ಬಾಕಿ ಬಿಡುಗಡೆಗೆ ಗುತ್ತಿಗೆದಾರರ ಗಡು; ಕಾಲಮಿತಿ ನಿಗದಿಪಡಿಸಿಸಲು ಅಧ್ಯಕ್ಷ ಕೆಂಪಣ್ಣ ಆಗ್ರಹ
Team Udayavani, Mar 6, 2024, 12:10 AM IST
ಬೆಂಗಳೂರು: ಗುತ್ತಿಗೆದಾ ರರ ಬಾಕಿ ಹಣ ಬಿಡುಗಡೆಗೆ ಕಾಲಮಿತಿ ನಿಗದಿಪಡಿಸಿ ಮುಂದಿನ 15 ದಿನದೊಳಗೆ ತಿಳಿಸಬೇಕು. ಇಲ್ಲದಿದ್ದರೆ ಸರಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ಹಲವು ಗುತ್ತಿಗೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಕರ್ನಾಟಕ ಗುತ್ತಿಗೆದಾರರ ರಾಜ್ಯ ಮಟ್ಟದ ಸಮ್ಮೇಳನದ ಸಮಾರೋಪದಲ್ಲಿ ಹಿರಿಯ ಗುತ್ತಿಗೆದಾರರನ್ನು ಸಮ್ಮಾನಿಸಿದ ಬಳಿಕ ಅವರು”ಉದಯವಾಣಿ’ ಜತೆ ಮಾತನಾಡಿ ದರು.ಗುತ್ತಿಗೆದಾರರ ಬಾಕಿ ಪಾವತಿ ಹಂತ-ಹಂತವಾಗಿ ಕೊಡುತ್ತೇನೆ. ಒಂದೇ ಸಲಕೊಡಲು ಆಗುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಂತ-ಹಂತವಾಗಿ ಕೊಡುವುದಾಗಿ ಹೇಳಿ 3 ವರ್ಷಗಳಷ್ಟು ದೀರ್ಘವಾಗಿ ಸಮಯ ತೆಗೆದುಕೊಳ್ಳುವುದು ಬೇಡ. ಇದಕ್ಕೆ ಇಂತಿಷ್ಟು ಕಾಲಮಿತಿ ನಿಗದಿಪಡಿಸಿ ಎಂದು ನಾವು ತಿಳಿಸಿದೆವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ. ಕಾಲಮಿತಿ ನಿಗದಿಪಡಿಸಿ ಸರಕಾರವು ಸೂಕ್ತ ನಿಲುವು ತೆಗೆದುಕೊಳ್ಳದಿದ್ದರೆ ಕೆಲಸ ಅರ್ಧಕ್ಕೆ ನಿಲ್ಲಿಸಿ ಹೋರಾಟ ನಡೆಸುವುದಾಗಿ ಹಲವು ಗುತ್ತಿಗೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲಸ ನಿಲ್ಲಿಸುವುದುಅಷ್ಟು ಸುಲಭವಲ್ಲ. ಇದರಿಂದ ಹಲವು ಕಾರ್ಮಿಕರಿಗೆ ಸಮಸ್ಯೆಯಾಗುತ್ತದೆ ಎಂದು ಡಿ.ಕೆಂಪಣ್ಣ ತಿಳಿಸಿದರು. ಹೊಸದಾಗಿ ಗುತ್ತಿಗೆಯಲ್ಲಿ ಪ್ಯಾಕೇಜ್ ಪದ್ಧತಿ ತಂದರೆ ಪ್ರತಿಭಟನೆ ನಡೆಸಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ಪ್ಯಾಕೇಜ್ ಗುತ್ತಿಗೆಯಿಂದ ಸಾಕಷ್ಟು ಸಣ್ಣ-ಪುಟ್ಟ ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗುತ್ತಿದೆ ಎಂದು ವಿವರಿಸಿದರು.
ಸಿಎಂ ವಿರುದ್ಧ ಗುತ್ತಿಗೆದಾರರ ಅಸಮಾಧಾನ
ಸೋಮವಾರ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುತ್ತಿಗೆದಾರರಿಗೆ ಯಾವುದೇ ಆಶ್ವಾಸನೆಯನ್ನೇ ಕೊಡಲಿಲ್ಲ ಎಂದು ಮಂಗಳವಾರ ಸಮಾವೇಶದಲ್ಲಿ ಭಾಗಿಯಾಗಿದ್ದ ಹಲವು ಗುತ್ತಿಗೆದಾರರು ಕೆಂಪಣ್ಣ ಬಳಿ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಂಪಣ್ಣ, ಗುತ್ತಿಗೆದಾರರ ಬಾಕಿ ಹಣ ನೀಡಲು ಸರಕಾರವು ಎರಡು ವರ್ಷ ತಡಮಾಡಿದರೆ ಅದಕ್ಕೆ ತಕ್ಕುದಾಗಿ ಬಡ್ಡಿ ಕೊಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.