Rajasthan: ಸ್ವಯಂಕೃತ ಅಪರಾಧಕ್ಕೆ ಸೋತ ಕಾಂಗ್ರೆಸ್‌

ಗೆಹ್ಲೋಟ್‌- ಪೈಲಟ್‌ ನಡುವಿನ ಭಿನ್ನಮತಕ್ಕೆ ಮತದಾರರ ತೀರ್ಪು-ಹೆಚ್ಚಿನ ಸ್ಥಾನಗಳನ್ನು ಗೆದ್ದ ಬಿಜೆಪಿ - 25 ಸಚಿವರ ಪೈಕಿ ಗೆದ್ದದ್ದು 8 ಮಂದಿ

Team Udayavani, Dec 3, 2023, 11:51 PM IST

gehlot pilot rahul
ಎಲ್ಲಾ ಲೆಕ್ಕಾಚಾರಗಳು ತಲೆಕಳಗಾಗಿವೆ. ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್‌ ಆಡಳಿತ ವಿರೋಧಿ ಅಲೆ ಹಾಗೂ ಸಿಎಂ ಅಶೋಕ್‌ ಗೆಹ್ಲೋಟ್‌, ಶಾಸಕ ಸಚಿನ್‌ ಪೈಲಟ್‌ ಅವರ ಕಚ್ಚಾಟಕ್ಕೆ ಸೋಲು ಅನುಭವಿಸಿದೆ. ಜತೆಗೆ ಭ್ರಷ್ಟಾಚಾರ ಆರೋಪಗಳು, ಕೋಮು ಗಲಭೆಗಳು ಸರ್ಕಾರಕ್ಕೆ ಹಿನ್ನಡೆಯಾಗಲು ಕಾರಣವಾದವು.
ಹೊಸ ವಿಧಾನಸಭೆಯಲ್ಲಿ ಬಿಜೆಪಿ 115, ಕಾಂಗ್ರೆಸ್‌  69, ಭಾರತ್‌ ಆದಿವಾಸಿ ಪಕ್ಷ 3, ಇತರರು 10 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಹಾಲಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ 100, ಬಿಜೆಪಿ 73, ಬಿಎಸ್‌ಪಿ 6, ಇತರರು 20 ಶಾಸಕರಿದ್ದಾರೆ.
ಕಾಂಗ್ರೆಸ್‌ ಸರ್ಕಾರಕ್ಕೆ ಪ್ರಧಾನ ಹಿನ್ನಡೆಯಾಗಿ ಪರಿಣಮಿಸಿದ್ದು ಗೆಹ್ಲೋಟ್‌ ಮತ್ತು ಪೈಲಟ್‌ ನಡುವಿನ ಭಿನ್ನಮತ. ಕಾಂಗ್ರೆಸ್‌ ವರಿಷ್ಠರು ಅವರಿಬ್ಬರ ನಡುವಿನ ರಾಜಕೀಯ ಭಿನ್ನ ನಿಲುವನ್ನು ಶಮನ ಗೊಳಿಸಲು ಹಲವು ಬಾರಿ ಪ್ರಯತ್ನ ಮಾಡಿದ್ದರೂ, ಅದು ಫ‌ಲಕೊಡಲಿಲ್ಲ.
ಇಬ್ಬರು ಹಿರಿಯ ನಾಯಕರ ನಡುವಿನ ವೈಯಕ್ತಿಕ ಕಚ್ಚಾಟದ ನಡುವೆಯೇ ಸೆಪ್ಟೆಂಬರ್‌ನಲ್ಲಿ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ರಾಜಸ್ಥಾನ ಪ್ರವೇಶಿಸಿತ್ತು. ಮೇಲ್ನೋಟಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರೂ, ಹಾಲಿ ಚುನಾವಣೆಯಲ್ಲಿ ಅದು ಮತಗಳಾಗಿ ಪರಿವರ್ತನೆಗೊಳಿಸುವಲ್ಲಿ ರಾಜ್ಯದ ಕಾಂಗ್ರೆಸ್‌ ನಾಯಕರು ವಿಫ‌ಲರಾಗಿದ್ದಾರೆ.
ಭ್ರಷ್ಟಾಚಾರ ಆರೋಪ: 2019ರಿಂದ 2022ರ ಅವಧಿಯಲ್ಲಿ ರಾಜಸ್ಥಾನ ಲೋಕಸೇವಾ ಆಯೋಗ 8 ಪರೀಕ್ಷೆಗಳನ್ನು ನಡೆಸಿತ್ತು. ಅದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದ ಆರೋಪ ಕೇಳಿ ಬಂದಿತ್ತು. ಪ್ರಧಾನಿ ಮೋದಿ ಮತ್ತು ಬಿಜೆಪಿಯ ಇತರ ನಾಯಕರು ಆ ಅಂಶಗಳನ್ನು ಮುಂದಿಟ್ಟು ಪ್ರಚಾರ ನಡೆಸಿದರು. ಮಾಜಿ ಸಚಿವ ರಾಜೇಂದ್ರ ಸಿಂಗ್‌ ಗುಧಾ ಹೇಳಿದ್ದ “ಕೆಂಪು ಡೈರಿಯಲ್ಲಿ ಸಿಎಂ ಗೆಹ್ಲೋಟ್‌ ಸೇರಿದಂತೆ ಎಲ್ಲರ ವಿಚಾರವೂ ಒಳಗೊಂಡಿದೆ’ ಎಂದು ಹೇಳಿದ್ದು ಬಿಜೆಪಿಗೆ ಲಾಭವಾಯಿತು. ಐದು ವರ್ಷಗಳ ಅವಧಿಯಲ್ಲಿ ರಾಜಸ್ಥಾನದ ಯುವಕರ ಜತೆಗೆ ಕಾಂಗ್ರೆಸ್‌ ಆಟವಾಡಿದೆ ಎಂದು ಪ್ರಧಾನಿ ಟೀಕಿಸಿದ್ದರು.
ಕೋಮು ಸಂಘರ್ಷಗಳು: ಕರೌಲಿ, ಜೋಧ್‌ಪುರಗಳಲ್ಲಿ ನಡೆದಿದ್ದ ಕೋಮು ಗಲಭೆಗಳು ಮತ್ತು ಅದರ ನಿರ್ವಹಿಸಿದ ರೀತಿಯಿಂದಾಗಿ ಗೆಹೊÉàಟ್‌ ಸರಕಾರಟೀಕೆಗೆ ಗುರಿಯಾಯಿತು.  ಎಲ್ಲದಕ್ಕಿಂತ ಹೆಚ್ಚಾಗಿ ಜೈಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಅವರನ್ನು ಇಬ್ಬರು ಕತ್ತು ಸೀಳಿ ಹತ್ಯೆ ಮಾಡಿದ್ದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಅದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಇತರ ನಾಯಕರು ಅದನ್ನು ಚುನಾ ವಣೆಯಲ್ಲಿ ಉಲ್ಲೇಖೀಸಿದರು. ತಮಿಳುನಾಡು ಸಚಿವ ಹಿಂದುತ್ವವನ್ನು ನಾಶ ಮಾಡಬೇಕು ಎಂಬ ಉದಯನಿಧಿ ಸ್ಟಾಲಿನ್‌ ಹೇಳಿಕೆ  ಪ್ರತಿಕೂಲವಾಯಿತು.
ಕೈಕೊಟ್ಟ ಗ್ಯಾರಂಟಿ: ಕರ್ನಾಟಕ ಮಾದರಿಯ ಗ್ಯಾರಂಟಿಯ ಒಟ್ಟು ಏಳು ಗ್ಯಾರಂಟಿಗಳನ್ನು ಕಾಂಗ್ರೆಸ್‌ ಕೂಡ ನೀಡಿತ್ತು. ಆದರೆ, ಅವುಗಳು ಹಾಲಿ ಸರ್ಕಾರದ ಕೈಹಿಡಿಯಲಿಲ್ಲ ಎನ್ನು ವುದು ಗಮನಾರ್ಹ.
ಸ್ಪೀಕರ್‌ ಸಿ.ಪಿ.ಜೋಶಿ, ಸಚಿವರಾಗಿರುವ ಗೋವಿಂದ ಮೇಘ್ವಾಲ್‌, ವಿಶ್ವೇಂದ್ರ ಸಿಂಗ್‌, ಭನ್ವರ್‌ ಸಿಂಗ್‌ ಭಾಟಿ, ಶಾಲೆ ಮೊಹಮ್ಮದ್‌ ಸೇರಿದಂತೆ ಪ್ರಮುಖರು ಸೋಲನುಭವಿಸಿದ್ದಾರೆ. ಗೆಹ್ಲೋಟ್‌ ಸಂಪುಟದ 25 ಮಂದಿ ಸಚಿವರ ಪೈಕಿ ಗೆದ್ದು ವಿಜಯದ ನಗೆ ಬೀರಿದ್ದು 8 ಮಂದಿ ಮಾತ್ರ. ಉಳಿದ ಹದಿನೇಳು ಮಂದಿ ಸಚಿವರು ಸೋಲನುಭವಿಸಿದ್ದಾರೆ.
 ಬಿಜೆಪಿ ಗೆಲುವಿಗೆ ಕಾರಣಗಳು
-ಆಡಳಿತ ವಿರೋಧಿ ಅಲೆಯ ಸಂಪೂರ್ಣ ಲಾಭ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿ
-ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದು.
-ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಾದ್ಯಂತ ನಡೆಸಿದ ಬಿರುಸಿನ ಪ್ರಚಾರ
-ಪ್ರಧಾನಿ ಮೋದಿ ವೈಯಕ್ತಿಕ ವರ್ಚಸ್ಸು
-ಹಿಂದುತ್ವದ ಪ್ರತಿಪಾದನೆಯ ಜತೆಜತೆಯಲ್ಲಿ  ಜನಪರ, ಪ್ರಗತಿಪರ ಆಡಳಿತಕ್ಕೆ ಒತ್ತು ನೀಡುವ ಪ್ರಣಾಳಿಕೆ
-ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ
-ಕಾಂಗ್ರೆಸ್‌ ಸರ್ಕಾರದ ಒಳಜಗಳ
-ಗೆಹ್ಲೋಟ್‌ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ
ಕಾಂಗ್ರೆಸ್‌ಸೋಲಿಗೆ ಕಾರಣಗಳು
-ಪ್ರಬಲ ಆಡಳಿತವಿರೋಧಿ ಅಲೆ
-ಗೆಹ್ಲೋಟ್‌-ಪೈಲಟ್‌ ಕಚ್ಚಾಟಕ್ಕೆ ರೋಸಿಹೋದ ಜನತೆ
-ಚುನಾವಣೆಯನ್ನೂ ಒಗ್ಗೂಡಿ ಎದುರಿಸಲಾರದಂತಹ ಸಂಕಷ್ಟದಲ್ಲಿ ಸಿಲುಕಿದ್ದು.
-ಪ್ರಬಲ ನಾಯಕತ್ವದ ಕೊರತೆ
-ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನಾಪತ್ರಿಕೆ ಸೋರಿಕೆ ಹಗರಣ ಸಹಿತ ವಿವಿಧ ಭ್ರಷ್ಟಾಚಾರ ಹಗರಣಗಳು
-ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬ ಆರೋಪ
ನಾಲ್ವರು ಸಂಸದರಿಗೆ ಗೆಲುವು
ರಾಜಸ್ಥಾನದಲ್ಲಿ ಈ ಬಾರಿ ಶತಾಯಗತಾಯ ಅಧಿಕಾರಕ್ಕೇರಲೇ ಬೇಕು ಎಂದು ಪಣತೊಟ್ಟಿದ್ದ ಬಿಜೆಪಿ ಈ ಬಾರಿ ವಿಧಾನಸಭಾ ಚುನಾವಣೆ ಯಲ್ಲಿ  7 ಸಂಸದರನ್ನು ಕಣಕ್ಕಿಳಿಸಿತ್ತು. ಸಂಸದರ ಜನಪ್ರಿಯತೆಯನ್ನು ವಿಧಾನಸಭೆ ಚುನಾವಣೆಯಲ್ಲೇ ಪರೀಕ್ಷೆಗೊಡ್ಡಿದ್ದ ಬಿಜೆಪಿ ವರಿಷ್ಠರು ಇದರಲ್ಲಿ ಭಾಗಶಃ ಯಶಸ್ಸು ಕಂಡಿದ್ದಾರೆ. ಚುನಾವಣ ಕಣಕ್ಕಿಳಿದಿದ್ದ ಏಳು ಮಂದಿ ಸಂಸದರಲ್ಲಿ ನಾಲ್ವರು ಜಯಶಾಲಿಗಳಾಗಿದ್ದರೆ ಮೂವರಿಗೆ ಸೋಲಿನ ಕಹಿ ಅನುಭವವಾಗಿದೆ.  ಜೈಪುರ ಗ್ರಾಮೀಣದ ಸಂಸದ ರಾಜವರ್ಧನ್‌ ಸಿಂಗ್‌ ರಾಥೋಡ್‌,  ಸಂಸದೆ ದಿಯಾ ಕುಮಾರಿ  ಅಳ್ವಾರ್‌ ಸಂಸದ ಬಾಬಾ ಬಾಲಕ್‌ನಾಥ್‌,  ರಾಜ್ಯಸಭಾ  ಸದಸ್ಯರಾಗಿರುವ ಕಿರೋಡಿ ಲಾಲ್‌ ಮೀನಾ ಸವಾಯಿ ಮಧೋಪುರದಿಂದ ಸ್ಫರ್ಧಿಸಿ ಗೆದ್ದಿದ್ದಾರೆ.
ಐದು ವರ್ಷಕ್ಕೊಮ್ಮೆ ಬದಲು 
ರಾಜಸ್ಥಾನದಲ್ಲಿ 1990ರ ಚುನಾವಣೆಯ ವರೆಗೆ ಕಾಂಗ್ರೆಸ್‌ ಗೆಲ್ಲುತ್ತಾ ಬಂದಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿತ್ತು. ಅದರ ಪ್ರಭಾವದಿಂದಲೋ ಎಂಬಂತೆ 1990ರ ಚುನಾವಣೆಯಲ್ಲಿ ದಿ.ಬೈರೋನ್‌ ಸಿಂಗ್‌ ಶೆಖಾವತ್‌ ನೇತೃತ್ವದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರಅಲ್ಲಿ ಅಸ್ತಿತ್ವಕ್ಕೆ ಬಂದಿತು. ಆ ಸರಕಾರ1992ರ ಡಿಸೆಂಬರ್‌ನಲ್ಲಿ ಪತನಗೊಂಡಿತು. 1993ರ ಡಿಸೆಂಬರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬೈರೋನ್‌ ಸಿಂಗ್‌ ಶೆಖಾವತ್‌ ನೇತೃತ್ವದ ಬಿಜೆಪಿ ಅಸ್ತಿತ್ವಕ್ಕೆ ಬಂದಿತು. 1998ರಲ್ಲಿ ಅಶೋಕ್‌ ಗೆಹೊÉàಟ್‌ ನೇತೃತ್ವದ ಕಾಂಗ್ರೆಸ್‌ ಸರಕಾರಅಧಿಕಾರಕ್ಕೆ ಬಂದಿತು. ಹೀಗೆ, 1993ರ ಬಳಿಕ ಈ ರಾಜ್ಯದಲ್ಲಿ ಒಂದು ಬಾರಿ ಬಿಜೆಪಿ ಮತ್ತೂಂದು ಬಾರಿ ಕಾಂಗ್ರೆಸ್‌ ಚುನಾವಣೆಯಲ್ಲಿ ಗೆದ್ದಿದೆ. 1998, 2003 ಮತ್ತು 2018ರ ಚುನಾವಣೆಯಲ್ಲಿ ಅಶೋಕ್‌ ಗೆಹೊÉàಟ್‌ ನೇತೃತ್ವದ ಕಾಂಗ್ರೆಸ್‌ ಸರಕಾರಗೆದ್ದಿದೆ. 2003 ಮತ್ತು 2013ರ ಚುನಾವಣೆಯಲ್ಲಿ ವಸುಂಧರಾ ರಾಜೇ ನೇತೃತ್ವದಲ್ಲಿ ಬಿಜೆಪಿ ಸರಕಾರಗೆದ್ದು ಅಧಿಕಾರ ನಡೆಸಿತ್ತು. ರಾಜಸ್ಥಾನದಲ್ಲಿ ಆವರ್ತನ ಪದ್ಧತಿ ಮುಂದುವರಿದಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.