ಏನು ಕೆಲಸ ಮಾಡಬೇಕೋ ಅದನ್ನು ಮಾಡಿದೆ. ಅವರು ಮಾಡೋದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು.
ಸರಕಾರ ಮಧ್ಯೆಪ್ರವೇಶ ಇಲ್ಲ
ವಿದ್ಯುತ್ ಕಳವು ಬಗ್ಗೆ ಇಲಾಖೆ ಯವರು ಏನು ಕ್ರಮ ತೆಗೆದು ಕೊಳ್ಳುತ್ತಾರೋ ನೋಡೋಣ. ಈ ವಿಷಯದಲ್ಲಿ ಸರಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.