![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 25, 2023, 11:54 PM IST
ತೆಲಂಗಾಣದಲ್ಲಿ ಬಿಆರ್‌ಎಸ್ ಸರಕಾರವನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಪಣ ತೊಟ್ಟಿರುವ ಕಾಂಗ್ರೆಸ್, ನಲ್ಗೊಂಡಾ, ಖಮ್ಮಾಮ್‌ನಂಥ ಕೆಲವು ಪ್ರದೇಶಗಳಲ್ಲಿ ಎಡಪಕ್ಷಗಳ ಮತಗಳನ್ನು ತನ್ನತ್ತ ಸೆಳೆಯಲು ಎಲ್ಲ ರೀತಿಯ ಕಸರತ್ತುಗಳನ್ನು ನಡೆಸಿದೆ. ಸಿಪಿಐ ಜತೆ ಬಾಂಧವ್ಯ ಬೆಸೆದು ಒಂದು ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಆದರೆ ಸಿಪಿಎಂ ಜತೆ ಒಪ್ಪಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ಪಕ್ಷವು 19 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ 115 ಕ್ಷೇತ್ರಗಳಲ್ಲಿ ಯಾರನ್ನು ಬೆಂಬಲಿಸುತ್ತೇವೆ ಎಂದು ಸಿಪಿಎಂ ಅಧಿಕೃತವಾಗಿ ಎಲ್ಲೂ ಘೋಷಿಸಿಲ್ಲ.
ಕಳೆದ ಚುನಾವಣೆಯಲ್ಲಿ ಅವಿಭಜಿತ ನಲ್ಗೊಂಡಾ ಜಿಲ್ಲೆಯಲ್ಲಿ ಬರುವ 12 ಅಸೆಂಬ್ಲಿ ಕ್ಷೇತ್ರಗಳ ಪೈಕಿ 9ರಲ್ಲಿ ಬಿಆರ್‌ಎಸ್, ಮೂರರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಅನಂತರ ನಡೆದ ಉಪಚುನಾವಣೆಯಲ್ಲಿ ಮತ್ತೆರಡು ಸೀಟುಗಳು ಬಿಆರ್‌ಎಸ್ ಪಾಲಾಗಿ, ಒಟ್ಟು ಸಂಖ್ಯೆ 11ಕ್ಕೇರಿತ್ತು. ಕೆಸಿಆರ್ ಸರಕಾರದ ಕಲ್ಯಾಣ ಯೋಜನೆ ಗಳಿಂದ ಆಕರ್ಷಿತರಾಗಿ ಎಡಪಕ್ಷದ ಮತಗಳೆಲ್ಲ ಬಿಆರ್‌ಎಸ್‌ಗೆ ಶಿಫ್ಟ್ ಆಗಿದ್ದವು. ಈ ಬಾರಿ ಸಿಪಿಐ ಜತೆಗಿನ ಮೈತ್ರಿಯು ನಲ್ಗೊಂಡಾ ಸೇರಿದಂತೆ ಎಡ ಬಾಹುಳ್ಯ ವಿರುವ ಪ್ರದೇಶಗಳಲ್ಲಿ ಆ ಪಕ್ಷದ ಮತಗಳನ್ನು ತನ್ನ ಬುಟ್ಟಿಗೆ ಸೇರಿಸಿಕೊಳ್ಳಲು ನೆರವಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು.
You seem to have an Ad Blocker on.
To continue reading, please turn it off or whitelist Udayavani.