Cauvery:ಸರ್ವಪಕ್ಷ ನಿಯೋಗಕ್ಕೆ ಸರ್ವಸಮ್ಮತಿ-ಕೇಂದ್ರಕ್ಕೆ ಸದ್ಯದಲ್ಲೇ ನಿಯೋಗ ಒಯ್ಯಲು ನಿರ್ಧಾರ

- ಸುಪ್ರೀಂನಲ್ಲಿ ಪ್ರಬಲ ವಾದ ಮಂಡನೆಗೆ ನಿರ್ಣಯ

Team Udayavani, Aug 23, 2023, 8:31 PM IST

river…

ಬೆಂಗಳೂರು: ಕಾವೇರಿ, ಮೇಕೆದಾಟು, ಮಹಾದಾಯಿ, ಕೃಷ್ಣಾ ಮೇಲ್ದಂಡೆ ಸಹಿತ ನಾಡಿನ ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗ ತೆರಳಲು ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಜತೆಗೆ, ಕಾವೇರಿ ಜಲವಿವಾದ ಸಂಬಂಧ ತಮಿಳುನಾಡು ಸಲ್ಲಿಸಿರುವ ಅರ್ಜಿ ವಜಾಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್‌ ಮುಂದೆ ಪ್ರಬಲ ವಾದ ಮಂಡಿಸಲೂ ಕಾನೂನು ತಂಡಕ್ಕೆ ಸಲಹೆ ನೀಡಲಾಗಿದೆ.

ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಬೆನ್ನಲ್ಲೇ ತಮಿಳುನಾಡು ತನ್ನ ಪಾಲಿನ ನೀರಿಗೆ ಪಟ್ಟು ಹಿಡಿದಿದ್ದು, ಕಾನೂನಿನ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಿದೆ. ಈ ಸಂಕಷ್ಟದಿಂದ ಪಾರಾಗುವ ಸಲುವಾಗಿ ಸರ್ವಪಕ್ಷಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲರ ಸಲಹೆಗಳನ್ನೂ ಗಂಭೀರವಾಗಿ ಪರಿಗಣಿಸಿ, ನಾಡಿನ ಜನರ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿ ಹಾಗೂ ವಸ್ತುಸ್ಥಿತಿಯನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ಹಾಜರಿದ್ದ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಮೋಹನ್‌ ಕಾತರಕಿ ಹಾಗೂ ಹೈಕೋರ್ಟ್‌ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ಕಾನೂನಿನ ದೃಷ್ಟಿಯಿಂದ ಆಗಿರುವ ಪ್ರಕ್ರಿಯೆಗಳನ್ನು ಪ್ರಸ್ತಾವಿಸಿದರು.

ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ವೀರಪ್ಪ ಮೊಲಿ, ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌, ಎಚ್‌.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸಂಸದರಾದ ಸುಮಲತಾ, ತೇಜಸ್ವಿ ಸೂರ್ಯ  ಇನ್ನಿತರರು  ಅಭಿಪ್ರಾಯಗಳನ್ನು ಮಂಡಿಸಿದರು. ಪ್ರಮುಖವಾಗಿ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಗಳ ಮುಂದೆ ಕರ್ನಾಟಕದ ವಾಸ್ತವ ಸ್ಥಿತಿ ಅರ್ಥ ಮಾಡಿಸುವಲ್ಲಿ ಕಾನೂನು ತಂಡ ಪ್ರಬಲ ವಾದ ಮಂಡಿಸಿಲ್ಲ. 10 ಸಾವಿರ ಕ್ಯುಸೆಕ್‌ ನೀರು ಬಿಡಬೇಕೆಂಬ ಸಮಿತಿಯ ತೀರ್ಮಾನವನ್ನು ಒಪ್ಪಿದ್ದರಿಂದ ನಾಡಿನ ರೈತರ ಹಿತ ಬಲಿ ಕೊಟ್ಟಂತಾಗಿದೆ. ನಾಡಿನ ನೆಲ, ಜಲ, ಭಾಷೆಯ ವಿಚಾರದಲ್ಲಿ ನಾವ್ಯಾರೂ ರಾಜಕೀಯ ಮಾಡುವುದಿಲ್ಲ. ಪ್ರತಿ ಬಾರಿಯಂತೆ ಸಹಕಾರ ಕೊಟ್ಟೇ ಕೊಡುತ್ತೇವೆ. ನೀರು ಬಿಟ್ಟ ಬಳಿಕ ಸರ್ವಪಕ್ಷ ಸಭೆ ಕರೆಯುವ ಬದಲು, ಮೊದಲೇ ಕರೆದು ಸಲಹೆ ಕೇಳಬೇಕಿತ್ತು. ಶುಕ್ರವಾರವಾದರೂ ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾದ ವಾದ ಮಂಡಿಸುವಂತೆ ಸಲಹೆ ನೀಡಿದರು.

ಸಮರ್ಥ ವಾದ

ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾಡಿನ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದೆ. ಪ್ರಾಧಿಕಾರದ ಸಭೆಯಲ್ಲಿ 15 ಸಾವಿರ ಕ್ಯುಸೆಕ್‌ ನೀರು ಬಿಡಬೇಕೆಂಬ ನಿರ್ಣಯ ಆಗಿತ್ತು. ಅಷ್ಟು ನೀರನ್ನು ನಾವು ಕೊಡಲಾಗುವುದಿಲ್ಲ ಎಂದಿದ್ದಕ್ಕೆ ಸಭೆಯಿಂದ ತಮಿಳುನಾಡು ಹೊರ ನಡೆದಿತ್ತು. ನಿಯಂತ್ರಣ ಸಮಿತಿ ಮುಂದೆ ಸಮರ್ಥ ವಾದ ಮಂಡಿಸಿದ್ದರಿಂದ 15 ಸಾವಿರ ಕ್ಯುಸೆಕ್‌ ಬದಲು 10 ಸಾವಿರ ಕ್ಯುಸೆಕ್‌ಗೆ ಇದನ್ನು ಇಳಿಸಿತು. ಅದನ್ನೂ ಮರುಪರಿಶೀಲಿಸುವಂತೆ ಸಮಿತಿ ಮುಂದೆ ಕೇಳಿದ್ದೆವು. ಅಷ್ಟರಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ತ್ರಿಸದಸ್ಯಪೀಠ ರಚನೆಯಾಗಿದೆ. ಶುಕ್ರವಾರ ಅರ್ಜಿ ವಿಚಾರಣೆಗೆ ಬರಲಿದೆ. ರಾಜ್ಯದ ಪರವಾಗಿ ಕಾನೂನು ತಂಡ ಸಮರ್ಥ ವಾದ ಮಂಡಿಸಲಿದೆ. ಈ ವಿಚಾರವೂ ಸಹಿತ ರಾಜ್ಯದ ಇನ್ನಿತರ ನೀರಾವರಿ ಯೋಜನೆಗಳಿಗೂ ಕೇಂದ್ರದ ಸಹಕಾರ ಬೇಕಿರುವುದರಿಂದ ಸರ್ವಪಕ್ಷಗಳ ನಿಯೋಗ ಹೋಗೋಣ, ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು. ಇದಕ್ಕೆ ಎಲ್ಲ ಪಕ್ಷಗಳ ನಾಯಕರೂ ಸರ್ವಾನುಮತದಿಂದ ಸಹಕರಿಸುವುದಾಗಿ ಭರವಸೆ ನೀಡಿದರು.

ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್‌ ಆದೇಶದನ್ವಯ ನೀರಿನ ಹಂಚಿಕೆ

ರಾಜ್ಯ ನ್ಯಾಯಾಧಿಕರಣದ ಹಂಚಿಕೆ ಸುಪ್ರೀಂ ಕೋರ್ಟ್‌ ಹಂಚಿಕೆ (ಟಿಎಂಸಿಗಳಲ್ಲಿ)

ಕರ್ನಾಟಕ 270 284.75 (+14.75)

ತಮಿಳುನಾಡು 419 404.25 (-14.75)

ಕೇರಳ 30 30

ಪುದುಚೇರಿ 7 7

ಪರಿಸರ ರಕ್ಷಣೆಗೆ 10 10

ಅನಿವಾರ್ಯವಾಗಿ ಸಮುದ್ರ ಸೇರುವ ನೀರು 4 4

ಸಂಕಷ್ಟದ ನಡುವೆಯೂ 3 ತಿಂಗಳಲ್ಲಿ ತಮಿಳುನಾಡಿಗೆ ಹರಿದು ನೀರು

ತಿಂಗಳು ಬಿಡಬೇಕಾದ್ದು ಬಿಟ್ಟಿರುವುದು (ಟಿಎಂಸಿಗಳಲ್ಲಿ)

ಜೂನ್‌ 9.19 2.833

ಜುಲೈ 31.24 8.748

ಆಗಸ್ಟ್‌ 45.95 12.475 (ಆ.20ಕ್ಕೆ)

ಒಟ್ಟು 86.38 24.056 (-62.324)

ರಾಜ್ಯ ಸರಕಾರ ಹೇಳಿದ್ದೇನು?

* ಸಾಮಾನ್ಯ ಮಳೆ ವರ್ಷಗಳಲ್ಲಿ ನಿಗದಿತ ನೀರು ಬಿಡಲು ಸಮಸ್ಯೆಯಿಲ್ಲ.

* ರಾಜ್ಯದಲ್ಲಿ ಮಳೆ ಕೊರತೆ ಆಗಿರುವುದರಿಂದ ಸಂಕಷ್ಟ ಸೂತ್ರ ಬೇಕೇ ಬೇಕು.

* ತಮಿಳುನಾಡು ಸಲ್ಲಿಸಿರುವ ಅರ್ಜಿ ವಜಾಕ್ಕೆ ಸುಪ್ರೀಂ ಮುಂದೆ ಮನವಿ.

* ಕಾವೇರಿ ನೀರು ನಿರ್ವಹಣ ಪ್ರಾಧಿಕಾರ, ನಿಯಂತ್ರಣ ಸಮಿತಿಗಳ ಮುಂದೆಯೇ ಬಿಕ್ಕಟ್ಟು ಇತ್ಯರ್ಥಕ್ಕೆ ಯತ್ನ.

* ಸರ್ವಪಕ್ಷ ನಿಯೋಗ ಭೇಟಿಗಾಗಿ ಪ್ರಧಾನಿ ಮೋದಿ, ಜಲಶಕ್ತಿ ಸಚಿವರ ಕಾಲಾವಕಾಶ ಕೇಳಲು ಸರ್ವಾನುಮತದ ನಿರ್ಣಯ.

* ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಿದರೆ, ಸಂಗ್ರಹವಾಗುವ ನೀರನ್ನು ತಮಿಳುನಾಡಿಗೂ ಬಿಡಲು ಅನುಕೂಲ.

* ಕಳಸಾ-ಬಂಡೂರಿ ನಾಲೆ ಜೋಡಣೆಗೆ ಅಗತ್ಯ ಪರಿಸರ ತೀರುವಳಿಗೆ ಬೇಡಿಕೆ ಸಲ್ಲಿಕೆ.

* ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಸೂಚನೆ ಪ್ರಕಟಿಸಲು ಕೇಂದ್ರಕ್ಕೆ ಮನವಿ.

ವಿಪಕ್ಷಗಳ ಸಲಹೆ ಏನು?

* ನೀರು ನಿರ್ವಹಣ ಪ್ರಾಧಿಕಾರ, ನಿಯಂತ್ರಣ ಸಮಿತಿಯಲ್ಲಿ ಸಮರ್ಥ ವಾದ ಮಂಡಿಸಬೇಕಿತ್ತು.

* ರಾಜ್ಯದಲ್ಲಿರುವ ಸಂಕಷ್ಟ ಸ್ಥಿತಿಯನ್ನು ಅರ್ಥೈಸಿ, ನೀರು ಬಿಡಲು ಸಾಧ್ಯವೇ ಇಲ್ಲ ಎನ್ನಬೇಕಿತ್ತು.

* ಪ್ರಾಧಿಕಾರ, ಸಮಿತಿಗಳ ಮುಂದೆ ವಿಷಯ ಬಂದಾಗಲೇ ಸರ್ವಪಕ್ಷ ಸಭೆ ಕರೆದು ಸಲಹೆ ಪಡೆದುಕೊಳ್ಳಬೇಕಿತ್ತು.

* ನೀರು ಬಿಡಲು ಆಗುವುದಿಲ್ಲ ಎಂದು ಪ್ರಾಧಿಕಾರದ ಮುಂದೆ ಹೇಳಿ, ತಮಿಳುನಾಡಿಗೆ ನೀರು ಬಿಟ್ಟ ತಪ್ಪನ್ನು ಒಪ್ಪಿಕೊಳ್ಳಿ.

* ನಾಡಿನ ನೆಲ, ಜಲ, ಭಾಷೆಯ ವಿಚಾರದಲ್ಲಿ ನಾವ್ಯಾರೂ ಎಂದಿಗೂ ರಾಜಕೀಯ ಮಾಡುವುದಿಲ್ಲ, ಸಹಕಾರ ಕೊಟ್ಟೇ ಕೊಡುತ್ತೇವೆ.

* ಶುಕ್ರವಾರದಂದು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡನೆ ಆಗಬೇಕು, ತಮಿಳುನಾಡಿನ ಅರ್ಜಿ ವಜಾ ಆಗುವಂತೆ ನೋಡಿಕೊಳ್ಳಬೇಕು.

* ಸರ್ವಪಕ್ಷಗಳ ನಿಯೋಗ ಭೇಟಿಯ ದಿನಾಂಕ ನಿಗದಿಪಡಿಸಿ ತಿಳಿಸಿ, ನಾವೂ ಬರುತ್ತೇವೆ. ಅಗತ್ಯ ಸಹಕಾರ ಕೊಡುತ್ತೇವೆ.

ರಾಜ್ಯದ ಜಲ, ಭಾಷೆ, ಗಡಿ ವಿವಾದಗಳು ಬಂದಾಗ ರಾಜ್ಯ ಸರಕಾರ ತೆಗೆದುಕೊಳ್ಳುವ ಜನಹಿತ ನಿಲುವುಗಳಿಗೆ ಬೆಂಬಲಿಸುವುದಾಗಿ ಎಲ್ಲ ಪಕ್ಷದವರೂ ಹೇಳಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ಸದ್ಯದಲ್ಲೇ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಎಲ್ಲರೂ ಒಪ್ಪಿದ್ದಾರೆ. ನಾಡಿನ ಹಿತ ಕಾಪಾಡಲು ನಮ್ಮ ಸರಕಾರ ಬದ್ಧವಾಗಿದೆ.

– ಸಿದ್ದರಾಮಯ್ಯ, ಮುಖ್ಯಮಂತ್ರಿ

ಕಾವೇರಿ ನೀರಿನ ವಿಚಾರವಾಗಿ ನಮ್ಮ ರಾಜ್ಯದ ಹಿತ ಕಾಪಾಡಲು ಕಾಂಗ್ರೆಸ್‌ ಸರಕಾರ ಸದಾ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ ಅನ್ನೂ ಗೌರವಿಸುತ್ತೇವೆ. ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಹಾಗೂ ಒಳಹರಿವು ಕುಸಿದಿದೆ. ಸಂಕಷ್ಟದ ಸ್ಥಿತಿಯನ್ನು ಕೋರ್ಟ್‌ಗೆ ವಿವರಿಸುತ್ತೇವೆ.

– ಡಿ.ಕೆ. ಶಿವಕುಮಾರ್‌, ಡಿಸಿಎಂ

ನಮ್ಮ ನಾಡಿನ ನೆಲ, ಜಲ, ಭಾಷೆಯಂತಹ ಸೂಕ್ಷ್ಮ ವಿಚಾರಗಳು ಬಂದಾಗ ವಿಪಕ್ಷಗಳು ಮಾತನಾಡದೆ ಮೌನವಾಗಿರಲು ಸಾಧ್ಯವಿಲ್ಲ. ನೀರು ಹರಿಸುವ ಮುನ್ನ ಸರ್ವಪಕ್ಷ ಸಭೆ ನಡೆಸಬೇಕಿತ್ತು. ನೀವು ನೀರು ಹರಿಸುತ್ತಿದ್ದೀರಿ, ರೈತರು ಪ್ರತಿಭಟಿಸುತ್ತಿದ್ದಾರೆ. ಏನು ಸಮಜಾಯಿಷಿ ನೀಡುತ್ತೀರಿ?

– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ತಮಿಳುನಾಡಿಗೆ ನೀರು ಬಿಟ್ಟು ಸರ್ವಪಕ್ಷ ಸಭೆ ಕರೆದಿದ್ದು ಸರಿಯಲ್ಲ. ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕು. ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿಸಬೇಕು.

– ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಿಎಂ

ತಮಿಳುನಾಡಿಗೆ ನೀರು ಬಿಟ್ಟು ಮೊದಲ ಹಂತದಲ್ಲೇ ಸರಕಾರ ಎಡವಿದೆ. ಮಾಡಿದ ತಪ್ಪನ್ನು ಸರಕಾರ ಒಪ್ಪಿಕೊಳ್ಳುತ್ತಿಲ್ಲ. ಸುಪ್ರೀಂ ಕೋರ್ಟ್‌ಗೆ ವಸ್ತುಸ್ಥಿತಿ ತಿಳಿಸುವಂತೆ ಹೇಳಿದ್ದೇವೆ. ನೆಲ, ಜಲದ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ.

– ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

ಕಾವೇರಿ ಜಲವಿವಾದ ಇಂದು-ನಿನ್ನೆಯದಲ್ಲ. ಇಷ್ಟು ವರ್ಷವಾದರೂ ಸಮಸ್ಯೆ ಬಗೆಹರಿದಿಲ್ಲ ಎಂದರೆ ಹೇಗೆ? ಇದಕ್ಕೊಂದು ಶಾಶ್ವತ ಪರಿಹಾರ ಸಿಗಲೇಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವಂತೆ ಸರಕಾರಕ್ಕೆ ಸಲಹೆ ನೀಡಿದ್ದೇವೆ.

– ಸುಮಲತಾ, ಮಂಡ್ಯ ಸಂಸದೆ

 

ಟಾಪ್ ನ್ಯೂಸ್

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.